ಮುಂಬೈ: ಬಿನೊಯ್ ಕೊಡಿಯೇರಿ ವಿರುದ್ಧದ ಕಿರುಕುಳ ಪ್ರಕರಣ ಇತ್ಯರ್ಥವಾಗಿಲ್ಲ ಎಂದು ಸಂತ್ರಸ್ತೆಯ ಕುಟುಂಬ ಹೊಸಬಾಂಬ್ ಸಿಡಿಸಿದೆ.
ಇತ್ತೀಚಿನ ವರದಿಯ ಪ್ರಕಾರ ಮುಂಬೈ ಪೊಲೀಸರು ಶೀಘ್ರದಲ್ಲೇ ಬಿಹಾರ ಮೂಲದ ಮಾಜಿ ಬಾರ್ ನರ್ತಕಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಬಹುದು. ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬಿನೊಯ್ ಕೊಡಿಯೇರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಆಲಿಸುವ ಎಂಟು ತಿಂಗಳ ಮೊದಲು ಇಂತಹದೊಂದು ಟ್ವಿಸ್ಟ್ ಬಹಿರಂಗವಾಗಿದೆ.
ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ಬಿನೊಯ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ಬಿನೊಯ್ ತನ್ನ ಮಗುವಿನ ತಂದೆ ಎಂದು ಮಹಿಳೆ ಆರೋಪಿಸಿದ್ದಾಳೆ.ಇದೇ ವೇಳೆ, ಮಗುವಿನ ಪಿತೃತ್ವವನ್ನು ಸಾಬೀತುಪಡಿಸಲು ಪ್ರಕರಣದ ಭಾಗವಾಗಿ ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಯಿತು. ಆದರೆ ಯಾವುದೇ ಫಲಿತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ. ಏತನ್ಮಧ್ಯೆ, ಪ್ರಕರಣವನ್ನು ಇತ್ಯರ್ಥಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ವರದಿಗಳು ಬಂದವು. ಆದರೆ, ಸಂತ್ರಸ್ಥೆಯ ಕುಟುಂಬವನ್ನು ಉಲ್ಲೇಖಿಸಿ ಮಾಧ್ಯಮವೊಂದರ ವರದಿಯಲ್ಲಿ ಇತ್ಯರ್ಥ ಯತ್ನ ನಡೆದಿಲ್ಲ ಎಂದು ಹೇಳಿದೆ.
ಪ್ರಕರಣ ಇತ್ಯರ್ಥವಾಗಿದೆ ಎಂಬ ಆರೋಪವನ್ನು ಬಾಲಕಿಯ ಕುಟುಂಬ ನಿರಾಕರಿಸಿದೆ. ಮುಂಬೈ ಪೊಲೀಸರು ಶೀಘ್ರದಲ್ಲೇ ಬಿಹಾರ ಮೂಲದವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪೊಲೀಸರು ಕೆಳ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದರೆ ಡಿಎನ್‌ಎ ವರದಿ ಕೋರಿ ಬಾಂಬೆ ಹೈಕೋರ್ಟ್‌ನ್ನು ಸಂಪರ್ಕಿಸುವುದಾಗಿ ಕುಟುಂಬ ತಿಳಿಸಿದೆ. ಮಗುವಿನ ಡಿಎನ್‌ಎ ಫಲಿತಾಂಶಗಳನ್ನು ಗೌಪ್ಯ ದಾಖಲೆಯಾಗಿ ರಿಜಿಸ್ಟ್ರಾರ್ ಬಳಿ ಇಡಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣ ಏನು:
ಮುಂಬೈನ ಬಾರ್‌ವೊಂದರಲ್ಲಿ ನರ್ತಕಿಯಾಗಿದ್ದ ಬಿಹಾರ ಮೂಲದ ಸ್ತ್ರೀಯನ್ನು ಭೇಟಿಯಾಗಿದ್ದು ಬಳಿಕ ಸ್ನೇಹವಾಗಿ ಮದುವೆ ಭರವಸೆಯ ಕಾರಣ ದ್ಯೆಹಿಕ ಸಂಬಂಧಗಲಕು ಬೆಳೆದಿದ್ದವು ಎನ್ನಲಾಗಿದೆ. ಆಕೆ 2009 ರಲ್ಲಿ ಗರ್ಭಿಣಿಯಾದಾಗ ಮುಂಬೈನಿಂದ ಊರಿಗೆ ಹಿಂದಿರುಗಿದ್ದಳು. ಆರಂಭಿಕ ಹಂತದಲ್ಲಿ, ಅವರ ಎಲ್ಲಾ ಖರ್ಚುಗಳನ್ನು ಬಿನೊಯ್ ಭರಿಸಿದ್ದನು. ಆದರೆ ನಿಧಾನವಾಗಿ ಸಂಬಂಧಗಳು ದೂರವಾಗಿದ್ದು ಬಳಿಕ ವಿಚಾರಿಸಿದಾಗ ಬಿನೊಯ್ ಊರಲ್ಲಿ ಬೇರೊಂದು ಮದುವೆಯಾಗಿರುವುದು ತಿಳಿದುಬಂತೆಂದು ಸ್ತ್ರೀ ದೂರಿನಲ್ಲಿ ಆರೋಪಿಸಿದ್ದಳು.