ತಿರುವನಂತಪುರ: ದೇಶದಲ್ಲಿ ಪ್ರತಿದಿನ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳಲ್ಲಿ ಕೇರಳ ಕೂಡ ಒಂದು. ರಾಜ್ಯವು ಕೋವಿಡ್ ಹರಡುವಿಕೆಯಲ್ಲಿ ಒಂದು ಹಂತದಲ್ಲಿ ಏರಿಕೆ ಕಂಡರೂ ಕೋವಿಡ್ ನಿಂದ ರಕ್ಷಣೆಯಲ್ಲೂ ಉತ್ತಮ ಸಾಧನೆ ತೋರಿದೆ. ಆದರೆ ರಾಜ್ಯದಲ್ಲಿ ದಿನಕ್ಕೆ ದಿನಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ದೈನಂದಿನ ಸೋಂಕಿನ ಏರಿಳಿತ:
ಕಳೆದ ಕೆಲವು ದಿನಗಳಿಂದ ದೇಶದಲ್ಲಿ ದೈನಂದಿನ ಸೋಂಕು ದಾಖಲಾಗಿರುವ ರಾಜ್ಯಗಳಲ್ಲಿ ಕೇರಳ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ ಸೇರಿದಂತೆ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಕುಸಿಯುತ್ತಿರುವಾಗ ಕೇರಳವು ಸೋಂಕಿನ ಏರುಗತಿಯಲ್ಲಿತ್ತು. ಕೇರಳದ ಹೊರತಾಗಿ ದೆಹಲಿಯಲ್ಲೂ ಇದೇ ರೀತಿಯಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಕೇರಳದಲ್ಲಿ ನಿನ್ನೆ 7002 ಹೊಸ ಪ್ರಕರಣಗಳು ದೃಢಪಟ್ಟರೆ ದೆಹಲಿಯಲ್ಲಿ ಇದು 6782 ಆಗಿದೆ. ಮಹಾರಾಷ್ಟ್ರದಲ್ಲಿ 5246 ಜನರಿಗೆ ಸೋಂಕು ಪತ್ತೆಯಾಗಿದೆ. ಇದೇ ವೇಳೆ 11,277 ಸೋಂಕಿತ ಜನರನ್ನು ಗುಣಪಡಿಸಲಾಗಿದೆ. ಕೇರಳದಲ್ಲಿ 24 ಗಂಟೆಗಳಲ್ಲಿ 7699 ಜನರನ್ನು ಗುಣಪಡಿಸಲಾಗಿದೆ.
ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಕ್ಷೀಣಿಸುತ್ತಿವೆ:
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 24 ರಂದು ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ ರೋಗಿಗಳು ಏಕಕಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ದಿನ 97,417 ಜನರು ಚಿಕಿತ್ಸೆಯಲ್ಲಿದ್ದರು. ಅಂದಿನಿಂದ ರೋಗಿಗಳ ಸಂಖ್ಯೆ ನಿಯಮಿತವಾಗಿ ಕುಸಿಯುತ್ತಿದೆ ಎಂದು ಸಿಎಂ ಹೇಳಿರುವರು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಾಗ ಗುಣಮುಯಖರಾಗುವವರ ಸಂಖ್ಯೆ ಹೆಚ್ಚುತ್ತಿದೆ ಎಂಬುದೂ ಗಮನಾರ್ಹ.
1 ರಿಂದ 10 ಶೇಕಡಾ ಕಡಿಮೆ:
ಸರ್ಕಾರದ ಪ್ರಕಾರ, ಪ್ರತಿ ದಿನ ಹಿಂದಿನ ದಿನ ಮತ್ತು ವಾರಕ್ಕಿಂತ ಶೇಕಡಾ 1 ರಿಂದ 10 ರಷ್ಟು ಕಡಿಮೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕಳೆದ ಮಂಗಳವಾರಕ್ಕಿಂತ ಶೇಕಡಾ 10 ರಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಲಾಗಿದೆ.
ಮುನ್ನೆಚ್ಚರಿಕೆಗಳನ್ನು ಮರೆಯದಿರೋಣ:
ಕೋವಿಡ್ ಪ್ರಕರಣಗಳ ಕುಸಿತದೊಂದಿಗೆ, ಸೋಂಕು ಕಡಿಮೆಯಾಗುತ್ತಿದೆ ಎಂದು ನಾವು ಭಾವಿಸಬಹುದು. ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳು ಹಿಂದೆ ಬೀಳುತ್ತಿರುವುದು ಕಂಡುಬರುತ್ತಿದೆ. ಆದರೆ ಅಂತಹ ಉದಾಸೀನತೆಗೆ ಜನಸಾಮಾನ್ಯರು ತೊಡಗಿಸಿಕೊಳ್ಳಬಾರದು. ಅನೇಕ ಸ್ಥಳಗಳಲ್ಲಿ, ಸೋಂಕು ಒಮ್ಮೆ ಗುಣಮುಖವಾಗಿ ಬಳಿಕ ಮತ್ತೆ ತೀವ್ರಗತಿಯಲ್ಲಿ ಏರುತ್ತಿರುವುದು ಕಂಡುಬಂದಿದೆ. ಅಂತಹ ಪರಿಸ್ಥಿತಿ ಎದುರಾದರೆ ಸೋಂಕಿನ ಪರಿಣಾಮ ಅನಿಯಂತ್ರಿತವಾಗಿ ಬೆಳೆಯುತ್ತದೆ ಎಂದು ಸಿಎಂ ಎಚ್ಚರಿಸಿರುವರು.
ಜಾಗರೂಕತೆ ತೀವ್ರಗೊಳಿಸಬೇಕು:
ಪ್ರಕರಣಗಳು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಜಾಗರೂಕತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಹೇಳಿರುವರು. ರೋಗಲಕ್ಷಣಗಳು ಕಂಡುಬಂದರೆ ಆರೋಗ್ಯ ಕಾರ್ಯಕರ್ತರಿಗೆ ತಿಳಿಸಲು ಮತ್ತು ಎಚ್ಚರಿಕೆಯಿಂದ ಬ್ರೇಕ್ ದಿ ಚೈನ್ ಅಭಿಯಾನವನ್ನು ಕೈಗೊಳ್ಳಲು ಮುಂದಾಗಬೇಕು. ನಮ್ಮ ಮುನ್ನೆಚ್ಚರಿಕೆಗಳಿಂದಾಗಿ, ಕೋವಿಡ್‍ನ ಅತಿ ತೀವ್ರತೆಯ ಎರಡು ಪಟ್ಟು ಹೆಚ್ಚು ಜನರನ್ನು ತಡೆಯಲು ನಮಗೆ ಸಾಧ್ಯವಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರೂ ತೋರಿಸಿದ ಜಾಗರೂಕತೆಯು ಅನೇಕ ಮಾನವರ ಜೀವವನ್ನು ಉಳಿಸುತ್ತದೆ ಎಂದು ಅವರು ಹೇಳಿರುವರು.
ಸೋಂಕನ್ನು ಕ್ಷುಲ್ಲಕವೆಂದು ಭಾವಿಸಬಾರದು:
ಸಾವಿನ ಪ್ರಮಾಣ ಕಡಿಮೆ ಎಂದು ಅಜಾಗರೂಕರಾಗಿ ಸೋಂಕನ್ನು ಕ್ಷುಲ್ಲಕವೆಂದು ಯಾರೂ ತೀರ್ಮಾನಿಸಬಾರದು ಎಂದು ಸಿಎಂ ಎಚ್ಚರಿಸಿದ್ದಾರೆ. ಸೋಂಕಿನ ಅವಧಿಯಲ್ಲಿ ಉಂಟಾಗುವ ಕೆಲವು ದೈಹಿಕವಾದ ಅನಾರೋಗ್ಯಗಳು ಮಾರಕವಾಗಬಹುದು ಎಂದು ಅವರು ಸೂಚಿಸಿದ್ದಾರೆ. 'ಕೆಲವು ಜನರಿಗೆ ರಕ್ತ ಹೆಪ್ಪುಗಟ್ಟುವಿಕೆ ಇರಬಹುದು ಮತ್ತು ಇದರಿಂದ ಹೃದಯಾಘಾತಕ್ಕೆ ಕಾರಣವಾಗಬಹುದು. ಅಥವಾ ರೋಗದ ವಿರುದ್ಧದ ಹೋರಾಟದ ಭಾಗವಾಗಿ, ಕೆಲವು ಅಂಗಗಳ ಸಾಮಥ್ರ್ಯವು ಕಡಿಮೆಯಾಗುತ್ತದೆ. ಅದು ಸಾವಿಗೆ ಕಾರಣವಾಗುತ್ತದೆ. ಪೆÇೀಸ್ಟ್ಕೋವಿಡ್ ಸಿಂಡ್ರೋಮ್ ದೀರ್ಘಕಾಲದ ಸ್ಥಿತಿಯಾಗಿದ್ದು ಅದು ಸಣ್ಣ ಶೇಕಡಾವಾರು ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಸಿಎಂ ಹೇಳಿರುವರು.