ಕೋಝಿಕ್ಕೋಡ್: ಮುಂಬರುವ ಸ್ಥಳೀಯಾಡಳಿತ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ, ಮಲಬಾರ್‍ನ ಸಾಮಾನ್ಯ ಅಗತ್ಯಗಳನ್ನು ಕೇಂದ್ರ ಮತ್ತು ಕೇರಳ ಆಡಳಿತ ಮತ್ತು ಪ್ರತಿಪಕ್ಷ ರಂಗಗಳಿಗೆ ಆದ್ಯತೆಯ ದೃಷ್ಟಿಯಿಂದ ಸಮನ್ವಯಗೊಳಿಸಿ ಸಿದ್ಧಪಡಿಸಲಾಗಿದೆ. ಮಲಬಾರ್ ಡೆವೆಲಪ್ಮೆಂಟ್ ಕೌನ್ಸಿಲ್ ರಕ್ಷಾಧಿಕಾರಿ ಡಾ.ಎ.ವಿ.ಅನೂಪ್, ಅಧ್ಯಕ್ಷ ಶೇವಲಿಯರ್ ಸಿ.ಇ. ಚಕ್ಕುಣ್ಣಿ, ಪ್ರಧಾನ ಕಾರ್ಯದರ್ಶಿ ಎಂ.ಕೆ. ಅಯ್ಯಪ್ಪನ್, ಕಾರ್ಯದರ್ಶಿ ಪಿ. ಐ. ಅಜಯನ್, ಖಜಾಂಚಿ ಎಂ.ವಿ. ಕುಂಞಮು ಸಲ್ಲಿಸಿದ್ದಾರೆ.
ಮಲಬಾರ್ ಜಿಲ್ಲೆಗಳಿಗೆ ಅರ್ಹ ಪರಿಗಣನೆಯೂ, ದಶಕಗಳಿಂದ ಅನುಭವಿಸುತ್ತಿರುವ ಹಿಂದುಳಿಯುವಿಕೆಗಳಿಗೆ ಪರಿಹಾರೋಪಾಯ ಸಿದ್ದಪಡಿಸಲು ರಾಜ್ಯ ವಿಧಾನ ಸಭಾ ಸೆಕ್ರಟರಿಯೇಟ್(ಸಚಿವಾಲಯ) ಅನೆಕ್ಸ್, ಹೈಕೋರ್ಟ್ ಬೆಂಚ್, ಏಮ್ಸ್ ಎಂಬವುಗಳ ಸಂಯುಕ್ತ ಘಟಕ ಮಲಬಾರ್ ಡೆವೆಲಪ್ಮೆಂಟ್ ಕೌನ್ಸಿಲ್ ಎಂಬ ವಿಭಾಗ ಸ್ಥಾಪಿಸಲಾಗಿದೆ.
ಮಲಪರಂಬಿಲ್‍ನಲ್ಲಿ ಮೊಬಿಲಿಟಿ ಹಬ್ ನಿರ್ಮಾಣ ಅಥವಾ ಫಿಲ್ಮ್ ಸಿಟಿ, ಎರ್ನಾಕುಳಂ ವೈಟಿಲಾ ಮಾದರಿಯಲ್ಲಿ ಮಲಪರಂಬಿಲ್ ನಲ್ಲಿ ಮೊಬಿಸಿಟಿ ಹಬ್ ನಿರ್ಮಾಣ, ಫೆರೂಕ್ ನಲ್ಲಿ ಹಂಚು ನಿರ್ಮಾಣ ಕಾರ್ಖಾನೆ, ಕಾಮನ್ ವೆಲ್ತ್, ಮತ್ತು ಮಲಬಾರ್‍ನ ಇತರ ಕೈಗಾರಿಕೆಗಳ ಪುನರುಜ್ಜೀವನ ಮೊದಲಾದವುಗಳು ಕೌನ್ಸಿಲ್ ನ ಪ್ರಮುಖ ನಿರ್ದೇಶನಗಳಾಗಿವೆ.
ಕೋಝಿಕ್ಕೋಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಅಗತ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು, ದೊಡ್ಡ ವಾಯು ಸೇವೆಗಳ ಪ್ರಾರಂಭ, ಕೃಷಿ ರಫ್ತು ಮತ್ತು ಆಮದುಗಳ ಪುಷ್ಟೀಕರಣ, ಸ್ಥಗಿತಗೊಂಡ ಸರಕು ವಾಯು ಸೇವೆಗಳನ್ನು ಪ್ರಾರಂಭಿಸುವುದು ಮತ್ತು ಕೋಝಿಕ್ಕೋಡ್ ನಲ್ಲಿ ಹಜ್ ನಿರ್ಗಮನ ಕೇಂದ್ರದ ನಿರ್ವಹಣೆ ಯೋಜನೆಯಲ್ಲಿದೆ.
ಕೇರಳದ ಪ್ರವಾಸೋದ್ಯಮ ಪಟ್ಟಿ ಮತ್ತು ಅಭಿಯಾನಗಳಲ್ಲಿ ವಯನಾಡ್ ಸೇರಿದಂತೆ ಪ್ರವಾಸಿ ತಾಣಗಳನ್ನು ಸೇರಿಸಿ ಮಲಬಾರ್ ಟ್ರಾವೆಲ್ ಮಾರ್ಟ್ ಅನ್ನು ಮರುಪ್ರಾರಂಭಿಸುವುದು, ಚಲನಚಿತ್ರ ಪ್ರಶಸ್ತಿಗಳು ಮತ್ತು ಚಲನಚಿತ್ರೋತ್ಸವಗಳನ್ನು ಪರ್ಯಾಯವಾಗಿ ಮಲಬಾರ್‍ನ ಜಿಲ್ಲಾ ಕೇಂದ್ರದಲ್ಲಿ ನಡೆಸುವುದು ತಂಡದ ಲಕ್ಷ್ಯದಲ್ಲಿದೆ.
ಫೆರೂಕ್ - ಅಂಗಡಿಪುರಂ (ವಿಮಾನ ನಿಲ್ದಾಣದ ಮೂಲಕ), ನಂಜನಗೂಡು- ನೀಲಂಬೂರು, ತಿರುನವಾಯಾ - ಗುರುವಾಯೂರ್, ಶೋರ್ನೂರ್ - ಮಂಗಳೂರು ಮೂರನೇ ರೈಲ್ವೆ ಮಾರ್ಗ, ಮಲಬಾರ್‍ಗೆ ಹೆಚ್ಚಿನ ಕೆಎಸ್‍ಆರ್‍ಟಿಸಿ ಬಸ್‍ಗಳ ಹಂಚಿಕೆ, ಶೋರ್ನೂರ್ - ಕಣ್ಣೂರು - ಮಂಗಳೂರು ಮೆಮು ಸೇವೆ, ತಿರುವನಂತಪುರ -ಕಾಸರಗೋಡು ವೇಗದ ರಸ್ತೆ, - ಸರಕು ನೀರು ಸಾಗಣೆ ಪ್ರಾರಂಭ ಮತ್ತು ಪೆÇನ್ನಾನಿ-ತಿರೂರ್-ಫೆರೂಕ್-ಮಾವೂರ್-ಅರಿಕೋಡ್ ದೋಣಿ ಸೇವೆಯನ್ನು ಪುನರಾರಂಭಿಸುವುದು ಮೊದಲಾದವುಗಳೂ ಮುಂಬರುವ ಯೋಜನೆಯಲ್ಲಿದೆ.
ಮಲಬಾರ್‍ನ ಪ್ರಧಾನ ಕೇಂದ್ರವಾದ ಕೋಝಿಕ್ಕೋಡ್ ನ ವಾಣಿಜ್ಯ ವೈಭವವನ್ನು ಪುನಃಸ್ಥಾಪಿಸಿ, ತಿರುವನಂತಪುರಂ ಮತ್ತು ಕೊಚ್ಚಿ ಪ್ರದೇಶಕ್ಕೆ ಮಾತ್ರವಲ್ಲದೆ ಮಲಬಾರ್ ಜಿಲ್ಲೆಗಳಿಗೂ ಎಲ್ಲಾ ಅಭಿವೃದ್ಧಿಯನ್ನು ವಿಕೇಂದ್ರೀಕರಿಸಿ ಮಂಗಳೂರು-ಕೊಚ್ಚಿ ರೋ-ರೋ ರೈಲು ಪ್ರಾರಂಭಿಸುವುದು ಪ್ರಮುಖ ಲಕ್ಷ್ಯದಲ್ಲಿದೆ.
ಮಲಬಾರ್‍ನಲ್ಲಿ ರಸ್ತೆಗಳನ್ನು ಅಗಲಗೊಳಿಸುವುದು, ಹಳೆಯ ಸೇತುವೆಗಳನ್ನು ಅಗಲಗೊಳಿಸುವುದು ಮತ್ತು ದುರಸ್ತಿ ಮಾಡುವುದು ಹಾಗೂ ಅವುಗಳನ್ನು ಉತ್ತಮವಾಗಿ ನಿರ್ವಹಿಸುವುದು, ವೃತ್ತಾಕಾರದ ಬಸ್, ದ್ವಿಚಕ್ರ ವಾಹನ ಟ್ಯಾಕ್ಸಿ ಮತ್ತು ಆಟೋ ಮಿನಿಬಸ್ ಸೇವೆಯನ್ನು ಮಲಬಾರ್‍ನ ಜನನಿಬಿಡ ನಗರಗಳಲ್ಲಿ ಪ್ರಾರಂಭಿಸುವುದು, ಬೈಸಿಕಲ್ ಪ್ರಯಾಣವನ್ನು ಸುರಕ್ಷಿತಗೊಳಿಸುವುದು, ವಿಶೇಷ ರಸ್ತೆಗಳನ್ನು ನಿರ್ಮಿಸುವುದು ಮತ್ತು ಪ್ರಚಾರ ಮಾಡುವುದು ಹಾಗೂ ಬೈಸಿಕಲ್‍ಗಳ ಮೇಲಿನ ತೆರಿಗೆಯನ್ನು ನಿಯಂತ್ರಿಸುವುದು, ಬೀದಿಗಳು ಮತ್ತು ವಾಣಿಜ್ಯ ಕೇಂದ್ರಗಳ ಜನ ಪ್ರವಾಹವನ್ನು ತಪ್ಪಿಸಲು ಒಳಚರಂಡಿ ಯೋಜನೆಗಳನ್ನು ಪೂರ್ಣಗೊಳಿಸುವುದು, ಬಿಡುವಿಲ್ಲದ ಜಂಕ್ಷನ್‍ಗಳಲ್ಲಿ ಅಂಡರ್‍ಪಾಸ್‍ಗಳು / ಓವರ್‍ಪಾಸ್‍ಗಳ ನಿರ್ಮಾಣ, ವಯನಾಡ್ ಸುರಂಗ ಮತ್ತು ಕೇಬಲ್ ಕಾರ್ ಯೋಜನೆಗಳನ್ನು ಪೂರ್ಣಗೊಳಿಸುವುದು, ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೆಎಸ್‍ಆರ್‍ಟಿಸಿ ಬಸ್ ಟರ್ಮಿನಲ್‍ಗಳ ಸಂಪೂರ್ಣ ಬಳಕೆ, ಸಾರ್ವಜನಿಕ ಸ್ಥಳಗಳು ಮತ್ತು ಪ್ರವಾಸಿ ಕೇಂದ್ರಗಳ ನೈರ್ಮಲ್ಯ, ಆಲಪುಳ ಮಾದರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಕೋವಿಡ್ ನಂತರದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಡಿಮೆ ವೆಚ್ಚದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಕೈಗೆಟುಕುವ ವಸತಿ, ಆಹಾರ ಮತ್ತು ಪ್ರಯಾಣ ಸೌಲಭ್ಯಗಳನ್ನು ಒದಗಿಸಲು ಪಯ್ಯನ್ನೂರು ಬಳಿಯ ಹೌಸ್ ಬೋಟ್ ಜೆಟ್ಟಿ ಸೌಲಭ್ಯಗಳನ್ನು ವಿಸ್ತರಿಸಲು ಯೋಜನೆಯಲ್ಲಿ ಕೋರಲಾಗಿದೆ.