ಕುಂಬಳೆ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ ಇತ್ತೀಚೆಗೆ ಕೋವಿಡ್ ಬಾಧಿಸಿ ನಿಧನರಾದ ಸೂರಂಬೈಲು ಶಾಲೆಯ ಶಿಕ್ಷಕರಾಗಿದ್ದ ಪದ್ಮನಾಭ ಮಾಸ್ತರ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು. ಇದೇ ಸಂದರ್ಭದಲ್ಲಿ ಸಂಘಟನೆಯ ಸದಸ್ಯರ ಸಹಕಾರದಿಂದ ಸಂಗ್ರಹಿಸಿದ ರೂ.241750 ಮೊತ್ತವನ್ನು ಚೆಕ್ ರೂಪದಲ್ಲಿ ಮನೆಯವರಿಗೆ ಹಸ್ತಾಂತರಿಸಲಾಯಿತು. ದಿವಂಗತರ ಅಣ್ಣ ಕೃಷ್ಣ ಅವರ ಪತ್ನಿ ಲಲಿತಾ ಅವರು ಚೆಕ್‍ನ್ನು ಸ್ವೀಕರಿಸಿದರು. ಅನಾರೋಗ್ಯ ಪೀಡಿತರಾಗಿದ್ದ ಕೃಷ್ಣ ಅವರ ಕುಟುಂಬ ಪದ್ಮನಾಭ ಮಾಸ್ಟರ್ ಅವರನ್ನೇ ಆಶ್ರಯಿಸಿತ್ತು. ಅವರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಕಲಿಸುತ್ತಿರುವ ಬಗ್ಗೆ ಸಂಘಟನೆಯ ತಂಡವು ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.
ಕೋವಿಡ್ ನಿಯಂತ್ರಣ ಯೋಜನೆಯ ಕರ್ತವ್ಯದಲ್ಲಿರುವಾಗಲೇ ಕೋವಿಡ್‍ಗೆ ಬಲಿಯಾದ ಶಿಕ್ಷಕನ ಆಶ್ರಿತರಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಸಂಘಟನೆಯ ತಂಡದಲ್ಲಿ ಅಧ್ಯಕ್ಷರಾದ ರವೀಂದ್ರನಾಥ ಬಲ್ಲಾಳ್, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ, ಕುಂಬಳೆ ಉಪಜಿಲ್ಲಾ ಅಧ್ಯಕ್ಷರಾದ ಶಿವಕುಮಾರ್ ಎಸ್, ಉಪಾಧ್ಯಕ್ಷೆ ಸುರೇಖಾ ಟೀಚರ್, ಕೋಶಾ„ಕಾರಿ ಶರತ್ ಕುಮಾರ್ ಎಂ. ಪಾಲ್ಗೊಂಡಿದ್ದರು. ಅಧ್ಯಾಪಕ ಜಯಪ್ರಕಾಶ್ ಸಹಕರಿಸಿದರು. ರವಿ ಎಂ. ಉಪಸ್ಥಿತರಿದ್ದರು.