ಕಾಸರಗೋಡು: ಜುವೆಲ್ಲರಿ ಹೂಡಿಕೆ ವಂಚನೆ ಪ್ರಕರಣದಲ್ಲಿ ರಿಮಾಂಡ್‌ನಲ್ಲಿರುವಾಗ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಎಂ.ಸಿ.ಕಮರುದ್ದೀನ್ ಗೆ ಹೃದಯ ಕಾಯಿಲೆ ಇರುವುದು ದೃಢ ಪಟ್ಟಿದೆ. ಎಂಎಲ್‌ಎ ಅವರಿಗೆ ಆಂಜಿಯೋಗ್ರಾಮ್‌ನಲ್ಲಿ ಹೃದ್ರೋಗ ಇರುವುದು ಪತ್ತೆಯಾದ ಕಾರಣ ಶಸ್ತ್ರಕ್ರಿಯೆ ನಡೆಸಲು ಆಸ್ಪತ್ರೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕಾಞಂಗಾಡ್ ಜಿಲ್ಲಾ ಜೈಲಿನಲ್ಲಿ ರಿಮಾಂಡ್ ಆಗಿರುವ ಖಮರುದ್ದೀನ್ ಅವರ ಇಸಿಜಿ ಅಸಹಜವಾಗಿದೆ ಎಂದು ತಿಳಿದುಬಂದ ಬಳಿಕ ಅವರನ್ನು ವೈದ್ಯಕೀಯ ಕಾಲೇಜು ಹೃದ್ರೋಗ ವಿಭಾಗದ ಐಸಿಯುಗೆ ದಾಖಲಿಸಲಾಗಿತ್ತು. ರಕ್ತ ಪರೀಕ್ಷೆಯ ವರದಿಯ ಅನುಸಾರ ಆಂಜಿಯೋಗ್ರಾಮ್ ನ್ನು ಗುರುವಾರ ಬೆಳಿಗ್ಗೆ ನಡೆಸಲಾಯಿತು.
ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಡಾ.ಕೆ.ಎಂ.ಕುರಿಯಾಕೋಸ್, ಅಧೀಕ್ಷಕ; ಡಾ.ಕೆ.ಸುದೀಪ್, ಉಪ ಅಧೀಕ್ಷಕ; ಮನೋಜ್, ಹೃದ್ರೋಗ ತಜ್ಞ ಡಾ. ಅಶ್ರಫ್, ಔಷಧ ವಿಭಾಗದ ಮುಖ್ಯಸ್ಥ; ರಂಜಿತ್ ಕುಮಾರ್ ಒಳಗೊಂಡ ವೈದ್ಯಕೀಯ ಮಂಡಳಿ ಪರಿಶೀಲಿಸುತ್ತಿದೆ.