HEALTH TIPS

ಬಿಹಾರ ಚುನಾವಣಾ ಫಲಿತಾಂಶ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಆರ್​ಜೆಡಿ-ಕಾಂಗ್ರೆಸ್​ ನಿಯೋಗ

         ಪಟನಾ: ಎಕ್ಸಿಟ್​ ಪೋಲ್​ಗಳ ಲೆಕ್ಕಾಚಾರವೆಲ್ಲ ತಲೆಕೆಳಗಾಗುವಂತಹ ಫಲಿತಾಂಶ ಬಿಹಾರದಲ್ಲಿ ಬಂದಿದೆ. ಆರ್​ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಗೆ ಈ ಬಾರಿಯ ಬಿಹಾರ ಗದ್ದುಗೆ ಎಂದು ಅನೇಕ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಫಲಿತಾಂಶ ತಲೆಕೆಳಗಾಗಿದ್ದು, ಜೆಡಿಯು-ಬಿಜೆಪಿ ನೇತೃತ್ವದ ಎನ್​ಡಿಎಗೆ ಬಹುಮತ ಸಿಕ್ಕಿದ್ದು, ನಿತೀಶ್​ ಕುಮಾರ್​ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿಗೇರಲಿದ್ದಾರೆ.

        ಅತಿ ಕಿರಿಯ ವಯಸ್ಸಿನ ಸಿಎಂ ಆಗುವ ಕನಸು ಕಂಡಿದ್ದ ತೇಜಸ್ವಿ ಯಾದವ್​ಗೆ ಫಲಿತಾಂಶ ತಣ್ಣೀರೆರಚಿದೆ. ಇದರ ಬೆನ್ನಲ್ಲೇ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರ್​ಜೆಡಿ ಆರೋಪಿಸಿದೆ. ಸ್ಥಳೀಯ ಆಡಳಿತ ಮಂಡಳಿಯ ಸುಮಾರು 8ಕ್ಕೂ ಅಧಿಕ ಕ್ಷೇತ್ರಗಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸ್ಥಳೀಯ ಆಡಳಿತ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

         ಆರ್​ಜೆಡಿ ಮತ್ತು ಕಾಂಗ್ರೆಸ್​ ನಾಯಕರನ್ನು ಒಳಗೊಂಡ ನಿಯೋಗವೊಂದು ಬಿಹಾರ ರಾಜಧಾನಿ ಪಟನಾದಲ್ಲಿರುವ ಚುನಾವಣಾ ಆಯೋಗಕ್ಕೆ ತೆರಳಿ ದೂರು ಸಲ್ಲಿಸಿದೆ. ಆಡಳಿತಾರೂಢ ಎನ್​ಡಿಎ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದೆ.

ಆರಂಭದಲ್ಲಿ ನಮ್ಮ ಅಭ್ಯರ್ಥಿಗಳು 5 ರಿಂದ 600 ಮತಗಳ ಅಂತರದಿಂದ ಗೆದ್ದಿರುವುದಾಗಿ ಹೇಳಿದರು. ಆದರೆ, ಕೊನೆಯಲ್ಲಿ 12, 13 ಮತಗಳ ಅಂತರದಲ್ಲಿ ಸೋತಿರುವುದಾಗಿ ಹೇಳಿದರು ಎಂದು ಆರ್​ಜೆಡಿ ನಾಯಕರು ದೂರಿದ್ದಾರೆ.

ಚುನಾವಣಾ ಆಯೋಗ ದೂರನ್ನು ಸ್ವೀಕರಿಸಿದ್ದು, ಮರು ಮತಎಣಿಕೆ ಮಹಾಮೈತ್ರಿ ನಾಯಕರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

        ಮಂಗಳವಾರ 8 ಗಂಟೆಗೆ ಆರಂಭವಾದ ಮತದಾನ ತಡರಾತ್ರಿಯಾದರೂ ಮುಗಿಯಲಿಲ್ಲ. 243 ಕ್ಷೇತ್ರಗಳ ಪೈಕಿ ಬಿಜೆಪಿ 74, ಜೆಡಿಯು 43, ಎಚ್​ಎಎಂ 4, ವಿಕಾಸ ಶೀಲ್ ಇನ್​ಸಾನ್ ಪಾರ್ಟಿ 4, ಎಲ್​ಜೆಪಿ 1 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಆರ್​ಜೆಡಿ 75 ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮೈತ್ರಿಕೂಟ ನಿರೀಕ್ಷಿತ ಸರಳ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಕಾರಣ ಪ್ರತಿಪಕ್ಷದಲ್ಲೇ ಕೂರಬೇಕಾದ ಸ್ಥಿತಿ ಉಂಟಾಗಿದೆ. ಕಾಂಗ್ರೆಸ್ 19, ಎಐಎಂಇಐಎಂ 5, ಎಡರಂಗ 16 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries