ತಿರುವನಂತಪುರ: ಬಿನೀಶ್ ಕೊಡಿಯೇರಿ ಒಳಗೊಂಡ ಬೆಂಗಳೂರು ಮಾದಕವಸ್ತು ಪ್ರಕರಣದ ಹೆಚ್ಚಿನ ತನಿಖೆಗಾಗಿ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿರುವನಂತಪುರಕ್ಕೆ ಆಗಮಿಸಿದ್ದಾರೆ.
ತನಿಖಾ ತಂಡವು ಬಿನೀಶ್ ಮತ್ತು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಮನೆಯಲ್ಲಿ ಶೋಧನಾ ಕಾರ್ಯ ನಡೆಸುವರೆಂದು ಸೂಚನೆಗಳಿವೆ.
ಎಂಟು ಮಂದಿ ಸದಸ್ಯರಿರುವ ತನಿಖಾ ತಂಡ ತಿರುವನಂತಪುರ ತಲುಪಿದೆ ಎಂದು ಹೇಳಲಾಗಿದೆ. ಬಿನೀಶ್ ಅವರ ವಿಚಾರಣೆಯಿಂದ ಪಡೆದ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಲಾಗುವುದೆನ್ನಲಾಗಿದೆ. ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿ ಕಾರ್ ಪ್ಯಾಲೇಸ್ ಎಂಬ ಸಂಸ್ಥೆಯ ಬಗೆಗೂ ತಂಡವು ತನಿಖೆ ನಡೆಸಬಹುದು ಎಂಬ ಸೂಚನೆಗಳಿವೆ.