HEALTH TIPS

'ವಿವರವಾಗಿ ಹೇಳಲು ಹಲವು ವಿಷಯಗಳಿವೆ'- ಶೋಭಾ ಸುರೇಂದ್ರನ್

      ಕೋಝಿಕ್ಕೋಡ್: ಬಿಜೆಪಿ ನೇತಾರೆ ಶೋಭಾ ಸುರೇಂದ್ರನ್ ಅವರು ರಾಜ್ಯ ನಾಯಕತ್ವದ ಮೇಲಿನ ಹಿಡಿತವನ್ನು ಬಿಗಿಗೊಳಿಸಿದ್ದಾರೆ. ನಾನು ಮಾಧ್ಯಮಗಳಿಗೆ ಹೇಳಲು ಬಹಳಷ್ಟು ಸಂಗತಿಗಳಿವೆ. ವಿವರಗಳನ್ನು ನಂತರ ವಿವರವಾಗಿ ತಿಳಿಸಲಾಗುವುದು. ತನ್ನನ್ನು ರಾಜಕೀಯ ಸ್ಥಾನಕ್ಕೆ ಹಪಹಪಿಸುವವಳೆಂದು ಕೆಲವರು ಹೇಳಿಕೆ ನೀಡುತ್ತಿದ್ದು ಈ ಬಗ್ಗೆ  ವಿಷಾದವಿಲ್ಲ ಎಂದು ನಿನ್ನೆ ಸುದ್ದಿಗಾರರೊಂದಿಗೆ ಕೋಝಿಕ್ಕೋಡಿನಲ್ಲಿ ಹೇಳಿರುವರು. 

           ಬಿಜೆಪಿಗೆ ಒಬ್ಬನೇ ಒಬ್ಬ ವಾರ್ಡ್ ಸದಸ್ಯರೂ ಇಲ್ಲದ ಕಾಲಘಟ್ಟದಲ್ಲಿ ತಾನು ಬಿಜೆಪಿಗೆ ಬಂದವಳು ಎಂದು ಶೋಭಾ ನೆನಪಿಸಿದರು. ಮಿಜೋರಾಂ ರಾಜ್ಯಪಾಲ ಮತ್ತು ಮಾಜಿ ಬಿಜೆಪಿ ರಾಜ್ಯ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರೊಂದಿಗಿನ ಸಭೆಯ ಬಳಿಕ ನಿನ್ನೆ ಶೋಭಾ ಅವರು ಈ ರೀತಿಯ ಹೇಳಿಕೆ ನೀಡಿ ಆಕಾಂಕ್ಷಿಯಾಗಿದ್ದರೆ ಬಿಜೆಪಿಯಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂದು ಹೇಳಿದರು.

         ಮಾಧ್ಯಮಗಳೊಂದಿಗೆ ಮಾತನಾಡುವಾಗ ಗಂಭೀರವಾಗಿ ಮಾತನಾಡಿದ ಶೋಭಾ ಪಕ್ಷದ ನಾಯಕತ್ವದ ಬಗ್ಗೆ ಭಿನ್ನಾಭಿಪ್ರಾಯವನ್ನು ಪುನರುಚ್ಚರಿಸಿದರು. ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಬಿಜೆಪಿ ಪಾಳಯದಲ್ಲಿ ವಿರೋಧ ಹೆಚ್ಚುತ್ತಿದೆ. ಶೋಭಾ ಸುರೇಂದ್ರನ್ ಅವರು ಸುರೇಂದ್ರನ್ ವಿರುದ್ಧ ಎರಡು ಬಾರಿ ಕೇಂದ್ರ ನಾಯಕತ್ವಕ್ಕೆ ಪತ್ರ ಬರೆದಿದ್ದರು. ಸುರೇಂದ್ರನ್ ವಿರುದ್ಧ ಇಪ್ಪತ್ನಾಲ್ಕು ರಾಜ್ಯ ನಾಯಕರೂ ಈಗಾಗಲೇ ಕೇಂದ್ರ ನಾಯಕತ್ವಕ್ಕೆ ದೂರು ನೀಡಿದ್ದಾರೆ. 

        ಮಾಜಿ ಉಪಾಧ್ಯಕ್ಷ ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಎಂ.ವೇಲಾಯುಧನ್, ಕೆ.ಪಿ.ಶ್ರೀಧರನ್ ಸೇರಿದಂತೆ ಹಿರಿಯ ನಾಯಕರು ರಾಜ್ಯ ನಾಯಕತ್ವದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರುಸಂಘಟನೆಯಲ್ಲಿ ಜಿಲ್ಲೆಗಳಲ್ಲೂ ಹೆಚ್ಚಿನ ಸಂಖ್ಯೆಯ ಭಿನ್ನಮತೀಯರಿದ್ದಾರೆ ಎಂದು ವರದಿಯಾಗಿದೆ.

       ಇತ್ತ ವಿವಾದ ಮುಂದುವರೆದಂತೆ, ಸುರೇಂದ್ರನ್ ದೆಹಲಿಗೆ ಭೇಟಿ ನೀಡಿ ಕೇಂದ್ರ ಮುಖಂಡರನ್ನು ಭೇಟಿಯಾಗಿದ್ದರು. ಆದರೆ ಭಿನ್ನಮತದ ಬಗೆಗಿನ ಚರ್ಚೆ ನಡೆದಿತ್ತೇ ಎಂಬ ಬಗ್ಗೆ ಅಸ್ಪಷ್ಟವಾಗಿ ಉತ್ತರ ನೀಡಿದ್ದ ಸುರೇಂದ್ರನ್ ಅವರು ಆರೋಪಗಳನ್ನು ನಿರಾಕರಿಸಿದರು ಮತ್ತು ಕೇಂದ್ರ ನಾಯಕರು ತನ್ನನ್ನು ಕರೆಸಿಕೊಂಡಿರುವುದಲ್ಲ, ಬದಲಿಗೆ ತಾನೇ ಸ್ಥಳೀಯ ಚುನಾವಣೆಗಳು ಸೇರಿದಂತೆ ವಿಷಯಗಳ ಬಗ್ಗೆ ಚರ್ಚಿಸಲು ತೆರಳಿದ್ದೆ ಎಂದು ಹೇಳಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries