ನವದೆಹಲಿ: ಮೋದಿ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ವಿವಿಧ ಕೃಷಿ ಮಸೂದೆ ವಿರೋಧಿಸಿ ಪಂಜಾಬ್, ಹರಿಯಾಣ ಹಾಗೂ ಇತರೆ ರಾಜ್ಯಗಳ ರೈತರು ದೆಹಲಿ ಚಲೋ ಆಂದೋಲನ ನಡೆಸುತ್ತಿದ್ದು, ಅವರಿಗೆ ಬೆಂಬಲ ನೀಡಲು ಉತ್ತರ ಪ್ರದೇಶ ಕೆಲ ರೈತ ಸಂಘಟನೆಗಳು ಶನಿವಾರ ರಾಷ್ಟ್ರ ರಾಜಧಾನಿಯ ಗಡಿ ತಲುಪಿದ್ದಾರೆ.
ಪಂಜಾಬ್ ರೈತ ಸಂಘಟನೆಗಳು ನೀಡಿದ 'ದೆಹಲಿ ಚಲೋ' ಪ್ರತಿಭಟನೆಯ ಭಾಗವಾಗಿ ಉತ್ತರ ಪ್ರದೇಶದಿಂದ ಸುಮಾರು 200 ರೈತರು ಆಗಮಿಸಿದ್ದು, ಘಾಜಿಪುರ ಗಡಿಯಲ್ಲಿದ್ದಾರೆ. ಪೆÇಲೀಸ್ ಅಧಿಕಾರಿಗಳು ಅವರೊಂದಿಗೆ ಮಾತನಾಡುತ್ತಿದ್ದಾರೆ ಎಂದು ದೆಹಲಿಯ ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಉತ್ತರ ಪ್ರದೇಶ ರೈತರು ವಾಹನಗಳ ಮೂಲಕ ದೆಹಲಿಗೆ ಆಗಮಿಸಿದ್ದು, ಪ್ರತಿಭಟನಾ ನಿರತ ರೈತರು ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆಯಾಗದಿರಲಿ ಎಂದು ತಮ್ಮ ವಾಹನಗಳನ್ನು ಗೊತ್ತುಪಡಿಸಿದ ಸ್ಥಳದಲ್ಲಿ ನಿಲ್ಲಿಸಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
"ಈ ರೈತರು ದೆಹಲಿಯ ಕಡೆಗೆ ಹೋಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ನಾವು ಅವರೊಂದಿಗೆ ಮಾತನಾಡುತ್ತಿದ್ದೇವೆ. ಪ್ರಸ್ತುತ ಸುಮಾರು 200 ರೈತರಿದ್ದಾರೆ. ಅವರು ಯುಪಿ ಗೇಟ್‍ನಲ್ಲಿ ಕುಳಿತಿದ್ದಾರೆ" ಎಂದು ಉಪ ಪೆÇಲೀಸ್ ಆಯುಕ್ತ (ಪೂರ್ವ) ಜಸ್ಮೀತ್ ಸಿಂಗ್ ಹೇಳಿದ್ದಾರೆ.