ಕಾಸರಗೋಡು: ಕಾಸರಗೋಡು ಜಿಲ್ಲಾ ಶುಚಿತ್ವ ಮಿಷನ್ ತ್ಯಾಜ್ಯ ಸಂಸ್ಕರಣ ವಲಯದಲ್ಲಿ ಅನುಭವ ಮತ್ತು ಆಸಕ್ತಿಹೊಂದಿರುವ ಸಂಪನ್ಮೂಲ ವ್ಯಕ್ತಿಗಳನ್ನು (ರಿಸೋರ್ಸ್ ಪರ್ಸನ್ಸ್) ನೇಮಕಾತಿ ನಡೆಸಲಾಗುವುದು. ಅರ್ಜಿದಾರರು 18ರಿಂದ 40 ವರ್ಷದ ನಡುವಿನ ವಯೋಮಾನದವರಾಗಿದ್ದು, ಪ್ಲಸ್ ಟು ಶಿಕ್ಷಣಾರ್ಹತೆ ಹೊಂದಿರಬೇಕು. ಅರ್ಜಿಗಳನ್ನು ಣsಛಿಞಚಿsಚಿಡಿಚಿgoಜ@gmಚಿiಟ.ಛಿomಎಂಬ ಮೈಲ್ ಗೆ ಯಾ ಜಿಲ್ಲಾ ಕೋಡಿನೇಟರ್, ಜಿಲ್ಲಾ ಶುಚಿತ್ವ ಮಿಷನ್, ಜಿಲ್ಲಾ ಪಂಚಾಯತ್ ಅನೆಕ್ಸ್ ಬಿಲ್ಡಿಂಗ್, ವಿದ್ಯಾನಗರ, ಪಿ.ಒ. ಕಾಸರಗೋಡು-671123 ಎಂಬ ವಿಳಾಸಕ್ಕೆ ನ.16ರ ಮುಂಚಿತವಾಗಿ ಕಳುಹಿಸಬೇಕು. ಹೆಚ್ಚುವರಿ ಮಾಹಿತಿಗಾಗಿ 04994-255350, 9446958519.