ತಿರುವನಂತಪುರ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಎಂ.ಶಿವಶಂಕರ್ ಪ್ರಕರಣದಲ್ಲಿ ಪ್ರಧಾನಮಂತ್ರಿಗೂ ನೈತಿಕ ಜವಾಬ್ದಾರಿ ಇದೆ ಎಂದು ಸಿಪಿಎಂ ಪೆÇಲಿಟ್‍ಬ್ಯುರೊ ಸದಸ್ಯ ಎಸ್.ರಾಮಚಂದ್ರನ್ ಪಿಳ್ಳೈ ಹೇಳಿದ್ದಾರೆ.
ಮುಖ್ಯಮಂತ್ರಿಯಷ್ಟೇ ನೈತಿಕ ಜವಾಬ್ದಾರಿ ಪ್ರಧಾನಮಂತ್ರಿ ಹೊಂದಿದ್ದಾರೆ. ಎಲ್ಲಾ ಐಎಎಸ್ ಅಧಿಕಾರಿಗಳು ಪ್ರಧಾನಮಂತ್ರಿಗಳ ಅಧೀನತೆಯಲ್ಲಿರುತ್ತಾರೆ. ಅದು ಯಾವುದೂ ಮುಖ್ಯವಲ್ಲ. "ಯಾರಾದರೂ ಏನಾದರೂ ತಪ್ಪು ಮಾಡಿದ್ದರೆ, ಕ್ರಮ ಕೈಗೊಳ್ಳಲಾಗಿದೆ" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಬಿನೀಶ್ ಕೊಡಿಯೇರಿ ಮತ್ತು ಶಿವಶಂಕರ್ ಅವರ ವಿಷಯವನ್ನು ಪಕ್ಷದ ಪಾಲಿಟ್ ಬ್ಯೂರೋ ಮತ್ತು ಕೇಂದ್ರ ಸಮಿತಿಯಲ್ಲಿ ಚರ್ಚಿಸಲಾಗಿಲ್ಲ. ಆದರೆ ತನಿಖಾ ಸಂಸ್ಥೆಗಳು ಪ್ರತಿ ಗಂಟೆಗೊಮ್ಮೆ ಗೌಪ್ಯ ಮಾಹಿತಿಯನ್ನು ಬಿಜೆಪಿಗೆ ಸೋರಿಕೆ ಮಾಡುತ್ತಿವೆ ಎಂದವರು ಇಂದು ಆರೋಪಿಸಿರುವರು.
ಆದರೆ ಇದು ಅತ್ಯಂತ ಕಾನೂನುಬಾಹಿರ ಕ್ರಮವಾಗಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವುದರಿಂದ ಕೇಂದ್ರ ತನಿಖಾ ಸಂಸ್ಥೆಗಳ ಅಕ್ರಮ ಚಟುವಟಿಕೆಗಳನ್ನು ಬಯಲಿಗೆಳೆಯಬಹುದು ಎಂದು ಅವರು ಹೇಳಿದರು.
ಬಿನೀಶ್ ಏನಾದರೂ ತಪ್ಪು ಮಾಡಿದ್ದರೆ, ಅವನು ಉತ್ತರಿಸಬೇಕು. ಸತ್ಯಗಳು ತಪ್ಪು ಮಾಡಿದ ಯಾರನ್ನೂ ರಕ್ಷಿಸುವುದಿಲ್ಲ. ಸಾಕ್ಷ್ಯಗಳನ್ನು ಪ್ರಸ್ತುತಪಡಿಸಲಿ, ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ನಮ್ಮ ಮಕ್ಕಳಲ್ಲಿ ಒಳ್ಳೆಯವರೂ, ಕೆಟ್ಟವರೂ ಇರುತ್ತಾರೆ ಇರುತ್ತಾರೆ ಎಮದು ಪರೋಕ್ಷವಾಗಿ ತಿಳಿಸಿದರು.
ಇಂದಿನ ಸಮಾಜದ ಒತ್ತಡ ಮತ್ತು ಹಲವು ವಿಷಯಗಳ ಪ್ರಭಾವದಿಂದ ಕೆಲವೊಮ್ಮೆ ತಪ್ಪುಗಳು ಸಂಭವಿಸುತ್ತದೆ. ತಪ್ಪು ಮಾಡಿದ ಯಾರನ್ನೂ ನಾವು ರಕ್ಷಿಸಲಾಗದು.ಸಮಾಜದ ಕೊಳಕು, ದುರ್ಬುದ್ದಿಗಳು ನಮ್ಮ ಮತ್ತು ನಮ್ಮ ಕುಟುಂಬ ಸದಸ್ಯರ ಮೇಲೆ ಹೆಚ್ಚು ಕಡಿಮೆ ಪ್ರಭಾವ ಬೀರಿದೆ ಎಂದು ಹೇಳಬಹುದು. ನಾವು ಆ ಬಗ್ಗೆ ಹೆಚ್ಚು ಗಮನ ನೀಡಿದಾಗ ಅದನ್ನು ಸರಿಪಡಿಸಲು ಪ್ರಯತ್ನಿಸಬಹುದು "ಎಂದು ಅವರು ಹೇಳಿದರು.