HEALTH TIPS

ಕರ್ನಾಟಕ ಯಕ್ಷಗಾನ ಅಕಾಡೆಮಿ-ಸಿರಿಬಾಗಿಲು ಪ್ರತಿಷ್ಠಾನದಿಂದ ಸ್ತುತ್ಯರ್ಹವಾಗಿ ಮೂಡಿಬಂದ ಯಕ್ಷ ಬಣ್ಣದ ವೇಶದ ಕಮ್ಮಟ-ಅಧ್ಯಯನ ಒಡ್ಡಿಕೊಂಡಂತೆ ಸೃಜನಶೀಲತೆಗೆ ಧಕ್ಕೆಯಾಗುವ ಭೀತಿಯಿದ್ದರೂ ಅಧ್ಯಯನ ದೃಷ್ಟಿಯಿಂದ ಅನಿವಾರ್ಯ-ಡಾ.ಸುಂದರ ಕೇನಾಜೆ ಉದ್ಘಾಟಿಸಿ ಅಭಿಮತ

 

             ಬದಿಯಡ್ಕ: ಯಕ್ಷಗಾನ ಕಲಾ ಪ್ರಕಾರದೊಳಗಿನ ಪ್ರಾದೇಶಿಕ ವೈವಿಧ್ಯತೆಗಳ ದಾಖಲೀಕರಣ ಆಗಲೇ ಬೇಕಾದ ಕೆಲಸವಾಗಿದೆ. ಹೆಚ್ಚು ಅಧ್ಯಯನಕ್ಕೆ ಒಡ್ಡಿದಂತೆ ಸೃಜನಶೀಲತೆಗೆ ಧಕ್ಕೆಯಾಗುತ್ತಿರುವುದು ಹೌದಾದರೂ ಅಧ್ಯಯನದ ದೃಷ್ಟಿಯಿಂದ ಪರಂಪರೆ, ಸಂಪ್ರದಾಯಗಳ ದಾಖಲೀಕರಣ ಈಗಿನ ಅನಿವಾರ್ಯ ಎಂದು ಯುವ ಜಾನಪದ ವಿದ್ವಾಂಸ, ಪುತ್ತೂರಿನ ಡಾ.ಶಿವರಾಮ ಕಾರಂತರ ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ.ಸುಂದರ ಕೇನಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.

         ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಸೋಮವಾರ ಕೊಲ್ಲಂಗಾನದ ಶ್ರೀನಿಲಯ ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ತೆಂಕುತಿಟ್ಟು "ಬಣ್ಣದ ವೇಷದ ಕಮ್ಮಟ" ಹಾಗೂ ದಾಖಲೀಕರಣ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.


         ಅನಿವಾರ್ಯತೆಗಳು ಸೂಕ್ಷ್ಮತೆಯ ಕಡೆಗೆ ಸಾಗುತ್ತಿರುವುದು ಕುತೂಹಲಕರ. ವಿಷಯವೊಂದರ ಅಧ್ಯಯನದ ಸಂದರ್ಭದಲ್ಲಿ ಸೀಳುವ ಸ್ವಭಾವ ಅಕಾಡೆಮಿಕ್ ಆಗಿ ನ್ಯಾನೋ ಸ್ಟಡಿಯಾಗುತ್ತದೆ. ಆದರೆ ಏಕಮುಖ ವೈಭವೀರಣ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿರಬೇಕೇ ಹೊರತು ಪ್ರದರ್ಶನಕ್ಕೆ ಇಳಿಸುವುದು ಅಪಾಯಕಾರಿ ಎಂದು ಅವರು ಕಳಕಳಿ ವ್ಯಕ್ತಪಡಿಸಿದರು. ಜಾನಪದ ಕಲೆಗೆ ಸಂಬಂಧಿಸಿದಂತೆ ಕರಾವಳಿಯಲ್ಲಿ ನಡೆದಷ್ಟು ಅಧ್ಯಯನ, ದಾಖಲೀಕರಣಗಳು ಬೇರೆಡೆ ಆಗಿಲ್ಲ. ಈ ನಿಟ್ಟಿನಲ್ಲಿ ಸಮಗ್ರವಾಗಿ ಇಂತಹ ಪ್ರಯತ್ನಗಳಾಗಬೇಕು ಎಮದು ಅವರು ತಿಳಿಸಿದರು.  


       ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅಧ್ಯಕ್ಷತೆವಹಿಸಿ ಮಾತನಾಡಿ,ದಾಖಲೀಕರಣ ಇಲ್ಲದೆ ಇತಿಹಾಸ ರಚನೆ, ಅಧ್ಯಯನ ಸಾಧ್ಯವಾಗುವುದಿಲ್ಲ.  ಪರಿಶೀಲನೆಗೆ ಒಳಪಟ್ಟು, ಪರಿಷ್ಕರಣೆ ಅಗತ್ಯವಿದ್ದಲ್ಲಿ ಇಂತಹ ದಾಖಲೀಕರಣ ನೆರವಾಗಲಿದೆ ಎಂದು ಅವರು ತಿಳಿಸಿದರು. ಜೊತೆಗೆ ಸೂಕ್ಷ್ಮ ಅಧ್ಯಯನಕ್ಕೆ ದಾಖಲೀಕರಣ ನೆರವಾಗುತ್ತದೆ. ತೆಂಕುತಿಟ್ಟಿನ ಬಣ್ಣದ ವೇಶಗಳ ವೈವಿಧ್ಯ ಅತ್ಯಪೂರ್ವ. ಈ ಹಿನ್ನೆಲೆಯಲ್ಲಿ ಪರಂಪರೆಯ ದಾಖಲೀಕರಣ ಅಧ್ಯಯನಕ್ಕೆ ಯೋಗ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

          ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ಎಸ್ ಹೆಚ್.ಶಿವರುದ್ರಪ್ಪ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರುಗಳಾದ ರಾಧಾಕೃಷ್ಣ ಕಲ್ಚಾರ್, ಯೋಗೀಶ ರಾವ್ ಚಿಗುರುಪಾದೆ, ನವನೀತ ಶೆಟ್ಟಿ ಕದ್ರಿ, ಸಹಸದಸ್ಯ ದಾಮೋದರ ಶೆಟ್ಟಿ ಮೂಡಂಬೈಲು, ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ  ಉಪಸ್ಥಿತರಿದ್ದರು. 

     ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಗದೀಶ ಕೂಡ್ಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

     ಬಳಿಕ ನಡೆದ ಕಮ್ಮಟದಲ್ಲಿ ಸಹಸ್ರಾಕ್ಷ-ದೇವೇಂದ್ರ ಬಣ್ಣಗಾರಿಕೆ ಪ್ರಾತ್ಯಕ್ಷಿಕೆ, ಹಿರಣ್ಯಾಕ್ಷ- ವರಾಹ, ವೃತ್ರಜ್ವಾಲೆ(ಹೆಣ್ಣು ಬಣ್ಣ), ಅತಿಕಾಯ, ವಿದ್ಯುಜ್ವಹ್ಹ, ಪೂತನಿ, ಕಿಮ್ಮೀರ, ರಾವಣ, ಭಗದತ್ತ, ಬಲರಾಮ, ತಾಮ್ರಧ್ವಜ, ಗರುಡ, ಯಮ-ಚಿತ್ರಗುಪ್ತ, ಕಾರ್ತವೀರ್ಯನ ಒಡ್ಡೋಲಗ, ದತ್ತಾತ್ರೇಯ, ಹನುಮಂತನ ಒಡ್ಡೋಲಗಗಳ ಬಣ್ಣಗಾರಿಕೆ, ರಂಗ ಸಾಕ್ಷಾತ್ಕಾರ ಪ್ರದರ್ಶನ,ದಾಖಲೀಕರಣ ಅವಲೋಕನಗಳು ನಡೆಯಿತು. ತೆಂಕುತಿಟ್ಟಿನ ದಶಾವತಾರಿ ಸೂರಿಕುಮೇರಿ ಕೆ.ಗೋವಿಂದ ಭಟ್ ಅವರು ಪೂರ್ತಿ ಕಮ್ಮಟದ ಅವಲೋಕನ ನಡೆಸಿದರು. ಖ್ಯಾತ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ನಿರ್ವಹಿಸಿದರು.

       ಸಂಜೆ 5 ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ಕೆ.ಗೋವಿಂದ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಸದಸ್ಯ ಸತೀಶ ಅಡಪ ಸಂಕಬೈಲು, ಡಾ.ಶ್ರುತಕೀರ್ತಿರಾಜ್ ಉಜಿರೆ, ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ,  ಕಲಾಪೆÇೀಷಕ ಮಂಜುನಾಥ ಡಿ.ಮಾನ್ಯ ಉಪಸ್ಥಿತರಿದ್ದರು.  

         ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಹಿಮ್ಮೇಳದಲ್ಲಿ ಪುಂಡಿಕೈ ಗೋಪಾಲಕೃಷ್ಣ ಭಟ್, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಲಕ್ಷ್ಮೀನಾರಾಯಣ ರಾವ್ ಅಡೂರು, ಮುರಾರಿ ಕಡಂಬಳಿತ್ತಾಯ, ಲಕ್ಷ್ಮೀಶ ಬೆಂಗ್ರೋಡಿ, ಮುರಾರಿ ಭಟ್ ಪಂಜಿಗದ್ದೆ ಹಾಗೂ  ಮುಮ್ಮೇಳದಲ್ಲಿ ಕೆ. ಗೋವಿಂದ ಭಟ್ ಸೂರಿಕುಮೇರಿ, ಸುಣ್ಣಂಬಳ ವಿಶ್ವೇಶ್ವರ ಭಟ್, ರಾಧಾಕೃಷ್ಣ ನಾವಡ ಮಧೂರು, ಸುಬ್ರಾಯ ಹೊಳ್ಳ ಕಾಸರಗೋಡು, ಉಬರಡ್ಕ ಉಮೇಶ ಶೆಟ್ಟಿ, ರಮೇಶ ಭಟ್ ಸರವು, ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಬಾಲಕೃಷ್ಣ ಮಣಿಯಾಣಿ ಮವ್ವಾರು, ಗಣಾಧಿರಾಜ ಉಪಾಧ್ಯಾಯ, ಹರಿನಾರಾಯಣ ಎಡನೀರು, ಶಂಭಯ್ಯ ಭಟ್ ಕಂಜರ್ಪಣೆ, ಮನೀಶ್ ಪಾಟಾಳಿ,  ರವಿರಾಜ ಪನೆಯಾಲ, ಜಯರಾಮ ಪಾಟಾಳಿ ಪಡುಮಲೆ, ಮಾಧವ ಪಾಟಾಳಿ ನೀರ್ಚಾಲು, ಮನೀಶ್ ಪಾಟಾಳಿ ಎಡನೀರು, ಕಿಶನ್ ಅಗ್ಗಿತ್ತಾಯ, ಶ್ರೀಗಿರಿ, ಸ್ವಸ್ಥಿಕ್, ಉಪಾಸನಾ ಪಂಜರಿಕೆ, ಬಾಲಕೃಷ್ಣ ಸೀತಾಂಗೋಳಿ, ಪ್ರಕಾಶ್ ನಾಯಕ್, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಭಾಗವಹಿಸಿದ್ದರು. ವರ್ಣ ಸ್ಟುಡಿಯೋ  ನೀರ್ಚಾಲ್ ವೀಡಿಯೋ ದಾಖಲೀಕರಣದಲ್ಲಿ ನೆರವು ನೀಡಿತ್ತು. ಕೊಲ್ಲಂಗಾನ ಮೇಳ ವೇಷಭೂಷಣ ಪೂರೈಸಿತ್ತು. ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಸಹಕಾರ ನೀಡಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries