ಬದಿಯಡ್ಕ: ಮಾನವನಿಗೆ ಸಂಕಷ್ಟ ಬಂದೊದುಗುವುದು ವಿಧಿಲಿಖಿತ.ಆದರೂ ಮಾನವೀಯತೆ ಮರೆದು ಸಹಕರಿಸುವ ದಾನಿಗಳಿಗೇನೂ ಕೊರತೆಯಿಲ್ಲ.
ನೀರ್ಚಾಲು ಸಮೀಪದ ಪುದುಕೋಳಿಯ ಬಾಬು ಹಾಗೂ ಉಷಾ ದಂಪತಿಗಳು ಮೂವರು ಮಕ್ಕಳೊಂದಿಗೆ ಸಂತೃಪ್ತಿಯ ಜೀವನ ನಡೆಸುತ್ತಿದ್ದರು.ಆದರೆ ಇತ್ತೀಚೆಗೆ ಉಷಾರವರಿಗೆ ಅನಾರೋಗ್ಯ ಕಾಡಲಾರಂಭಿಸಿ ವಿವಿಧ ಆಯುರ್ವೇದ ಅಲೋಪತಿ ಚಿಕಿತ್ಸೆಗೆ ಲಕ್ಷಾಂತರ ರೂ. ವ್ಯಯಿಸಿಯೂ ಅನಾರೋಗ್ಯದಿಂದ ಇನ್ನೂ ಗುಣಮುಖರಾಗಿಲ್ಲ. ಪ್ರಸ್ತುತ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಒಂದು ಕಿಡ್ನಿ ಸಂಪೂರ್ಣವೂ ಇನ್ನೊಂದು ಕಿಡ್ನಿ ಭಾಗಶಃ ಹಾನಿಗೊಂಡಿದೆ. ಮುಂದೆ ದಾನಿಗಳಿಂದ ಕಿಡ್ನಿಪಡೆದು ಜೋಡಿಸಬೇಕಾದೀತು ಎಂದು ವೈದ್ಯರು ತಿಳಿಸಿರುತ್ತಾರೆ. ಈಗಾಗಲೇ ಲಕ್ಷಾಂತರ ಹಣ ಖರ್ಚಾಗಿ ಕಂಗಾಲಾದ ಬಡಕುಟುಂಬ ತಮ್ಮೆಲ್ಲರ ಸಹಾಯ ನಿರೀಕ್ಷೆಯಲ್ಲಿ ನೀರ್ಚಾಲು ನಿವೇದಿತಾ ಸೇವಾ ಸಂಸ್ಥೆಯನ್ನು ಸಂಪರ್ಕಿಸಿ ಸಹಾಯ ಧನ ಯಾಚಿಸಿದ್ದಾರೆ. ಸಹೃದಯ ಬಂಧುಗಳು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಈ ಬಡಕುಟುಂಬದ ಜೊತೆ ನಿಂತು ಧನಸಹಾಯ ನೀಡಿ ಸಹಕರಿಸಿ ಒಂದು ಅಮೂಲ್ಯ ಜೀವವನ್ನು ಸಂಕಷ್ಟದಿಂದ ಪಾರು ಮಾಡುವಂತೆ ಈ ಮೂಲಕ ವಿನಂತಿಸಲಾಗಿದೆ.
ದಾನಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ತಮ್ಮ ದೇಣಿಗೆಯನ್ನು ಕಳುಹಿಸಿಕೊಡಬಹುದು
Babu. C