ಕುಂಬಳೆ: ಕೆಲವು ದಿನಗಳ ಹಿಂದೆ ಬಂದ್ಯೋಡು ಅಡ್ಕ ಶೂಟೌಟ್ ಪ್ರಕರಣದಲ್ಲಿ ದೂರುದಾರನ್ನೇ ಪೋಲೀಸರು ಬಂಧಿಸಿರುವುದು ವಂಚನೆ ಎಂದು ತಾಯಿ ಮತ್ತು ಪತ್ನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 31 ರಂದು ಎರಡು ಗುಂಪುಗಳ ಮಧ್ಯೆ ಬಂದ್ಯೋಡು ಸಮೀಪದ ಅಡ್ಕದಲ್ಲಿ ಶೂಟೌಟ್ ನಡೆದಿತ್ತು. ಈ ಪ್ರಕರಣದ ದೂರುದಾರರಾದ ಬಾಚು ಎಂದು ಕರೆಯಲ್ಪಡುವ ಬಾತಿಶಾನನ್ನು ಕುಂಬಳೆ ಪೆÇಲೀಸರು ಬಂಧಿಸಿದ್ದಾರೆ. ಆದರೆ ಅವರ ಪುತ್ರ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಶೂಟೌಟ್ ಸಂದರ್ಭ ಆತ ಅಲ್ಲಿರಲಿಲ್ಲ.ಆತ ಮನೆಯಲ್ಲೇ ಇದ್ದು ನಕಲಿ ಪ್ರಕರಣದಲ್ಲಿ ಸಿಲುಕಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಕುಂಬಳೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಾತಿಶಾ ಅವರ ಪತ್ನಿ ಖದೀಜಾ ಮತ್ತು ತಾಯಿ ಭೀಪಾತಿಮ ತಿಳಿಸಿದರು. ಈ ಬಗ್ಗೆ ಪೋಲೀಸರು ನ್ಯಾಯ ಪಾಲಿಸಿ ಬಾತಿಶಾನನ್ನು ಬಂಧನ ಮುಕ್ತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.