ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕ್ರೀಡಾ ಬದುಕಿಗೆ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲುವ ಮೂಲಕ ಭಾರತಕ್ಕೆ ಆಶಾಕಿರಣವಾಗಿದ್ದ ಸಿಂಧು ಅವರು ದಿಢೀರ್ ಅಂತಾ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ನಿವೃತ್ತಿ ಬಗ್ಗೆ ಟ್ವೀಟ್ ನಲ್ಲಿ ಸಿಂಧು ಬರೆದುಕೊಂಡಿದ್ದರು.
ಟ್ವೀಟ್ ನಲ್ಲಿ ಡೆನ್ಮಾರ್ಕ್ ಓಪನ್ ತನ್ನ ಕೊನೆಯ ಟೂರ್ನಿ, ನಾನು ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ನೊಂದಿಗಿನ ಹೋರಾಟದಲ್ಲಿ ಅಸಡ್ಡೆ, ಶುಚಿತ್ವದೆಡೆಗಿರುವ ನಿರ್ಲಕ್ಷ್ಯತನದಿಂದ ನಿವೃತ್ತಿಯಾಗಲು ಬಯಸುತ್ತೇನೆ. ನಕಾರಾತ್ಮಕತೆ, ಭಯ ಮತ್ತು ಅನಿಶ್ಚಿತತೆಯಿಂದ ನಾನು ನಿವೃತ್ತಿಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ಕೊರೋನಾದಿಂದ ಮುಕ್ತಿ ಪಡೆಯುತ್ತಿರುವುದಾಗಿ ಸಿಂಧು ಹೇಳಿದ್ದಾರೆ.
ಆದರೆ ಮೊದಲಿಗೆ ಅಭಿಮಾನಿಗಳು ಸಿಂಧು ನಿವೃತ್ತಿ ಘೋಷಿಸಿದ್ದಾರೆ ಎಂದು ಭಾವಿಸಿ ಮರುಗಿದ್ದರು. ಆದರೆ ಅವರ ಟ್ವೀಟರ್ ಸಂದೇಶದ ಸಂಪೂರ್ಣ ಮಾಹಿತಿ ಓದಿ ನಿರಾಳರಾಗಿದ್ದಾರೆ.