ಬದಿಯಡ್ಕ: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್‍ನ ಕುಂಬಳೆ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬದಿಯಡ್ಕದಲ್ಲಿರುವ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಿತು.
ಕುಂಬಳೆ ಉಪ ಜಿಲ್ಲಾಧ್ಯಕ್ಷೆ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸಿದರು. ಕೆಪಿಎಸ್‍ಟಿಎ ಕಾಸರಗೋಡು ಜಿಲ್ಲಾಧ್ಯಕ್ಷ ವಿಜಯನ್ ಮಾಸ್ತರ್ ಉದ್ಘಾಟಸಿ ಮಾತನಾಡಿ ಕೇರಳ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲಗೊಳಿಸಿ ಅಧ್ಯಾಪಕರ ವಿವಿಧ ಸವಲತ್ತುಗಳನ್ನು, ಬೇಡಿಕೆಗಳನ್ನು ನಿಷೇಧಿಸಿದೆ ಎಂದು ಆರೋಪಿಸಿದರು. ಸರ್ಕಾರದ ಜೀವ ಕೊನೆಯ ಹಂತದಲ್ಲಿದೆ ಎಂದು ಹೇಳಿದರು.
ಕೆಪಿಎಸ್‍ಟಿಎ ಪ್ರಾಂತ್ಯ ಸಮಿತಿ ಸದಸ್ಯ ರಾಜೀವನ್ ಮುಖ್ಯ ಅತಿಥಿಯಾಗಿದ್ದರು. ರಾಧಾಕೃಷ್ಣನ್, ಪ್ರದೀಪ್ ಮಾನ್ಯ, ವಿನೋದ್, ಗೋಪಾಲಕೃಷ್ಣನ್, ರವಿಶಂಕರ್, ಯೂಸುಫ್ ಕೊಟ್ಯಾಡಿ ಶುಭಹಾರೈಸಿದರು. ರಾಮಕೃಷ್ಣನ್ ಸ್ವಾಗತಿಸಿ, ಕೋಶಾಧಿಕಾರಿ ನಿರಂಜನ್ ರೈ ಪೆರಡಾಲ ವಂದಿಸಿದರು.