ತಿರುವನಂತಪುರ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಅಗತ್ಯ ಇರುವವರಿಗೆ ನೆರವಾಗುವ ಯೋಜನೆಯನ್ನು ಸರ್ಕಾರ ಕೂಡಲೇ ಒದಗಿಸಲಿದೆ ಎಂದು ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವೆ ಕೆ.ಕೆ. ಶೈಲಾಜಾ ಮಾಹಿತಿ ನೀಡಿದರು. 1,000 ಜನರಿಗೆ ಶ್ರವಣ ಸಾಧನಗಳನ್ನು ಒದಗಿಸುವ 'ಶ್ರವಣ್' ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಸಚಿವೆ ಮಾತನಾಡುತ್ತಿದ್ದರು.
ಸಹಾಯಕ ಸಾಧನಗಳ ವಿತರಣೆಗೆ ಅಗತ್ಯವಾದ ಹಣವನ್ನು ಅಂಗವೈಕಲ್ಯ ಕಲ್ಯಾಣ ನಿಗಮಕ್ಕೆ ನೀಡಲಾಗುವುದು. ಕಳೆದ 4 ವರ್ಷಗಳಿಂದ, ಅಂಗವೈಕಲ್ಯ ಕಲ್ಯಾಣ ನಿಗಮವು ವಿವಿಧ ಯೋಜನೆಗಳ ಮೂಲಕ ಸಹಾಯಕ ಸಾಧನಗಳನ್ನು ಒದಗಿಸುತ್ತಿದೆ. ಶುಭಯಾತ್ರ ಮತ್ತು ಕಾಳ್ಚ ಗಳು ಈ ನಿಟ್ಟಿನಲ್ಲಿ ಗಮನಾರ್ಹ ಯೋಜನೆಗಳಾಗಿವೆ ಎಂದು ತಿಳಿಸಿದರು.
ಶ್ರವಣ ಸಾಧನಗಳಿಗಾಗಿ ಹಲವು ಅರ್ಜಿಗಳನ್ನು ಸ್ವೀಕರಿಸಲಾಗುತ್ತಿರುವುದರಿಂದ, ಇಯರ್‍ಮೋಲ್ಡ್ ಹೊಂದಿರುವ 1000 ಜನರಿಗೆ ಗುಣಮಟ್ಟದ ಡಿಜಿಟಲ್ ಶ್ರವಣ ಸಾಧನಗಳನ್ನು ತಕ್ಷಣ ಪೂರೈಸಲು ನಿರ್ಧರಿಸಲಾಗಿದೆ. ಕರಿಕಾಕಂನ ಹರಿದಾಸ್, ತಿರುವನಂತಪುರಂ ಮತ್ತು ಚಿರೈಂಕೀಳಿಯ ಜಿ.ಚಂದ್ರಿಕಾ ಎಂಬವರಿಗೆ ಉದ್ಘಾಟನಾ ಸಂದರ್ಭದಲ್ಲಿ ಸಹಾಯಕ ಉಪಕರಣಗಳನ್ನು ವಿತರಿಸಲಾಯಿತು. ವಿವಿಧ ಜಿಲ್ಲೆಗಳಲ್ಲಿ ವಿಶೇಷ ಶಿಬಿರಗಳನ್ನು ನಡೆಸಲಾಗುವುದು ಮತ್ತು ಶ್ರವಣ ಸಾಧನಗಳನ್ನು ವಿತರಿಸಲಾಗುವುದು ಎಂದು ಸಚಿವೆ ಮಾಹಿತಿ ನೀಡಿದರು.
ಅಂಗವಿಕಲ ಕಲ್ಯಾಣ ನಿಗಮವು ರಾಜ್ಯದ ವಿಕಲಚೇತನರಿಗೆ ಹಲವಾರು ನವೀನ ಸಹಾಯಕ ಸಾಧನಗಳನ್ನು ಉಚಿತವಾಗಿ ವಿತರಿಸುತ್ತಿದೆ. ಇದರ ಭಾಗವಾಗಿ, ನಡೆಯಲಾರದ ಅಂಗವಿಕಲತೆ ಇರುವ ಸುಮಾರು 1,500 ಜನರಿಗೆ ತ್ರಿಚಕ್ರ ವಾಹನಗಳನ್ನು ನೀಡಲಾಗುವುದು. ಮತ್ತು ದೃಷ್ಟಿ ದೋಷವಿರುವ 1,000 ಜನರಿಗೆ ಸ್ಮಾರ್ಟ್‍ಫೆÇೀನ್‍ಗಳನ್ನು ನೀಡಲಾಗುವುದು. ಅವುಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಎರಡು ದಿನಗಳ ತರಬೇತಿಯನ್ನು ನೀಡಲಾಯಿತು. ಇದಲ್ಲದೆ, ನಿಗಮದ ಪ್ರಧಾನ ಕಚೇರಿ ಮತ್ತು ಸಲಕರಣೆಗಳ ಉತ್ಪಾದನಾ ಘಟಕವಾದ ಎಂಆರ್‍ಎಸ್‍ಟಿ ಮೂಲಕ ಸುಮಾರು 120 ರೀತಿಯ ಸಹಾಯಕ ಸಾಧನಗಳು ಲಭ್ಯವಿದೆ. ಇದನ್ನು ವಿವಿಧ ಜಿಲ್ಲೆಗಳ ಪ್ರಾದೇಶಿಕ ಕಚೇರಿಗಳ ಮೂಲಕ ಶಿಬಿರಗಳಲ್ಲಿ ವಿತರಿಸಲಾಗುತ್ತಿದೆ. ಇದಲ್ಲದೆ, 1,000 ಜನರಿಗೆ ಡಿಜಿಟಲ್ ಶ್ರವಣ ಸಾಧನಗಳನ್ನು ವಿತರಿಸಲಾಗುತ್ತಿದೆ.