ಕಾಸರಗೋಡು: ಕೋವಿಡ್ 19 ಸೋಂಕು ಹರಡುತ್ತಿರುವ ಮುಗ್ಗಟ್ಟಿನ ಅವಧಿಯಲ್ಲಿ ಸಂಕಷ್ಟದಲ್ಲಿರುವ ನಿತ್ಯ ಪೂಜಾದಿ ವಿಧಿ ವಿಧಾನಗಳಿಗೆ ತ್ರಾಸವಾಗುತ್ತಿರುವ ಮಲಬಾರ್ ದೇವಸ್ವಂ ಬೋರ್ಡ್ ವ್ಯಾಪ್ತಿಯ ಸಿ.ಡಿ. ಗ್ರೇಡ್ ನಲ್ಲಿ ಸೇರಿರುವ ದೇವಾಲಯಗಳಿಗೆ ನಿತ್ಯ ಪೂಜೆ ಅಗತ್ಯಗಳಿಗೆ ಏಕಕಂತಿನ ಆರ್ಥಿಕ ಸಹಾಯ ರೂಪದಲ್ಲಿ 10 ಸಾವಿರ ರೂ. ನೀಡಲಾಗುವುದು.
ಕಾಸರಗೋಡು ವಿಬಾಗದ ಅರ್ಹ ದೇವಾಲಯಗಳ ಪದಾಧಿಕಾರಿಗಳಿಂದ ಈ ಸಂಬಂಧ ಅರ್ಜಿ ಕೋರಲಾಗಿದೆ. ನ.30ರ ಮುಂಚಿತವಾಗಿ ನೀಲೇಶ್ವರದಲ್ಲಿರುವ ಮಲಬಾರ್ ದೇವಸ್ವಂ ಬೋರ್ಡ್ ಸಹಾಯಕ ಕಮೀಷನರ್ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಫಾರಂ ಮತ್ತು ಮಾಹಿತಿಗಾಗಿ ನೀಲೇಶ್ವರ ಲೇಬರ್ ದೇವಸ್ವಂ ಬೋರ್ಡ್ ಸಹಾಯಕ ಕಮೀಷನರ್ ಅವರ ಕಚೇರಿಯನ್ನು ಯಾ malabardevaswom.kerala.gov.in ನ್ನು ಸಂಪರ್ಕಿಸಬಹುದು.