ಬದಿಯಡ್ಕ: ಬಹುಭಾಷಾ ವಿದ್ವಾಂಸ, ತುಳು ರತ್ನ ಡಾ.ಪುಂಡೂರು ವೆಂಕಟರಾಜ ಪುಣಿಚಿತ್ತಾಯ ಅವರ ಚಿಂತನೆ ಮತ್ತು ಉದ್ದೇಶಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನದ ಭಾಗವಾಗಿ ಪುವೆಂಪು ಪ್ರತಿಷ್ಠಾನ ಸಂರಚನೆಗೊಳ್ಳಲಿದ್ದು, ಇದರ ಪೂರ್ವಭಾವೀ ಸಭೆ ಭಾನುವಾರ ಬೆಳಿಗ್ಗೆ 10 ರಿಂದ ಶ್ರೀಮದ್ ಎಡನೀರು ಮಠದ ಆವರಣದಲ್ಲಿ ನಡೆಯಲಿದೆ. ಶ್ರೀಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಲಿರುವ ಸಭೆಯಲ್ಲಿ ದಿ.ಪುಂಡೂರು ವೆಂಕಟರಾಜ ಪುಣಿಚಿತ್ತಾಯರ ಅಭಿಮಾನಿಗಳು, ಹಿತೈಶಿಗಳು, ತುಳು ಭಾಷೆ ಸಂಸ್ಕøತಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.