ಕಾಸರಗೋಡು: ಚೆರ್ವತ್ತೂರು ಫ್ಯಾಶನ್ ಗೋಲ್ಡ್ ಜುವೆಲ್ಲರಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಪರಾರಿಯಾಗಿದ್ದ ಪೂಕೋಯ ತಂಙಳ್ ಇಂದು ನ್ಯಾಯಾಲಯದಲ್ಲಿ ಶರಣಾಗುವ ನಿರೀಕ್ಷೆಯಿದೆ. ಏತನ್ಮಧ್ಯೆ, ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಶಾಸಕ ಎಂಸಿ ಖಮರುದ್ದೀನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ತನಿಖಾ ತಂಡಕ್ಕೆ ಸಿಕ್ಕಿಹಾಕಿಕೊಳ್ಳದೆ ಅವರು ನ್ಯಾಯಾಲಯದಲ್ಲಿ ಶರಣಾಗುವುದು ಇದರ ಉದ್ದೇಶವಾಗಿದೆ. ವಿಚಾರಣೆಗಾಗಿ ಶನಿವಾರ ಸಂಜೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿತ್ತು. ಆದರೆ ಅವರು ಹಾಜರಾಗದೆ ತಮ್ಮ ವಕೀಲರನ್ನು ಭೇಟಿಯಾಗಿ ಬಳಿಕ ತಲೆಮರೆಸಿಕೊಂಡಿದ್ದರು.
ಇದರ ಬೆನ್ನಲ್ಲೇ ಪೆÇಲೀಸರು ಚಂದೇರಾದಲ್ಲಿ ಅವರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಪರಾರಿಯಾಗಿರುವುದು ಸ್ಪಷ್ಟವಾದ ನಂತರ ತನಿಖಾ ತಂಡ ಆರೋಪಿಗಳ ವಿರುದ್ಧ ಲುಕ್ ಔಟ್ ನೋಟಿಸ್ ನೀಡಿತ್ತು. ಪ್ರಕರಣದ ಮೊದಲ ಆರೋಪಿಗಳ ಬಗ್ಗೆ ತನಿಖಾ ತಂಡ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಪ್ರಕರಣದ ತನಿಖೆ ನಡೆಯುತ್ತಿರುವಾಗ ಅವರ ಮಗ ಇಶಾನ್ ಕೊಲ್ಲಿಗೆ ಪಲಾಯನಗೈದಿರುವುದಾಗಿ ತಿಳಿದುಬಂದಿದೆ. ಅವನ ನೇತೃತ್ವದಲ್ಲಿ ಕೋಟ್ಯಂತರ ರೂಪಾಯಿಗಳನ್ನು ವಂಚಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಅಪರಾಧ ವಿಭಾಗಕ್ಕೆ ಇದುವರೆಗೆ 117 ಪ್ರಕರಣಗಳು ಬಂದಿವೆ. ಎಂಸಿ ಕಮರುದ್ದೀನ್ ಅವರನ್ನು ವಿಚಾರಣೆಗೆ ಮಾಡಲು ಕಾಞಂಗಾಡ್ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯನ್ನು ಸಹ ಇಂದು ಪರಿಗಣಿಸಲಾಗುವುದು. ಏಕೆಂದರೆ ದೂರುಗಳ ಸಂಖ್ಯೆ ಹೆಚ್ಚಿರುವುದರಿಂದ ತ್ವರಿಗತಿಯ ಆವಶ್ಯಕತೆ ಮನಗಾಣಲಾಗಿದೆ.