ಬೆಂಗಳೂರು: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ಬಂಧಿಸಿರುವ ಬಿನೀಶ್ ಕೊಡಿಯೇರಿಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಶೇಷ ಸೆಲ್ ಗೆ ನಿನ್ನೆ ಸ್ಥಳಾಂತರಿಸಲಾಗಿದೆ.
ಬಿನೀಶ್ ಗೆ ನಡೆಸಿದ ವೈದ್ಯಕೀಯ ಪರೀಕ್ಷೆಯ ಬಳಿಕ ಪ್ರತ್ಯೇಕ ಸೆಲ್ ಗೆ ವರ್ಗಾಯಿಸಲಾಯಿತು. ಇಂದು ಪರೀಕ್ಷಾ ಫಲಿತಾಂಶಗಳನ್ನು ಪಡೆದ ಬಳಿಕ ಇತರ ಆರೋಪಿಗಳನ್ನು ಇದೇ ಜೈಲಿಗೆ ಸ್ಥಳಾಂತರಿಸಲಾಗುವುದು. ಬಿನೀಶ್ ಸರಿಯಾಗಿ ಆಹಾರ ಸೇವಿಸುತ್ತಿದ್ದು ಇತರ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಅಧಿಕೃತರು ಹೇಳಿರುವರು.
ಮುಂದಿನ ದಿನಗಳಲ್ಲಿ ಭದ್ರತಾ ಕಾರಣಗಳಿಗಾಗಿ ಆತನನ್ನು ಪ್ರತ್ಯೇಕ ಸೆಲ್ ನಲ್ಲಿ ಇರಿಸಲು ಜೈಲಿನ ಅಧಿಕಾರಿಗಳು ಯೋಜಿಸುತ್ತಿದ್ದಾರೆ. ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಅನೂಪ್ ಮತ್ತು ರಿಜೇಶ್ ಮತ್ತು ಸಿಸಿಬಿ ಬಂಧಿಸಿದ ಕನ್ನಡ ಚಲನಚಿತ್ರ ತಾರೆಯರನ್ನು ಒಂದೇ ಜೈಲಿನಲ್ಲಿ ದಾಖಲಿಸಲಾಗಿದೆ.
ಬಿನೀಶ್ ಅವರ ಜಾಮೀನು ಅರ್ಜಿಯನ್ನು ಮುಂದಿನ ಬುಧವಾರ ನ್ಯಾಯಾಲಯ ಪರಿಗಣಿಸಲಿದೆ. ನ್ಯಾಯಾಲಯವು ಬಿನೀಶ್ ಅವರನ್ನು ನವೆಂಬರ್ 25 ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಿದೆ.