ಕೊಚ್ಚಿ: ಜಾರಿ ನಿರ್ದೇಶನಾಲಯ ದಾಖಲಿಸಿದ ಪ್ರಕರಣದಲ್ಲಿ ಶಿವಶಂಕರ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಪ್ರಧಾನ ಸೆಷನ್ಸ್ ನ್ಯಾಯಾಲಯವು ಕಳೆದ ಗುರುವಾರ ಪೂರ್ಣ ದಿನ ವಾದ ಆಲಿಸಿ ಇಂದು ತೀರ್ಪಿಗೆ ಮುಂದೂಡಿತ್ತು.
ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಶಿವಶಂಕರ್ ರಾಜತಾಂತ್ರಿಕ ಸಾಮಾನುಗಳ ಮೂಲಕ ಚಿನ್ನ ಕಳ್ಳಸಾಗಣೆಯನ್ನು ತನಗೆ ಬೇಕಾದಂತೆ ದುರುಪಯೋಗಗೊಳಿಸಿದ್ದರು ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿತ್ತು. ಅಲ್ಲದೆ, ಶಿವಶಂಕರ್ ಲೈಫ್ ಮಿಷನ್ ಮತ್ತು ಕೆಫೆÇೀನ್ ಸೇರಿದಂತೆ ಸರ್ಕಾರಿ ಯೋಜನೆಗಳನ್ನು ವಹಿಸಿಕೊಂಡಿದ್ದರು ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿತ್ತು.
ಈ ಹಿಂದೆ ಶಿವಶಂಕರ್ ಇ.ಡಿ.ವಿರುದ್ದ ಗಂಭೀರ ಅಪರಾಧಗಳನ್ನು ಆರೋಪಿಸಿ ಜಾಮೀನು ಅರ್ಜಿ ಸಲ್ಲಿಸಿದ್ದರು. ತನ್ನ ಅರ್ಜಿಯಲ್ಲಿ, ಶಿವಶಂಕರ್ ಅವರು ಗುರಿಯಿರಿಸಿರುವ ರಾಜಕೀಯ ನಾಯಕರ ಹೆಸರನ್ನು ನೀಡುವಂತೆ ಇಡಿ ಒತ್ತಡ ಹೇರಿದ್ದಾರೆ ಮತ್ತು ಹಾಗೆ ಮಾಡಲು ನಿರಾಕರಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಆದರೆ, ಶಿವಶಂಕರ್ ಅವರ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ ತಿರಸ್ಕರಿಸಿದೆ. ಶಿವಶಂಕರ್ ಅವರಲ್ಲಿ ರಾಜಕೀಯ ನಾಯಕರ ಹೆಸರನ್ನು ಬಹಿರಂಗಪಡಿಸಲು ಈವರೆಗೆ ಕೇಳಲಾಗಿಲ್ಲ ಮತ್ತು ವಾದವು ದುರುದ್ದೇಶಪೂರಿತವಾಗಿದೆ ಎಂದು ಇಡಿ ಹೇಳಿದೆ. ಶಿವಶಂಕರ್ ಅವರ ಹೊಸ ವಾದಗಳನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಇಡಿ ಒತ್ತಾಯಿಸಿತ್ತು.