ಹೊಸದಿಲ್ಲಿ: ಬಿಹಾರ ವಿಧಾನಸಭೆಯಲ್ಲಿ ಈ ತನಕ 2.7 ಕೋಟಿ ಮತಗಳ ಎಣಿಕೆ ನಡೆದಿದ್ದು, ಮತ ಎಣಿಕೆ ಉತ್ತಮವಾಗಿ ನಡೆಯುತ್ತಿದೆ. ಮತ ಎಣಿಕೆ ತಡರಾತ್ರಿಯ ವರೆಗೆ ನಡೆಯಲಿದೆ ಚುನಾವಣಾ ಆಯೋಗ ಎಂದು ಮತ್ತೊಮ್ಮೆಹೇಳಿದೆ.
"ನಿಗದಿತ 7737 ಸುತ್ತುಗಳ ಪೈಕಿ 4858 ಸುತ್ತು ಪೂರ್ಣಗೊಳಿಸಲಾಗಿದೆ. ಮತ ಎಣಿಕೆಗಾಗಿ 119 ಕ್ಷೇತ್ರಗಳಲ್ಲಿ ಅರ್ಧದಷ್ಟು ಕೆಲಸ ಮಾಡಲಾಗಿದೆ. ಈ ಬಾರಿ ಅಂಚೆ ಮತಪತ್ರಗಳ ಸಂಖ್ಯೆ ಹೆಚ್ಚಿಸಲಾಗಿದೆ. ಫಲಿತಾಂಶ ಪ್ರಕಟನೆಗೆ ಅವಸರ ಮಾಡಬಾರದು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ'' ಎಂದು ಉಪ ಚುನಾವಣಾ ಆಯುಕ್ತ ಆಶೀಷ್ ಕುಂದ್ರಾ ಹೇಳಿದ್ದಾರೆ.