ತಿರುವನಂತಪುರ: ರಾಜ್ಯ ಸರ್ಕಾರದ ವಿವಿಧ ಕ್ಷೇತ್ರಗಳಿಗೆ ನೇಮಕಾತಿ ನಡೆಸುವ ಕೇರಳ ಲೋಕಸೇವಾ ಆಯೋಗ (ಪಿ.ಎಸ್.ಸಿ )ಸರ್ಕಾರಿ ಸೇವೆಯಲ್ಲಿ ಮುಂದುವರಿದ ವಿಭಾಗಕ್ಕೂ ಮೀಸಲಾತಿ ಜಾರಿಗೆ ತರುವ ಮಹತ್ವದ ನಿರ್ಧಾರ ಕ್ಯೆಗೊಂಡಿದೆ. ಅಕ್ಟೋಬರ್ 23 ರಿಂದ ನಾಳೆಯ ವರೆಗೆ ಪಿಎಸ್ ಸಿ ಗೆ ಅರ್ಜಿಸಲ್ಲಿಸಿದವರಿಗೂ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೊಳ್ಳಲಿದೆ.
ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ವರ್ಗಗಳಿಗೆ ಮೀಸಲಾತಿ ನೀಡುವ ಸರ್ಕಾರದ ಆದೇಶವನ್ನು ಜಾರಿಗೆ ತರಲು ಸೋಮವಾರ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ನಾಳೆ ಕೊನೆಗೊಳ್ಳುವ ವಿವಿಧ ವಿಭಾಹಕ್ಕೆ ಅರ್ಜಿಸಲ್ಲಿಸಿದವರು ಈ ನೂತನ ಮೀಸಲಾತಿ ಪ್ರಕ್ರಿಯೆಗೆ ಒಳಪಡಲು ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 14 ರವರೆಗೆ ಅವಕಾಶ ನೀಡಲಾಗುವುದು.