ಮಂಜೇಶ್ವರ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಿದ್ಧತೆಯ ಪೂರ್ವಭಾವಿಯಾಗಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಮಟ್ಟದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜರುಗಿತು.
ದೇವಾಲಯಗಳ ಸಹಿತ ಆರಾಧನಾಲಯಗಳನ್ನು, ಧಾರ್ಮಿಕ ಸಂಸ್ಥೆಗಳನ್ನು ಚುನಾವಣೆ ಪ್ರಚಾರದ ವೇದಿಕೆಗಳಾಗಿಸಕೂಡದು, ಜಾತಿ, ಧರ್ಮ, ಭಾಷೆ ಇತ್ಯಾದಿಗಳ ವಿಷಯಗಳಲ್ಲಿ ಸಮಾಜದಲ್ಲಿ ಭಿನ್ನತೆಯುಂಟುಮಾಡುವ, ಈಗಾಗಲೇ ಹಲವು ವಿಚಾರಗಳಲ್ಲಿ ತಲೆದೋರಿರುವ ಬಿರುಕುಗಳನ್ನು ಹೆಚ್ಚಳಗೊಳಿಸುವ, ಪರಸ್ಪರ ದ್ವೇಷ ಉತ್ತೇಜಿಸುವ ಇತ್ಯಾದಿ ಚುಟುವಟಿಕೆಗಳನ್ನು ನಡೆಸಕೂಡದು ಎಂದು ಸಭೆಯಲ್ಲಿ ತಿಳಿಸಲಾಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಬ್ಲಾಕ್ ಮಟ್ಟದ ಚುನಾವಣೆ ಅ„ಕಾರಿಯಾಗಿರುವ ಎ.ಡಿ.ಸಿ.ಜನರಲ್ ಬೆವಿನ್ ಜಾನ್ ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ಜಯರಾಮ, ಅಶೋಕ ಭಂಡಾರಿ, ಹಮೀದ್ ಹೊಸಂಗಡಿ, ಇದ್ರೀಸ್, ವಿಜಯ್ ಕೆ.ರೈ, ಎ.ಕೆ.ಎಂ.ಅಶ್ರಫ್, ಎನ್.ಅಬ್ದುಲ್ ಲತೀಫ್, ಕೆ.ಪಿ.ಮುನೀರ್, ಸಹಾಯಕ ಚುನಾವಣೆ ಅಧಿಕಾರಿ ಬಿ.ಡಿ.ಒ. ಎನ್.ಸುರೇಂದ್ರನ್, ಪಂಚಾಯತ್ ಮಟ್ಟದ ಚುನಾವಣೆ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.