ಮಂಜೇಶ್ವರ: ಬ್ಯಾಂಕಿಂಗ್ ಸೇವಾ ರಂಗದಲ್ಲಿ ದಶಕಗಳ ಪಾರಂಪರ್ಯವಿರುವ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಆರೋಗ್ಯ ರಂಗದಲ್ಲಿ ಹೊಸ ಹೆಜ್ಜೆ ಎಂಬ ನೆಲೆಯಲ್ಲಿ ನೀತಿ ಮೆಡಿಕಲ್ ಸ್ಟೋರನ್ನು ಹೊಸಂಗಡಿ ಪೇಟೆಯ ಸ್ಟೇಟ್ ಹೈಲ್ಯಾಂಡ್ ಕಾಂಪ್ಲೆಕ್ಸ್‍ನಲ್ಲಿ ಪ್ರಾರಂಭಿಸಿದೆ.
ಇಲ್ಲಿ ಎಲ್ಲಾ ವಿಧದ ಅಲೋಪಥಿಕ್ ಔಷಧಗಳು ನ್ಯಾಯ ಬೆಲೆಗೆ ಲಭ್ಯವಾಗಿಸುವುದಕ್ಕಾಗಿ ಕೋವಿಡ್ ಮಾನದಂಡಗಳನ್ನು ಪಾಲಿಸಿ ಅತ್ಯಂತ ಸರಳ ಕಾರ್ಯಕ್ರಮದೊಂದಿಗೆ ಉದ್ಘಾಟನೆಗೊಂಡಿತು.
ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಅಜೀಜ್ ಹಾಜಿ ರಿಬ್ಬನ್ ಕತ್ತರಿಸುವ ಮೂಲಕ ನೀತಿ ಮೆಡಿಕಲ್ ಸ್ಟೋರ್‍ನ್ನು ಉದ್ಘಾಟಿಸಿದರು. ಪ್ರಥಮ ಮಾರಾಟ ನಿರ್ವಹಣೆಯನ್ನು ಸಹಕಾರಿ ಇಲಾಖೆಯ ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ಲಾನಿಂಗ್ ಕೆ.ಮುರಳೀಧರನ್ ನೆರವೇರಿಸಿದರು. ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಬಿ.ವಿ.ರಾಜನ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಂಜೇಶ್ವರ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಶಿಕಲಾ, ತಾಲೂಕು ಸರ್ಕಲ್ ಕೋ-ಆಪರೇಟಿವ್ ಯೂನಿಯನ್ ಅಧ್ಯಕ್ಷ ಕೆ.ಆರ್.ಜಯಾನಂದ, ಮಂಜೇಶ್ವರ ತಾಲೂಕು ಅಸಿಸ್ಟೆಂಟ್ ರಿಜಿಸ್ಟರ್ ಕೆ.ರಾಜಗೋಪಾಲ, ತಾಲೂಕು ಸಹಕಾರಿ ಸಂಘಗಳ ಆಫೀಸ್ ಇನ್ಸ್‍ಪೆಕ್ಟರ್ ವಿ.ಸುನಿಲ್ ಕುಮಾರ್, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಂಜೇಶ್ವರ ಘಟಕ ಅಧ್ಯಕ್ಷ ಬಶೀರ್ ಕನಿಲ, ಬ್ಯಾಂಕ್ ನಿರ್ದೇಶಕರಾದ ಡಾ.ಕೆ.ಖಾದರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‍ನ ಕಾರ್ಯದರ್ಶಿ ರಾಜನ್ ನಾಯರ್ ಸ್ವಾಗತಿಸಿ, ಉಪಾಧ್ಯಕ್ಷ ಯೋಗೀಶ್ ಕೆ. ವಂದಿಸಿದರು. ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‍ನ ಆಡಳಿತ ಮಂಡಳಿ ಸದಸ್ಯರು, ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದರು. ಈ ನೀತಿ ಮೆಡಿಕಲ್ ಸ್ಟೋರ್‍ನಲ್ಲಿ ಅಲೋಪತಿ ಔಷಧಿಗಳು ಶೇ.5 ರಿಂದ ಶೇ.15 ರ ವರೆಗೆ ರಿಯಾಯಿತಿ ದರದಲ್ಲಿ ಲಭ್ಯವಿದೆ. ಸರ್ವಜನತೆಯು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ಬ್ಯಾಂಕ್‍ನ ಆಡಳಿತ ಮಂಡಳಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.