ತಿರುವನಂತಪುರ: ನೆಯ್ಯಾಟಿಂಗರ ಎಂಬಲ್ಲಿ ಮರ ಬಿದ್ದು ಚುನಾವಣಾ ಸ್ಪರ್ಧೆಯ ಅಭ್ಯರ್ಥಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಕಾರೋಟ್ ಗ್ರಾಮ ಪಂಚಾಯತಿಯ ಪುದಿಯ ಉಚ್ಚಕ್ಕಾಡ್ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿ ಕೆ. ಗಿರಿಜಾ ಕುಮಾರಿ ಮೃತರಾದವರು. ಉಪ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ವೇಳೆ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಕತ್ತರಿಸುತ್ತಿದ್ದ ಮರ ನಡೆಸು ಸಾಗುತ್ತಿದ್ದ ಅಭ್ಯರ್ಥಿಯ ದೇಹದ ಮೇಲೆ ಬಿದ್ದು ದುರ್ಘಟನೆ ನಡೆದಿದೆ.ಪ್ರಚಾರಾರ್ಥ ದಾರಿಯುದ್ದಕ್ಕೂ ನಡೆದುಬರುತ್ತಿದ್ದ ಗಿರಿಜಾ ಕುಮಾರಿಯ ತಲೆಗೆ ಹಗ್ಗಹಾಕಿ ಎಳೆಯಲಾಗುತ್ತಿದ್ದ ಮರ ಬಿದ್ದು ಗಂಭೀರ ಗಾಯಗೊಂಡು ಅಪಘಾತ ನಡೆದಿದೆ. ಗಿರಿಜಾ ಕುಮಾರಿಯನ್ನು ಪಾರಶಾಲಾದ ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಜೀವ ರಕ್ಷಿಸಲುಬ ಸಾಧ್ಯವಾಗಲಿಲ್ಲ. ಅಪಘಾತದ ಸಂದರ್ಭ ಗಿರಿಜಾ ಕುಮಾರಿ ಅವರ ಪತಿ ಕೂಡ ಜೊತೆಗಿದ್ದರೆಂದು ತಿಳಿದುಬಂದಿದೆ. ಗಿರಿಜಾ ಕಾರೋಟ್ ಪಂಚಾಯತ್‍ನಲ್ಲಿ ಕುಟುಂಬಶ್ರೀಯ ಸಿಡಿಎಸ್ ಸದಸ್ಯೆಯೂ ಆಗಿದ್ದಾರೆಂದು ತಿಳಿದುಬಂದಿದೆ.