ಕೈರೋ: ಬಹ್ರೇನ್‌ನ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ನಿಧನರಾಗಿದ್ದಾರೆ. ಅವರು ಯುಎಸ್ ನ ಆಸ್ಪತ್ರೆಯಲ್ಲಿ ನಿಧನರಾದರು. ಈ ಬಗ್ಗೆ ಅಲ್ಲಿನ ಬಹ್ರೇನ್‌ನ ಕೋರ್ಟ್ ಪ್ರಕಟಿಸಿದೆ.
ಮ್ರತದೇಹದ ಸಮಾಧಿಗಾಗಿ ಮನೆಗೆ ಕೊಂಡೊಯ್ಯಲಾಗುವುದು ಎಂದು ಸುದ್ದಿ ಸಂಸ್ಥೆ ಬಿಎನ್‌ಎ ವರದಿ ಮಾಡಿದೆ. ನಿಕಟ ಸಂಬಂಧಿಗಳು ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ.
ಪ್ರಧಾನ ಮಂತ್ರಿಯ ನಿಧನಕ್ಕೆ ಒಂದು ವಾರ ದೇಶ ಶೋಕ ವ್ಯಕ್ತಪಡಿಸುವುದಾಗಿ ಬಹ್ರೇನ್‌ನ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಘೋಷಿಸಿದ್ದಾರೆ. ಪ್ರಧಾನಮಂತ್ರಿಯ ಗೌರವದ ಸಂಕೇತವಾಗಿ,ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಇಳಿಸಲಾಯಿತು. ಸರ್ಕಾರಿ ಸಂಸ್ಥೆಗಳು ಕಾರ್ಯನಿರ್ವಹಣೆ ಮೊಟಕುಗೊಳಿಸಲಾಗಿದ್ದು, ಗುರುವಾರದಿಂದ ಮೂರು ದಿನಗಳವರೆಗೆ ಮುಚ್ಚಲಾಗುವುದು ಎಂದು ಸುದ್ದಿಸಂಸ್ಥೆ ಉಲ್ಲೇಖಿಸಿದೆ.