ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯದ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪುನಃ ಪ್ರತಿಷ್ಟಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಲ್ಲ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಕ್ಷೇತ್ರದ ಅರ್ಚಕ ರಾಧಾಕೃಷ್ಣ ಭಟ್ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪ್ರೊ.ಎ.ಶ್ರೀನಾಥ್, ಕುಂಞಪ್ಪು ನಾಯಕ್ ಗುರುಸ್ವಾಮಿ, ಸಮಿತಿ ಕಾರ್ಯದರ್ಶಿ ಶ್ಯಾಮಪ್ರಸಾದ್ ಮಾನ್ಯ, ಕೋಶಾಧಿಕಾರಿ ರಾಮ.ಕೆ ಕಾರ್ಮಾರ್, ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್, ದಯಾನಂದ ಮೇಗಿನಡ್ಕ, ಸತೀಶ, ಸುಂದರ ಶೆಟ್ಟಿ ಕೊಲ್ಲಂಗಾನ ಮೊದಲಾದವರು ಉಪಸ್ಥಿತರಿದ್ದರು. ಪುನಃ ಪ್ರತಿಷ್ಠಾ ಮಹೋತ್ಸವ ನ.30 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಕೋವಿಡ್ ಮಾನದ ಂಡ ಅನುಸಾರ ನಡೆಯಲಿದೆ.