ನವದೆಹಲಿ: ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿರುವ ರೈತ ಸಂಘಟನೆಗಳು, ನೇರ ಪರಿಹಾರಕ್ಕೆ ಒತ್ತಾಯಿಸಿವೆ.
ಸರ್ಕಾರವು ರೈತರ ಬೇಡಿಕೆಗಳನ್ನು ಪರಿಹರಿಸುವ ವಿಷಯದಲ್ಲಿ ಗಂಭೀರವಾಗಿದ್ದರೆ, ರೈತರಿಗೆ ಯಾವುದೇ ಷರತ್ತುಗಳನ್ನು ಹಾಕುವುದನ್ನು ನಿಲ್ಲಿಸಬೇಕು (ನೀವು ಬುರಾರಿ ಮೈದಾನಕ್ಕೆ 'ರಚನಾತ್ಮಕ ರೀತಿಯಲ್ಲಿ' ಹೋಗುವುದಾದರೆ ನಾವು ಮರುದಿನ ಮಾತುಕತೆ ಪ್ರಾರಂಭಿಸುತ್ತೇವೆ). ಮಾತುಕತೆಯು ಕಾಯಿದೆಗಳ ಪ್ರಯೋಜನಗಳ ಬಗ್ಗೆ ರೈತರಿಗೆ ವಿವರಣೆ ಮತ್ತು ಅದು ನೀಡುತ್ತಿರುವ ಪರಿಹಾರದ ಪ್ರಸ್ತಾವನೆಯನ್ನು ಹೊಂದಿರಬೇಕು ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ ಸಿಸಿ) ಹೇಳಿಕೆಯಲ್ಲಿ ತಿಳಿಸಿದೆ.
ಕಾಪೆರ್Çರೇಟ್ ಹಿತಾಸಕ್ತಿಗಳನ್ನು ಈಡೇರಿಸಲು ಚರ್ಚೆ ಇಲ್ಲದೆ ಜಾರಿಗೆ ತರಲಾದ 3 ರೈತ ವಿರೋಧಿ, ಜನ ವಿರೋಧಿ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ವಿದ್ಯುತ್ ಮಸೂದೆ 2020 ಅನ್ನು ಹಿಂಪಡೆಯಬೇಕೆಂದು ರೈತರು ಒತ್ತಾಯಿಸಿದ್ದಾರೆ. ಈ ಪ್ರತಿಭಟನೆಯನ್ನು ತೀವ್ರಗೊಳಿಸಲು ದೆಹಲಿಗೆ ರೈತರು ಬರಬೇಕು ಎಂದು ಎಐಕೆಎಸ್ ಸಿಸಿ ಎಲ್ಲಾ ರೈತ ಸಂಘಟನೆಗಳಿಗೆ ಕರೆ ನೀಡಿದೆ.
ಎಲ್ಲಾ ಕಾಪೆರ್Çರೇಟ್ ವಿರೋಧಿ, ರೈತ ಪರ ಸಂಘಟನೆಗಳು ಕೈಜೋಡಿಸಿ ಪ್ರತಿಭಟನೆ ನಡೆಸಬೇಕೆಂದು ಅದು ಕರೆ ನೀಡಿದೆ. 2020 ರ ಡಿಸೆಂಬರ್ 1 ರಿಂದ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ರಾಜ್ಯಮಟ್ಟದಲ್ಲಿಯೂ ಪ್ರತಿಭಟನೆಗೆ ಕರೆ ನೀಡಲಾಗಿದೆ.