ತಿರುವನಂತಪುರ: ಸೆಕ್ರೆಟರಿಯಟ್ ನ ಪ್ರಮುಖ ಆಡಳಿತಾತ್ಮಕ ವಿಭಾಗದಲ್ಲಿ ಎರಡು ತಿಂಗಳ ಹಿಂದೆ ಉಂಟಾದ ಶಾರ್ಟ್ ಸಕ್ರ್ಯೂಟ್ ಘಟನೆಗೆ ಸಂಬಂಧಿಸಿ ಪೂರ್ವಯೋಜಿತ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಅಂತಿಮ ವಿಧಿವಿಜ್ಞಾನ ವರದಿಯಲ್ಲಿ ಹೇಳಲಾಗಿದೆ. ಬೆಂಕಿ ಉಂಟಾದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಎರಡು ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂದು ಖಚಿತಪಡಿಸಲಾಗಿದೆ.
ಶಾರ್ಟ್ ಸಕ್ರ್ಯೂಟ್ ನ ಸಾಧ್ಯತೆಯನ್ನು ಕಂಡುಹಿಡಿಯಲಾಗಿಲ್ಲ ಎಂದು ವಿಧಿವಿಜ್ಞಾನ ವರದಿ ಹೇಳುತ್ತದೆ. ಫ್ಯಾನ್ ಕರಟಿ ಹೋಗಲು ಕಾರಣವೂ ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಫೈಲ್‍ಗಳು ಸುಟ್ಟುಹೋಗಿರುವ ಪ್ರಕರಣದ ಸುತ್ತಲಿನ ರಹಸ್ಯ ಹಾಗೆಯೇ ಉಳಿದಿದೆ. ಫೆÇೀರೆನ್ಸಿಕ್ ವರದಿಯು ಬೆಂಕಿ ಕಾಣೀಸಿಕೊಂಡಿದ್ದ ಸೆಕ್ರಟರಿಯೇಟ್ ನ ಅತಿ ಮಹತ್ವದ ಕಡತಗಳ ವಿಭಾಗದಲ್ಲಿ ಎರಡು ಆಲ್ಕೋಹಾಲ್ ಬಾಟಲಿಗಳನ್ನಷ್ಟೇ ಗುರುತಿಸಿದೆ. ಮತ್ತು ಎರಡೂ ಬಾಟಲಿಗಳಲ್ಲಿ ಮದ್ಯದ ಕುರುಹುಗಳು ಕಂಡುಬಂದಿದೆ ಎಂದು ಉಲ್ಲೇಖಿಸಿದೆ.