ಕಲ್ಪೆಟ್ಟ: ವಯನಾಡದಲ್ಲಿ ಮಾವೋವಾದಿಗಳೊಂದಿಗಿನ ಘರ್ಷಣೆ ಕೇವಲ ಏಕಮುಖವಾಗಿತ್ತೆಂಬುದು ಕೇವಲ ಆರೋಪವಷ್ಟೇ ಆಗಿದೆ ಎಂದು ವಯನಾಡ್ ಎಸ್ಪಿ ಜಿ.ಪುಂಗುಳಿಲಿ ಹೇಳಿದ್ದಾರೆ. ಮಾವೋವಾದಿಗಳ ತಂಡ ಪೋಲೀಸರತ್ತ ಮೊದಲು ಗುಂಡು ಹಾರಿಸಿದರು. ಮಾವೋವಾದಿ ಗುಂಪಿನ ಪ್ರತಿಯೊಬ್ಬರೂ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಗುಂಪಿನಲ್ಲಿರುವ ಜನರನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಎಸ್ಪಿ ಹೇಳಿದರು.
ಎನ್‍ಕೌಂಟರ್ ಸಮಯದಲ್ಲಿ ಹೆಚ್ಚಿನ ಗಾಯಗಳು ವೆಲ್ಮುರುಗನ್ ಸಾವಿಗೆ ಕಾರಣವಾಗಿರಬಹುದು ಎಂದು ಅವರು ಹೇಳಿದರು. ಘರ್ಷಣೆಯಲ್ಲಿ ಯಾವುದೇ ಪೆÇಲೀಸ್ ಸಿಬ್ಬಂದಿ ಗಾಯಗೊಂಡಿಲ್ಲ ಎಂದು ಎಸ್ಪಿ ಹೇಳಿದರು. ಹತ್ಯೆಗೀಡಾದ ಮಾವೋವಾದಿ ವೆಲ್ಮುರುಗನ್ ಅವರ ಶವವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಮರಣೋತ್ತರ ಪರೀಕ್ಷೆ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ಇದನ್ನು ಅವರ ಸಹೋದರ ಮುರುಗನ್, ತಾಯಿ ಕಣ್ಣಮ್ಮಾಲ್ ಮತ್ತು ಗ್ರೋವಾಸು ನೇತೃತ್ವದ ತಂಡ ನೃತದೇಹವನ್ನು ಪಡೆದುಕೊಂಡು ತಮಿಳುನಾಡಿಗೆ ಕೊಂಡೊಯ್ದರು. ಎನ್‍ಕೌಂಟರ್ ನಡೆದ ಸ್ಥಳಕ್ಕೆ ಪೆÇಲೀಸರು ಮೊದಲು ಮಾಧ್ಯಮಗಳಿಗೆ ಅವಕಾಶ ನೀಡಿರಲಿಲ್ಲ. ಬಳಿಕ ಕ್ಯಾಮರಾ ಕೊಂಡೊಯ್ಯಲು ಅನುಮತಿ ನೀಡಲಾಯಿತು. ಪೆÇಲೀಸರು ಬುಧವಾರವೂ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿದರೆಂದು ತಿಳಿದುಬಂದಿದೆ.