ಕಾಸರಗೋಡು: ಅಭ್ಯರ್ಥಿಗಳು ತಮ್ಮ ನಾಮಪತ್ರಿಕೆ ಸಲ್ಲಿಸುವ ವೇಳೆ ಪಾಲಿಸಬೇಕಾದ ಕೋವಿಡ್ ಕಟ್ಟುನಿಟ್ಟು ಆದೇಶಗಳು:
ನಾಮಪತ್ರಿಕೆ, 2 ಎ ಫಾರಂ ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಇವುಗಳನ್ನು ಭರ್ತಿಗೊಳಿಸಿ ಚುನಾವಣೆ ಅಧಿಕಾರಿಗೆ ಸಲ್ಲಿಸಬೇಕು.
ನಾಮಪತ್ರಿಕೆ ಸ್ವೀಕಾರಕ್ಕೆ ಸೌಲಭ್ಯಯುತ ಸಭಾಂಗಣ ಸಿದ್ಧಪಡಿಸಲಾಗುವುದು. ಏಕಕಾಲಕ್ಕೆ ಒಬ್ಬ ಅಭ್ಯರ್ಥಿಯ ಮಂದಿಗೆ ಮಾತ್ರ ಪ್ರವೇಶಾತಿ ಇರುವುದು.
ನಾಮಪತ್ರಿಕೆ ಸಲ್ಲಿಸುವ ನಿಟ್ಟಿನಲ್ಲಿ ಅಭ್ಯರ್ಥಿ, ಬೆಂಬಲಿಗ ಸಹಿತ ಮೂವರಿಗೆ ಮಾತ್ರ ಪ್ರವೇಶವಿರುವುದು.
ನಾಮಪತ್ರಿಕೆ ಸಲ್ಲಿಕೆಗಾಗಿ ಸಭಾಂಗಣ ಪ್ರವೇಶಿಸುವ ಮುನ್ನ ಸಾಬೂನು ಬಳಸಿ ಕೈತೊಳೆಯಬೇಕು ಯಾ ಸಾನಿಟೈಸರ್ ಬಳಸಿ ಕೈಗಳನ್ನು ಶುಚಿಗೊಳಿಸಬೇಕು.
ನಾಮಪತ್ರಿಕೆ ಸಲ್ಲಿಸುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್, ಸಾನಿಟೈಸರ್ ಬಳಸಬೇಕು.
ಏಕಕಾಲಕ್ಕೆ ಒಬ್ಬರಿಗಿಂತ ಅಧಿಕ ಮಂದಿ ಅಭ್ಯರ್ಥಿಗಳು ನಾಮಪತ್ರಿಕೆ ಸಲ್ಲಿಸಲು ಬರುವುದಿದ್ದರೆ, ಉಳಿದವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸಹಿತ ವಿಶ್ರಾಂತಿಗೆ ಪ್ರತ್ಯೇಕ ಸಭಾಂಗಣ ಒದಗಿಸಬೇಕು.
ಚುನಾವಣೆ ಅಧಿಕಾರಿ/ ಉಪಚುನಾವಣೆ ಅಧಿಕಾರಿ ನಾಮಪತ್ರಿಕೆ ಸಲ್ಲಿಸುವ ವೇಳೆ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್ ಧರಿಸಬೇಕು.
ಪ್ರತಿ ಅಭ್ಯರ್ಥಿ, ನಾಮಪತ್ರಿಕೆ ಸ್ವೀಕಾರ ನಡೆಸಿದ ನಂತರ ಚುನಾವಣೆ ಅಧಿಕಾರಿ/ ಉಪಚುನಾವಣೆ ಅಧಿಕಾರಿ ಸಾನಿಟೈಸರ್ ಬಳಸಬೇಕು.
ಠೇವಣಿ ನಗದು ಖಜಾನೆ ಯಾ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪಾವತಿಸಿದ ಚಲನ್/ರಶೀದಿ ಹಾಜರುಪಡಿಸಬೇಕು.
ನಾಮಪತ್ರಿಕೆ ಸಲ್ಲಿಸಲು ಆಗಮಿಸುವ ವೇಳೆ ಒಬ್ಬ ಅಭ್ಯರ್ಥಿಗೆ ಒಂದು ವಾಹನ ಮಾತ್ರ ಇರಬೇಕು. ಅಭ್ಯರ್ಥಿಯ ಜತೆ ಮೆರವಣಿಗೆ, ವಾಹನ ಜಾಥಾ, ಬೆಂಬಲಿಗರ ಗುಂಪು ಇರಕೂಡದು.
ಕಂಟೈನ್ಮೆಂಟ್ ಝೋನ್ ಗಳಲ್ಲಿ ನಿವಾಸಿಗಳಾಗಿರುವವರು, ಕ್ವಾರೆಂಟೈನ್ ನಲ್ಲಿರುವವರು, ಮುಂಗಡವಾಗಿ ಈ ಸಂಬಂಧ ಮಾಹಿತಿ ನೀಡಿ ನಾಮಪತ್ರಿಕೆ ಸಲ್ಲಿಕೆಗೆ ಆಗಮಿಸಬೇಕು.
ಅಭ್ಯರ್ಥಿಗೆ ಕೋವಿಡ್ ಪಾಸಿಟಿವ್ ಆಗಿದ್ದಲ್ಲಿ, ಆರೋಗ್ಯ ಇಲಾಖೆಯ ಆದೇಶ ಪ್ರಕಾರ ಕ್ವಾರೆಂಟೈನ್ ಪ್ರವೇಶಿಸಿದ್ದಲ್ಲಿ, ನಾಮಪತ್ರಿಕೆ ಬೆಂಬಲಿಗನ ಮೂಲಕ ಸಲ್ಲಿಸಬೇಕಿದ್ದು, ರಾಜ್ಯ ಚುನಾವಣೆ ಆಯೋಗ ಹೊಣೆಗಾರಿಕೆ ನಿಡಿರುವ ಸಿಬ್ಬಂದಿ ಮುಂದೆ ಅಭ್ಯರ್ಥಿ ಸತ್ಯಪ್ರತಿಜ್ಞೆ ನಡೆಸಿ ಸಹಿಮಾಡಬಹುದಾಗಿದೆ. ಸತ್ಯಪ್ರತಿಜ್ಞೆ ದಾಖಲಾತಿಯನ್ನು ಚುನಾವಣೆ ಅಧಿಕಾರಿಯ ಮುಂದೆ ಹಾಜರುಪಡಿಸಬಹುದು.
ನಾಮಪತ್ರಿಕೆ ಸಲ್ಲಿಸುವ ವೇಳೆ ಕಾನೂನು ರೀತ್ಯಾ ಎಲ್ಲ ಕಟ್ಟುನಿಟ್ಟುಗಳನ್ನು ಪಾಲಿಸಬೇಕು.