ಕಾಸರಗೋಡು: ಕೋವಿಡ್ ಸೋಂಕು ಹರಡುವಿಕೆಯ ದ್ವಿತೀಯ ಹಂತದ ವ್ಯಾಪಕತೆ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಪ್ರಬಲಗೊಳಿಸಲು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಹೋಟೆಲ್ ಗಳು ರಾತ್ರಿ 9 ಗಂಟೆ ವರೆಗೆ ಮಾತ್ರ :
ಜಿಲ್ಲೆಯಲ್ಲಿ ಹೋಟೆಲ್ ಗಳ ಚಟುವಟಿಕೆ ರಾತ್ರಿ 9 ಗಂಟೆ ವರೆಗೆ ಮಾತ್ರ ನಡೆಸಲು ಅನುಮತಿಯಿದೆ. ರಾತ್ರಿ 11 ಗಂಟೆ ವರೆಗೆ ಚಟುವಟಿಕೆ ನಡೆಸಲು ಅನುಮತಿ ನೀಡುವಂತೆ ಹೋಟೆಲ್ ಆಂಡ್ ರೆಸ್ಟಾರೆಂಟ್ ಅಸೋಸಿಯೇಶನ್ ಅರ್ಜಿ ಸಲ್ಲಿಸಿದ್ದು, ಕೋವಿಡ್ ಹರಡುವಿಕೆಯ ಹಿನ್ನೆಲೆಯಲ್ಲಿ ಚಟುವಟಿಕೆಯ ಅವಧಿಯನ್ನು ವಿಸ್ತರಿಸಲಾಗದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ತಳ್ಳುಗಾಡಿಗಳ ಚಟುವಟಿಕೆ ಸಂಜೆ 6 ವರೆಗೆ ಮಾತ್ರ:
ಜಿಲ್ಲೆಯಲ್ಲಿ ತಳ್ಳುಗಾಡಿಗಳ ಚಟುವಟಿಕೆಗಳು ಸಂಜೆ 6 ಗಂಟೆ ವರೆಗೆ ಮಾತ್ರ ಇರುವುದು. ಇಲ್ಲಿ ಪಾರ್ಸೆಲ್ ವಿತರಣೆ ಮಾತ್ರ ನಡೆಸಬೇಕು. ಅಲ್ಲೇ ಆಹಾರ ಸೇವನೆ ನಡೆಸಕೂಡದು. ಆದೇಶ ಉಲ್ಲಂಘಿಸುವ ತಳ್ಳುಗಾಡಿಗಳನ್ನು ಜೆ.ಸಿ.ಬಿ. ಬಳಸಿ ತೆರವುಗೊಳಿಸಲಾಗುವುದು ಎಂದು ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ತಳ್ಳುಗಾಡಿಗಳು ಕಾನೂನುಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಾಸ್ಟರ್ ಯೋಜನೆ ಅಂಗವಾಗಿ ಚಟುವಟಿಕೆ ನಡೆಸುವ ಶಿಕ್ಷಕರಿಗೆ ಹೊಣೆ ನೀಡಲಾಗಿದೆ. ಇದಕ್ಕೆ ಪೆÇಲೀಸ್, ಕಂದಾಯ ಇಲಾಖೆಗಳ ಸಹಾಯ ದೊರೆಯಲಿದೆ.
ಅಂಗಡಿಗಳ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್ ಕಡ್ಡಾಯ:
ಜಿಲ್ಲೆಯ ಅಂಗಡಿಗಳ, ಹೋಟೆಲ್ ಗಳ ಮಾಲೀಕರಿಗೆ, ಸಿಬ್ಬಂದಿಗೆ ಮಾಸ್ಕ್, ಗ್ಲೌಸ್ ಕಡ್ಡಾಯ. ಈ ಸಂಬಂಧ ಪರಿಶೀಲನೆ ನಡೆಸಲು ಮಾಸ್ಟರ್ ಯೋಜನೆಯ ಶಿಕ್ಷಕರಿಗೆ ಹೊಣೆ ನೀಡಲಾಗಿದೆ.
ಇತರ ರಾಜ್ಯಗಳ ಕಾರ್ಮಿಕರಿಗೆ ಕ್ವಾರೆಂಟೈನ್ ಸೌಲಭ್ಯ:
ಇತರ ರಾಜ್ಯಗಳಿಂದ ಆಗಮಿಸಿರುವ ಕಾರ್ಮಿಕರಿಗೆ ಕ್ವಾರೆಂಟೈನ್ ಸೌಲಭ್ಯ ಜಿಲ್ಲೆಯಲ್ಲಿ ಒದಗಿಸಲಾಗಿದೆ. ಕ್ವಾರೆಂಟೈನ್ ಅವಧಿ ಮುಗಿಸಿರುವ ಇತರ ರಾಜ್ಯಗಳ ಕಾರ್ಮಿಕರು ಮಾತ್ರ ಜಿಲ್ಲೆಯಲ್ಲಿ ನೌಕರಿ ನಡೆಸಬಹುದು. ಆದೇಶ ಉಲ್ಲಂಘಿಸುವವರ ವಿರುದ್ಧ ಪೆÇಲೀಸರು ಕಠಿಣ ಕ್ರಮ ಕೈಗೊಳ್ಳುವರು. ಕರಾರುದಾರರು ಈ ಸಂಬಂಧ ಹೊಣೆ ಹೊರಬೇಕು. ಇತರ ರಾಜ್ಯಗಳ ಕಾರ್ಮಿಕರ ಶಿಬಿರಗಳಲ್ಲಿ ಕೋವಿಡ್ ಕಟ್ಟುನಿಟ್ಟುಗಳು ಕಡ್ಡಾಯವಾಗಿ ಪಾಲನೆಯಾಗುತ್ತಿವೆಯೇ ಎಂದು ಖಚಿತಪಡಿಸುವ ಹೊಣೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ನೀಡಲಾಗಿದೆ. ಈ ಸಂಬಂಧ ಒಂದು ವಾರದ ಅವಧಿಯಲ್ಲಿ ಅವರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು.
ವಾಹನ ಚಾಲನೆ ತರಬೇತಿ ವೇಳೆ ಅಂಟಿಜೆನ್ ಟೆಸ್ಟ್ ವರದಿ ಕಡ್ಡಾಯ:
ವಾಹನ ಚಾಲನೆ ತರಬೇತಿ ವೇಳೆ ಜತೆಗೆ ಬರುವವರು ಸಹಿತ ಆಂಟಿಜೆನ್ ಟೆಸ್ಟ್ ನಡೆಸಬೇಕು. ಟೆಸ್ಟ್ ಗ್ರೌಂಡ್ ಬಳಿ ಉಚಿತವಾಗಿ ಆಂಟಿಜೆನ್ ಟೆಸ್ಟ್ ಸೌಲಭ್ಯ ಒದಗಿಸಲಾಗುವುದು. ಜಿಲ್ಲೆಯಲ್ಲಿ ಆಮಟಿಜೆನ್ ಟೆಸ್ಟ್ ನಡೆಸುವ ಸಂಖ್ಯೆ ಅಧಿಕಗೊಂಡಿದೆ. ಪಾಸಿಟಿವ್ ರೋಗಿಗಳ ಸಂಖ್ಯೆ ಕಡಿತಗೊಂಡಿದೆ. ಹೆಚ್ಚುವರಿ ಜನ ಕೋವಿಡ್ ಟೆಸ್ಟ್ ಗೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾಞಂಗಾಡಿನ ಜಿಲ್ಲಾ ಆಸ್ಪತ್ರೆ ಡಿ.1ರಿಂದ ಹಳೆಯ ಕ್ರದಲ್ಲೇ ಚಟುವಟಿಕೆ ನಡೆಸಲಿದೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ಮತ್ತು ಚಟ್ಟಂಚಾಲ್ ನ ಟಾಟಾ ಕೋವಿಡ್ ಆಸ್ಪತ್ರೆ ತ್ವರಿತಗತಿಯಲ್ಲಿ ಕೋವಿಡ್ ಚಿಕಿತ್ಸೆಗೆ ಸಜ್ಜುಗೊಳ್ಳುತ್ತಿವೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಉತ್ಸವ ಆಚರಣೆಗಳಿಗೆ, ಮೆರವಣಿಗೆ ಇತ್ಯದಿಗಳಿಗೆ ಅನುಮತಿಯಿಲ್ಲ. ಕುಟುಂಬಶ್ರೀ ನೇತೃತ್ವದಲ್ಲಿ ನೌಕರಿ ತರಬೇತಿ ಕೇಂದ್ರಗಳಲ್ಲಿ ಶೇ 50 ಮಂದಿಗೆ ತರಬೇತಿ ಪುನರಾರಂಭಿಸಲು ಅನುಮತಿ ನೀಡಲಾಗಿದೆ.
ಚುನಾವಣೆ ಚಟುವಟಿಕೆಗಳಲ್ಲಿ ಕೋವಿಡ್ ಕಟ್ಟುನಿಟ್ಟು ಕಡ್ಡಾಯ:
ಕಾಸರಗೋಡು ಜಿಲ್ಲೆಯಲ್ಲಿ ಚುನಾವಣೆ ಸಂಬಂಧ ನಡೆಯುವ ಪ್ರಚಾರ ಸಹಿತ ಚಟುವಟಿಕೆಗಳಲ್ಲಿ ಕೋವಿಡ್ ಕಟ್ಟುನಿಟ್ಟನ್ನು ಕಡ್ಡಾಯವಾಗಿ ಪಾಲಿಸಬೇಕು. ಆದೇಶ ಉಲ್ಲಂಘಿಸುವವರ ವಿರುದ್ಧ ಅಂಟುರೋಗ ನಿಯಂತ್ರಣ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಭೆಗಳಲ್ಲಿ 100 ಮಂದಿಗಿಂತ ಅಧಿಕ ಮಂದಿ ಭಾಗವಹಿಸಬಾರದು. ಕುಟುಂಬ ಸಭೆಗಳಲ್ಲಿ 20ಕ್ಕಿಂತ ಅಧಿಕ ಮಂದಿ ಸೇರಕೂಡದು. ಮನೆ ಮನೆಗೆ ತೆರಳಿ ಮತಯಾಚನೆ ನಡೆಸುವ ವೇಳೆ ಅಭ್ಯರ್ಥಿ ಸಹಿತ 5 ಮಮದಿ ಮಾತ್ರ ಇರಬೇಕು. ಈ ವೆಳೆ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಸಾನಿಟೈಸರ್ ಬಳಕೆ ಯಾ ಸಾಬೂನು ಬಳಸಿ ಕೈತೊಳೆಯುವಿಕೆ ಕಡ್ಡಾಯ. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ತರಕಾರಿ-ಹಣ್ಣು ಅಂಗಡಿಗಳ ಸಿಬ್ಬಂದಿಗೆ ಆಂಟಿಜೆನ್ ಟೆಸ್ಟ್:
ತರಕಾರಿ-ಹಣ್ಣು ಅಂಗಡಿಗಳ ಸಿಬ್ಬಂದಿ ಆಂಟಿಜೆನ್ ಟೆಸ್ಟ್ ಗೆ ಒಳಗಾಗಬೇಕು. ಮಲೆನಾಡ ಪರಿಶಿಷ್ಟ ಪಂಗಡ ಕಾಲನಿಗಳಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳು ಚುರುಕುಗೊಳ್ಳಬೇಕು. ಕೋವಿಡ್ ಪ್ರಕರಣಗಳು ವರದಿಯಾಗಿರುವ ಕಾಲಣಿಗಳಿಗೆ ವಿಳಂಬವಿಲ್ಲದೆ ಆಹಾರಧಾನ್ಯಗಳ ಕಿಟ್ ವಿತರಣೆ ನಡೆಸುವಂತೆ ಸಭೆ ಜಿಲ್ಲಾ ಸಪ್ಲೈ ಅಧಿಕಾರಿಗೆ ಆದೇಶಿಸಿದೆ.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಷುಕೂರ್, ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.