HEALTH TIPS

ಕಸ್ಟಮ್ಸ್ ವಶಪಡಿಸಿಕೊಂಡಿದ್ದ ಪುರಾತನ ವಸ್ತು, ನಾಣ್ಯ ಹಸ್ತಾಂತರಿಸಿದ ನಿರ್ಮಲಾ ಸೀತಾರಾಮನ್

          ನವದೆಹಲಿ: ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಕಸ್ಟಮ್ಸ್ ವಶಪಡಿಸಿಕೊಂಡಿದ್ದ ಪುರಾತನ ಮತ್ತು ಮಧ್ಯಕಾಲೀನ ಅವಧಿಯ ಪ್ರಾಚೀನ ವಸ್ತುಗಳು/ನಾಣ್ಯಗಳನ್ನು ಪ್ರವಾಸೋದ್ಯಮ ಮತ್ತು ಸಂಸ್ಕøತಿ ಸಚಿವ (ಸ್ವತಂತ್ರ ನಿರ್ವಹಣೆ) ಪ್ರಹ್ಲಾದ ಪಟೇಲ್ ಅವರಿಗೆ ನಾರ್ತ್ ಬ್ಲಾಕ್ ನಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿಂದು ಹಸ್ತಾಂತರಿಸಿದರು.

        ಸುಲ್ತಾನರ ಮತ್ತು ಮೊಘಲರ ಕಾಲಕ್ಕೆ ಸೇರಿದ್ದು, ಕ್ರಿ.ಶ 1206 ರಿಂದ 1720 ರವರೆಗೆ, ರಾಜಪ್ರಭುತ್ವದ ರಾಜ್ಯಗಳಾದ ಕುಶಾನಾ, ಯೌಧೇಯ, ಗುಪ್ತರು, ಪ್ರತಿಹಾರ್, ಚೋಳರು, ರಜಪೂತರು, ಮೊಘಲರು, ಮರಾಠರು, ಕಾಶ್ಮೀರ ಮತ್ತು ಬ್ರಿಟಿಷರ ಆಳ್ವಿಕೆಯ ಭಾರತ, ಫ್ರೆಂಚ್ ಮತ್ತು ಕೆಲವು ಆಸ್ಟ್ರೇಲಿಯಾದ ಕ್ರಿ.ಶ 1800-1900ರ ಕಾಲದ 40,282 ನಾಣ್ಯಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. 

      ಮುಟ್ಟುಗೋಲು ಹಾಕಿಕೊಳ್ಳಲಾದ ವಸ್ತುಗಳಲ್ಲಿ 18 ಪ್ರಾಚೀನ ಮುದ್ರೆ/ಸ್ಟಾಂಪ್/ ರಾಜರ ಆದೇಶಗಳನ್ನು ಕಾರ್ಯಗತಗೊಳಿಸಲು ಆಡಳಿತಗಾರರಿಂದ ಅಧಿಕಾರ ಹೊಂದಿರುವ ವ್ಯಕ್ತಿಯು ಧರಿಸುವ ಧಾರ್ಮಿಕ ಲಾಂಛನ ಮತ್ತು ರಾಜಮನೆತನದ ಮಹಿಳೆಯರು ಧರಿಸುತ್ತಿದ್ದ 1 ಬೆಳ್ಳಿಯ ಡಾಬೂ ಸೇರಿದೆ.

        ದೆಹಲಿ ವಿಮಾನ ನಿಲ್ದಾಣದಲ್ಲಿ 21.06.1994 ರಂದು ಹಾಂಕಾಂಗ್ ಗೆ ಪ್ರಯಾಣಿಸುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದು ಈ ಪುರಾತನ ನಾಣ್ಯಗಳು, ತಾಮ್ರದ ಸ್ಟಾಂಪ್/ಸೀಲುಗಳು, ಬೆಳ್ಳಿ ಡಾಬು ಮತ್ತು ಇತರ ಪ್ರಾಚೀನ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ನಂತರದ ಶೋಧನೆಯಲ್ಲಿ ಉಳಿದ ಚಿನ್ನದ ನಾಣ್ಯಗಳು ಮತ್ತು ವಸ್ತುಗಳನ್ನು ನಗರದ ಮನೆಯೊಂದರಿಂದ ವಶಪಡಿಸಿಕೊಳ್ಳಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries