ಮಂಜೇಶ್ವರ: ಮಾನವೀಯ ಸೇವೆಯ ಮಹಾ ಆಲಯವೆನಿಸಿರುವ ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರಕ್ಕೆ ದ.ಕ.ರಾಜ್ಯೋತ್ಸವ ಪುರಸ್ಕಾರದ ಗರಿ.
2020 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕೆ 'ಸ್ನೇಹಾಲಯ'ವು ಆಯ್ಕೆಯಾಗಿದೆ. ನ.1 ರಂದು ಪೂರ್ವಾಹ್ನ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಸಮಾರಂ`Àದಲ್ಲಿ ಪುರಸ್ಕಾರ ವಿತರಣೆ ನಡೆಯಲಿದೆ. ಸ್ನೇಹಾಲಯದ ವಿವಿಧ ಮುಖಗಳ ಸಮಾಜ ಸೇವೆಯನ್ನು ಗುರುತಿಸಿ ಸಂಸ್ಥೆಯನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗಡಿನಾಡು ವಿಭಾಗದಿಂದ ಆಯ್ಕೆಯಾಗಿರುವ ಏಕೈಕ ಸಂಸ್ಥೆ ಇದಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಒಟ್ಟು 11 ಸಂಸ್ಥೆಗಳು ಹಾಗೂ ಪ್ರಮುಖ 27 ವ್ಯಕ್ತಿಗಳನ್ನು ಈ ಬಾರಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಅಚ್ಚಕನ್ನಡ ಪ್ರದೇಶವಾಗಿರುವ ಕೇರಳದ ಮಂಜೇಶ್ವರ ಸಮೀಪದ ಪಾವೂರು ಬಾಚಳಿಕೆಯಲ್ಲಿ ಕಳೆದ 11 ವರ್ಷಗಳಿಂದ ಸ್ನೇಹಾಲಯವು ತನ್ನ ಮೌನ ಸೇವೆಯನ್ನು ನಡೆಸುತ್ತಿದೆ. ಗೊತ್ತು ಗುರಿಯಿಲ್ಲದೆ ರಸ್ತೆಯಲ್ಲಿ ನಡೆದಾಡುತ್ತಿರುವ, ಬೀದಿ ಬದಿಯನ್ನೇ ಮನೆಯನ್ನಾಗಿ ಮಾಡಿಕೊಂಡಿರುವ ಅನಾಥ, ಮಾನಸಿಕ ರೋಗಿಗಳನ್ನು ಎತ್ತಿತಂದು ಅವರಿಗೆ ಸೂಕ್ತ ಆಶ್ರಯ, ಆರೈಕೆ ನೀಡಿ, ಚಿಕಿತ್ಸೆ ಒದಗಿಸಿ ಸಾಕಿ ಸಲಹುತ್ತಿರುವ ಸ್ನೇಹಾಲಯ ಸಂಸ್ಥೆಯ ಸೇವೆಯು ನಿಜಕ್ಕೂ ಅದ್ಭುತ ಹಾಗೂ ಅನನ್ಯವಾದುದು. ಕಳೆದ 11 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯು ಈಗಾಗಲೇ ಒಂದು ಸಹಸ್ರಕ್ಕೂ ಅ„ಕ ಮಂದಿಯನ್ನು ಸಂಪೂರ್ಣ ಗುಣಪಡಿಸಿದ್ದು, ಅವರು ಸಹಜ ಬಾಳು ನಡೆಸುವಂತಾಗಿದೆ. ಸದ್ಯ 250 ರಷ್ಟು ಮಂದಿ ನಿವಾಸಿಗಳು ಅಲ್ಲಿ ನಿರೀಕ್ಷೆಯ ಬದುಕನ್ನು ಬದುಕುತ್ತಿದ್ದಾರೆ.
ಮನೋಜಾಡ್ಯ ಪುರುಷರ ಥರಾ ಮಹಿಳೆಯರೂ ಹಾದಿಬೀದಿಯಲ್ಲಿ ಬಿದ್ದುಕೊಂಡು ಅವರ ಬದುಕು ಕಮರುತ್ತಿರುವುದನ್ನು ಕಂಡೊಕೊಂಡು ಕಳೆದ ಒಂದು ವರ್ಷದಿಂದ ಸ್ನೇಹಾಲಯ ಮಾನಸಿಕ ಅಸ್ವಸ್ಥ ಮಹಿಳಾ ಪುನಶ್ಚೇತನ ಕೇಂದ್ರವೂ ತೆರೆಯಲ್ಪಟ್ಟು, ನೂರಾರು ಮನೋವಿಕಲೆ ಮಹಿಳೆಯರಿಗೆ ಅಭಯವೊದಗಿಸಿದೆ. ಕೇರಳ ಸರ್ಕಾರದ ಮಾನ್ಯತೆ ಹೊಂದಿ ಈ ಸಂಸ್ಥೆ ಕಾರ್ಯಾಚರಿಸುತ್ತಿದೆ. ಇದಲ್ಲದೆ ಮಂಗಳೂರಿನ ವೆನ್‍ಲಾಕ್ ಸರ್ಕಾರಿ ಆಸ್ಪತ್ರೆಯ ಬಡ ರೋಗಿಗಳ ಪರಿಚಾರಕರಿಗೆ ಪ್ರತಿನಿತ್ಯ ಊಟ ವಿತರಣೆ, ಬಡ ಕುಟುಂಬಗಳಿಗೆ ಮನೆದಾನ, ವಿದ್ಯಾದಾನ, ವಸ್ತ್ರದಾನ, ಬಡ ರೋಗಿಗಳಿಗೆ ಔಷ„ ಪೂರೈಕೆ, ವಿವಾಹ ಸಹಾಯ, ವ್ಯಾಟ್ಸಾಪ್ ಚ್ಯಾರಿಟಿ ಇತ್ಯಾದಿ ನೆರವು ಮೂಲಕ ನೂರಾರು ಕಡುಬಡ ಕುಟುಂಬಗಳ ಬದುಕನ್ನು ಹಸನುಗೊಳಿಸುತ್ತಿದೆ. ಸ್ನೇಹಾಲಯದ ಸ್ನೇಹಮಯಿ ಸೇವೆಗಳನ್ನು ಗುರುತಿಸಿ ಈ ಬಾರಿ ದ.ಕ. ರಾಜ್ಯೋತ್ಸವ ಪ್ರಶಸ್ತಿಗೆ ಸಂಸ್ಥೆಯನ್ನು ಆಯ್ಕೆ ಮಾಡಿರುವುದು ಅಭಿಮಾನಿಗಳಿಗೆ ಹರ್ಷವುಂಟು ಮಾಡಿದೆ.
ತಮ್ಮ ಸೇವೆಯನ್ನು ಗುರುತಿಸಿ ದ.ಕ. ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಸಂತೋಷ ತಂದಿರುವುದಾಗಿಯೂ ಈ ಪುರಸ್ಕಾರದಿಂದಾಗಿ ಸೇವಾ ಕ್ಷೇತ್ರದಲ್ಲಿ ತಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿರುವುದಾಗಿಯೂ ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.