ಮುಳ್ಳೇರಿಯ: ಕಾಡಾನೆಗಳ ಹಾವಳಿ ಮಿತಿಮೀರುತ್ತಿರುವ ಮುಳಿಯಾರು ಪ್ರದೇಶದಲ್ಲಿ ಪರಿಹಾರಕ್ಕಾಗಿ ಹಿರಿಯ ಅಧಿಕಾರಿಗಳ ಮಟ್ಟದ ಸಭೆ ಜರುಗಿತು. ಮುಳಿಯಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಿತು. ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಕಾಡಾನೆಗಳನ್ನು ಮರಳಿ ಕಳುಹಿಸುವ ಬಗ್ಗೆ ಅರಣ್ಯ ಇಲಾಖೆ ರಚಿಸಿರುವ ಕ್ರಿಯಾಯೋಜನೆ ಬಗ್ಗೆ ಸಭೆ ಚರ್ಚೆ ನಡೆಸಿದೆ. ಇದರ ಅಂಗವಾಗಿ ಡಿ.12 ವರೆಗೆ ಸಂಚಾರಕ್ಕೆ ತಡೆಯಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.135 ಕಾರ್ಮಿಕರನ್ನು ಬಳಸಿ 21 ದಿನಗಳ ಅವಧಿಯಲ್ಲಿ ಆನೆಗಳನ್ನು ಕರ್ನಾಟಕದ ವನಗಳಿಗೆ ಮರಳಿಸಲಾಗುವುದು. 4 ಆನೆಗಳು ಈಗಾಗಲೇ ಮರಳಿವೆ. ಈ ಅವಧಿಯಲ್ಲಿ ಸಾರ್ವಜನಿಕರು ಜಾಗರೂಕತೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಉತ್ತರ ವಲಯ ಚೀಫ್ ಕನ್ಸರ್ವೇಟರ್ ಆಫ್ ಫಾರೆಸ್ಟ್ ಡಿ.ಕೆ.ವಿನೋದ್ ಕುಮಾರ್, ಡಿವಿಝನಲ್ ಪಾರೆಸ್ಟ್ ಆಫೀಸರ್ ಪಿ.ಕೆ.ಅನೂಪ್ ಕುಮಾರ್, ರೇಂಜ್ ಆಫೀಸರ್ ಎನ್.ಅನಿಲ್ ಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ವಿಶ್ವಂಭರನ್ ಮೊದಲಾದವರು ಉಪಸ್ಥಿತರಿದ್ದರು.