ಬದಿಯಡ್ಕ:ಬದಿಯಡ್ಕ ಮೇಲಿನ ಪೇಟೆಯ 'ಪಳ್ಳಿಕಂಡ' ಕಟ್ಟಡದಲ್ಲಿ ಹಣಕಾಸು ವಿಷಯದಲ್ಲಿ ಉನ್ನತ ವಿದ್ಯಾಭ್ಯಾಸಗೈದ ಶ್ರೀ ಕೃಷ್ಣ ಪ್ರತೀಕ,ಬೆಳ್ಳಿಗೆ ಇವರ 'ವಿತ್ತ' ,ಹಣಕಾಸು,ಲೆಕ್ಕಪತ್ರ ಮತ್ತು ತೆರಿಗೆ ಸಲಹಾ ಸಂಸ್ಥೆ ಯನ್ನು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ಟರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿರಿಯ ಲೆಕ್ಕ ಪರಿಶೋಧಕ ಶ್ರೀ ವೆಂಕಟಗಿರೀಶ ಪಟ್ಟಾಜೆ,ಶ್ರೀ ಭಾರತೀ ವಿದ್ಯಾಪೀಠ ಶಾಲೆಯ ಆಡಳಿತ ಮುಖ್ಯ ಸ್ಥ ಜಯಪ್ರಕಾಶ್ ಪಜಿಲ,ಗುರಿಕ್ಕಾರರು ಕಲಾವಿದರಾದ ಅಂಬೆಮೂಲೆ ಶಿವರಾಮ ಭಟ್ಟ,ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಂದಾಳು ಎಸ್.ಎನ್.ಮಯ್ಯ, ಡಾ.ವೈ.ವಿ.ಕೃಷ್ಣಮೂರ್ತಿ,ಶಾಂತಾರಾಮ ನೈತಾಡಿ,ಉರಿಮಜಲು,ಕಲಾವಿದ ವೆಂಕಟ ಭಟ್ ಎಡನೀರು,ನಿವೃತ್ತ ಅಧ್ಯಾಪಕ ಈಂದುಗುಳಿ ವೆಂಕಟ್ರಮಣ ಭಟ್,ವಳಕ್ಕುಂಜ ಸುಬ್ರಹ್ಮಣ್ಯ ಭಟ್,ಚಂದ್ರಶೇಖರ್ ಏತಡ್ಕ ಮುಂತಾದ ಮಹನೀಯರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಈಸಂದರ್ಭದಲ್ಲಿ ಗೋಕರ್ಣದಲ್ಲಿ ಕಾರ್ಯರಂಭವಾಗಿರುವ ಶ್ರೀ ರಾಮಚಂದ್ರಾಪುರ ಮಠದ ಸಂಸ್ಥೆ 'ವಿಷ್ಣು ಗುಪ್ತ ವಿಶ್ವವಿದ್ಯಾಲಯ' ಕ್ಕೆ ಬದಿಯಡ್ಕ ನಿರ್ಮಾಣ್ ಕನ್ಸಲ್ಟೆನ್ಸೀ ಸಂಸ್ಥೆಯ ಶ್ರೀ ಕೆ.ಎನ್.ಭಟ್ ಅವರು 'ಡೆಸ್ಕ್ ಪ್ರಯೋಜಕತ್ವ'ದ ದೇಣಿಗೆಯನ್ನು ಗುರಿಕಾರ ಶ್ರೀ ಅಂಬೆಮೂಲೆ ಶಿವರಾಮ ಭಟ್ಟರಿಗೆ ಹಸ್ತಾಂತರಿಸಿದರು.ಕಾರ್ಯಕ್ರಮವು ಗಣಪತಿ ಹವನದ ಮೂಲಕ ಆರಂಭವಾಗಿ ಸಭಾ ಕಾರ್ಯಕ್ರಮದಲ್ಲಿ *ವಿತ್ತ* ಸಂಸ್ಥೆಯ ಮುಖ್ಯಸ್ಥ ಶ್ರೀ ಕೃಷ್ಣ ಪ್ರತೀಕರು ವಂದನಾರ್ಪಣೆಗೈದರು.