ಕೊಚ್ಚಿ: ರಾಜ್ಯ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಕಸ್ಟಮ್ಸ್ ಇಲಾಖೆಯಿಂದ ಸೋಮವಾರ ಆರೂವರೆ ಗಂಟೆಗಳ ವಿಚಾರಣೆ ಎದುರಿಸಿದರು. ಅವರು ಕಸ್ಟಮ್ಸ್ ಕಚೇರಿಯಿಂದ ಅಧಿಕೃತ ವಾಹನದಲ್ಲಿ ಮರಳಿದರೆಂದು ವರದಿಯಾಗಿದೆ.
ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ಸಚಿವರು ನಿನ್ನೆ ಮಧ್ಯಾಹ್ನ ಕೊಚ್ಚಿಯ ಕಸ್ಟಮ್ಸ್ ಕಚೇರಿಗೆ ವಿಚಾರಣೆಗಾಗಿ ತೆರಳಿದ್ದರು. ವಿಚಾರಣಾ ತಂಡವು ವಿಶೇಷವಾಗಿ ಸಿದ್ಧಪಡಿಸಿದ ಪ್ರಶ್ನಾವಳಿಯ ಮೂಲಕ ಸಚಿವರಿಂದ ಹೇಳಿಕೆಗಳನ್ನು ಸಂಗ್ರಹಿಸಿತು.
ಧಾರ್ಮಿಕ ಪುಸ್ತಕಗಳನ್ನು ವಿತರಿಸಿದ ಸಂಬಂಧ ಕಸ್ಟಮ್ಸ್ನಿಂದ ಸಚಿವರನ್ನು ಕರೆಸಲಾಗಿದ್ದರೂ, ತಿರುವನಂತಪುರ ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್, ದೂರವಾಣಿ ಸಂಭಾಷಣೆ, ದೂತಾವಾಸದೊಂದಿಗಿನ ಮಾಹಿತಿ, ಆಹಾರ ಕಿಟ್‍ಗಳ ವಿತರಣೆ ಮತ್ತು ಖರ್ಜೂರ ಹಣ್ಣುಗಳ ವಿತರಣೆ ಕುರಿತು ಕಸ್ಟಮ್ಸ್ ಜಲೀಲ್ ಅವರಿಂದ ಮಾಹಿತಿ ಕೋರಿದೆ ಎಂದು ವರದಿಯಾಗಿದೆ.