ಕಾಸರಗೋಡು: ಕಣ್ಣೂರು ಕಯರ್ ಪ್ರಾಜೆಕ್ಟ್ ವ್ಯಾಪ್ತಿಯ ಚೆರುವತ್ತೂರು ಕಯರ್ ಉದ್ದಿಮೆ ಸಹಕಾರಿ ಸಂಘಕ್ಕೆ ರಾಜ್ಯ ಸರಕಾರ ಮಂಜೂರು ಮಾಡಿರುವ ಆಟೋಮೆಟಿಕ್ ಸ್ಪಿನ್ನಿಂಗ್ ಮೆಷಿನ್‍ಗಳ ಚಟುವಟಿಕೆಗಳ ಉದ್ಘಾಟನೆ ಜರಗಿತು.
ವೀಡಿಯೋ ಕಾನರೆನ್ಸ್ ಮೂಲಕ ಹಣಕಾಸು ಸಚಿವ ಡಾ.ಟಿ.ಎಂ.ಥಾಮಸ್ ಐಸಕ್ ಚಾಲನೆ ನೀಡಿದರು. ಒಂದು ಸಾವಿರ ಆಟೋಮೆಟಿಕ್ ಸ್ಪಿನ್ನಿಂಗ್ ಮೆಷಿನ್‍ಗಳು 100 ಕಯರ್ ಸಂಘಗಳಿಗೆ ಒದಗಿಸಲಾಗಿದೆ. ಇದರ ಅಂಗವಾಗಿ ಚೆರುವತ್ತೂರು ಸಹಕಾರಿ ಸಂಘಕ್ಕೂ ಯಂತ್ರಗಳು ಲಭಿಸಿವೆ.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದು, ಸ್ವಿಚ್ ಆನ್ ನಡೆಸಿದರು. ಕಯರ್ ನಿರ್ದೇಶಕರ ಹೊಣೆಯಿರುವ ಕೆ.ಎಸ್.ಪ್ರದೀಪ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಸಹಕಾರಿ ಸಂಘ ಅಧ್ಯಕ್ಷ ಕೆ.ಕೆ.ಕೃಷ್ಣನ್ ಸ್ವಾಗತಿಸಿದರು. ಕಣ್ಣೂರು ಕಯರ್ ಪ್ರಾಜೆಕ್ಟ್ ಅಧಿಕಾರಿ ಪಿ.ವಿ.ರವೀಂದ್ರ ಕುಮಾರ್ ವರದಿ ವಾಚಿಸಿದರು. ಕೆ.ಪಿ.ಮಾಧವನ್ ವಂದಿಸಿದರು.
ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ (SUBSCRIBE) ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ.
ಸಮರಸ ಸುದ್ದಿ ಬಳಗ