ತಿರುವನಂತಪುರ: ರಾಜತಾಂತ್ರಿಕ ಸಾಮಾನುಗಳ ಮೂಲಕ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸ್ವಪ್ನಾ ಸುರೇಶ್ ಹೆಸರಿನಲ್ಲಿ ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಲಾಗಿದೆ. ತನಿಖಾ ತಂಡದ ಕೆಲವು ಸದಸ್ಯರು ಮುಖ್ಯಮಂತ್ರಿಯ ಹೆಸರನ್ನು ನಮೂದಿಸುವಂತೆ ಒತ್ತಾಯಿಸಿದರು ಎಂದು ಆಡಿಯೋ ಸಂದೇಶದಲ್ಲಿ ಸ್ವಪ್ನಾ ಸುರೇಶ್ ಹೇಳುತ್ತಾರೆ.
ಸ್ವಪ್ನಾ ಹೆಸರಿನಲ್ಲಿ ಆನ್‌ಲೈನ್ ಸುದ್ದಿ ಪೋರ್ಟಲ್ ಧ್ವನಿ ಸಂದೇಶವನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ಅಟ್ಟಕ್ಕುಳಂಗರ ಜೈಲಿನಲ್ಲಿ ದಾಖಲಾದ ಸ್ವಪ್ನಾಳ ಧ್ವನಿಯ ಸಂದೇಶದ ಬಗ್ಗೆ ಹಲವು ಸಂದೇಹಗಳೂ ವ್ಯಕ್ತವಾಗಿದ್ದು ಪ್ರಕರಣ ಅಡಿಮೇಲುಗೊಳಿಸುವ ಹುನ್ನಾರದ ಸಾಧ್ಯತೆ ವ್ಯಕ್ತವಾಗುತ್ತಿದೆ.
ಸಿಎಂ ವಿರುದ್ಧ ಹೇಳಿಕೆ ನೀಡುವ ಒತ್ತಡ:
ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿದರೆ ಕ್ಷಮೆಯಾಚಿಸಬಹುದು ಎಂದು ತನಿಖಾ ಸಂಸ್ಥೆ ತಿಳಿಸಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಆಡಿಯೋ ಸಂದೇಶದ ಪ್ರಕಾರ, ನ್ಯಾಯಾಲಯಕ್ಕೆ ಸಲ್ಲಿಸಿದ ಹೇಳಿಕೆಯಲ್ಲಿ ತಾನು ಶಿವಶಂಕರ್ ಅವರೊಂದಿಗೆ ಯುಎಇಗೆ ಹೋಗಿದ್ದೇನೆ ಮತ್ತು ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಪ್ಪೊಪ್ಪಿಕೊಂಡು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದೆ.ಇದು ಮುಖ್ಯಮಂತ್ರಿಯನ್ನು ಗುರಿಯಾಗಿಸಿಕೊಂಡು ರಾಜಕೀಯ ಪ್ರೇರಿತ ವಿಚಾರಣೆಯಾಗಿದೆ ಎಂಬ ಸರ್ಕಾರದ ಆರೋಪವನ್ನು ದೃಢೀಕರಿಸುವ ಸ್ವಪ್ನಾಳ ಆಡಿಯೋ ರೆಕಾರ್ಡಿಂಗ್ ಅಚ್ಚರಿ ಮೂಡಿಸಿದೆ. ಈ ಹಿಂದೆ ಎಂ.ಶಿವಶಂಕರ್ ಕೂಡ ಇದೇ ರೀತಿಯ ಆರೋಪ ಮಾಡಿದ್ದರು. ಶಿವಶಂಕರ್ ಅವರು ಪ್ರಕರಣದ ಒಟ್ಟು ಲಕ್ಷ್ಯ ರಾಜಕೀಯ ಉದ್ದೇಶದಿಂದಿದ್ದು ತನ್ನನ್ನು ಬಲಿಯಾಗಿಸಿದ್ದಾರೆ ಮತ್ತು ರಾಜಕೀಯ ನಾಯಕರ ಹೆಸರನ್ನು ನೀಡದ ಕಾರಣ ಬಂಧಿಸಿದರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ, ನಂತರ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಬಿಜೆಪಿಯಿಂದ ತನಿಖೆಗೆ ಒತ್ತಾಯ:
ಜೈಲಿನಲ್ಲಿರುವ ಸ್ವಪ್ನಾಳ ಧ್ವನಿಯಲ್ಲಿ ಅಂತಹ ಧ್ವನಿ ಸಂದೇಶ ಹೇಗೆ ಹೊರಬಂದಿದೆ ಎಂದು ತನಿಖೆಗೆ ಬಿಜೆಪಿ ಒತ್ತಾಯಿಸಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಪ್ರತಿಕ್ರಿಯೆ ನೀಡುತ್ತಾ, ಜೈಲಿಗೆ ಭೇಟಿ ನೀಡಿರುವ ಕೆಲವು ನಾಯಕರು ಕಾನೂನು ಉಲ್ಲಂಘಿಸಿ ಸ್ವಪ್ನಾಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು. ಇದು ಅಕ್ಷರಶಃ ದೃಢ ಪಟ್ಟಿದೆ ಎಂಬ ಸುದ್ದಿ ಈಗ ಹೊರಬಂದಿದೆ.