HEALTH TIPS

ತುಳುಲಿಪಿ ಬ್ರಹ್ಮ ದಿ.ಡಾ.ಪುಣಿಚಿತ್ತಾಯರ ಹೆಸರಲ್ಲಿ ಟ್ರಸ್ಟ್ ರಚನೆಗೆ ನಾಂದಿ-ಸಾಹಿತ್ಯ-ಸಂಶೋಧನೆಗಳ ಮರು ಪರಿಚಯ, ಪ್ರಸರಣಕ್ಕೆ ವೇದಿಕೆಯಾಗಿ ಟ್ರಸ್ಟ್ ರಚನೆಗೆ ತೀರ್ಮಾನ-ಓಲೈಕೆಗಳಿಗೆ ಎಳಸದೆ ಸವೆಸಿದ ಹಾದಿ ಪ್ರೇರಣದಾಯಿ-ಶ್ರೀಸಚ್ಚಿದಾನಂದ ಭಾರತಿ

              

                ಕಾಸರಗೋಡು: ತುಳುಲಿಪಿ ಬ್ರಹ್ಮ ದಿ.ಡಾ.ವೆಂಕಟರಾಜ ಪುಣಿಚಿತ್ತಾಯ ಅವರ ಬದುಕು-ಬರಹ-ಸಂಶೋಧನೆಗಳನ್ನು ಹೊಸ ತಲೆಮಾರಿಗೆ ದಾಟಿಸುವ ಭಾಗವಾಗಿ ರಚನೆಗೊಳ್ಳುತ್ತಿರುವ ಟ್ರಸ್ಟ್ ರೂಪೀಕರಣದ ಭಾಗವಾಗಿ ಮೊದಲ ಸಭೆ ಭಾನುವಾರ ಶ್ರೀಮದ್ ಎಡನೀರು ಮಠದ ಆವರಣದಲ್ಲಿ ನಡೆಯಿತು.

       ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಅನುಗ್ರಹ ಮಾರ್ಗದರ್ಶನ ನೀಡಿದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಮಾತನಾಡಿ, ಪುಣಿಚಿತ್ತಾಯರ ಸಮಗ್ರ ಸಾಧನೆಗಳು ಎಂದಿಗೂ ಅತ್ಯಪೂರ್ವವಾಗಿ ಬೆರಗುಗೊಳಿಸುವಂತದ್ದು. ಅವರ ಸರಳ ಸಜ್ಜನಿಕೆಯ ಜೀವನ ಅವರ ಪಾಂಡಿತ್ಯದ ಕೈಗನ್ನಡಿ. ಸತ್ಯ ಮತ್ತು ತತ್ವಗಳಿಗೆ ಮಾತ್ರ ಬದ್ದರಾಗಿದ್ದ ಅವರು ಓಲೈಕೆಗಳಿಗೆ ಎಳಸದೆ ಸವೆಸಿದ ಬದುಕು ಪ್ರೇರಣದಾಯಿ. ಅವರ ಹೆಸರಲ್ಲಿ ರಚನೆಗೊಳ್ಳುವ ಟ್ರಸ್ಟ್ ಗೆ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.

    ಸಭೆಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಂಗಕರ್ಮಿ ಕಾಸರಗೋಡು ಚಿನ್ನಾ, ಶ್ರೀಮಠದ ಕಾರ್ಯದರ್ಶಿ ರಾಜೇಂದ್ರ ಕಲ್ಲೂರಾಯ ಎಡನೀರು,ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಯಕ್ಷಗಾನ ಕಲಾವಿದೆ ಪದ್ಮಾ ಆಚಾರ್ ಪುತ್ತೂರು ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

       ಟ್ರಸ್ಟ್ ರೂಪೀಕರಿಸುವ ಮೂಲಕ ಡಾ.ಪುಣಿಚಿತ್ತಾಯರ ಸಮಗ್ರ ಸಾಹಿತ್ಯ-ಸಂಶೋಧನೆಗಳನ್ನು ಮರು ಪರಿಚಯಿಸುವ ಯತ್ನಗಳಿಗೆ ರೂಪುನೀಡಲು ತೀರ್ಮಾನಿಸಲಾಯಿತು. ನಿರಂತರ ಕಾರ್ಯಕ್ರಮಗಳ ಮೂಲಕ ಡಾ.ಪುಣಿಚಿತ್ತಾಯರ ತುಳು ಲಿಪಿ ಸಂಶೋಧನೆ, ವಿವಿಧ ಮಹಾ ಪ್ರಬಂಧಗಳು, ಲೇಖನಗಳು, ಕವಿತೆ, ನಾಟಕ, ಯಕ್ಷಗಾನ ಪ್ರಸಂಗ ಸಹಿತ ಎಲ್ಲಾ ಆಯಾಮಗಳ ಕೊಡುಗೆಗಳನ್ನು ಏಕಗವಾಕ್ಷಿಯಡಿ ಕ್ರೋಢೀಕರಿಸಿ ಅಧ್ಯಯನಯೋಗ್ಯ ವ್ಯವಸ್ಥೆಯೊಂದಕ್ಕೆ ಚಾಲನೆ ನೀಡಲು ತೀರ್ಮಾನಿಸಲಾಗಿದ್ದು ಟ್ರಸ್ಟ್ ನಿರ್ಮಾಣದ ಪೂರ್ವಭಾವಿ ಚಟುವಟಿಕೆಗಳಿಗೆ ಸಮಿತಿ ರೂಪಿಸಲಾಯಿತು. ಅಧ್ಯಕ್ಷರಾಗಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಕಾರ್ಯದರ್ಶಿಯಾಗಿ ಭಾಸ್ಕರ ಕೆ. ಹಾಗೂ ಇತರ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಯಿತು. 

       ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜೇಶ್ ಆಳ್ವ ಅವರು ಪುಣಿಚಿತ್ತಾಯರ ಸಮಗ್ರ ಸಾಹಿತ್ಯ-ಸಂಶೋಧನೆಗಳ ಪ್ರಸರಣಕ್ಕಾಗಿ ಈಗಾಗಲೇ ಕೆಲವು ಕಾರ್ಯಕ್ರಮಗಳು ನಡೆದಿದ್ದು ಭಾಷೆ, ಸಂಸ್ಕøತಿ ಪ್ರೇಮಿಗಳಿಂದ ಪ್ರಶಂಸೆ-ಬೆಂಬಲಗಳು ಅಪಾರವಾಗಿ ವ್ಯಕ್ತವಾಗಿದೆ. ಕರಾವಳಿಯ ಬಹುಭಾಷಾ ನೆಲೆಯಲ್ಲಿ ಮಾತೃಸ್ಥಾನದಲ್ಲಿರುವ ತುಳುವಿಗೆ ಮಹತ್ವಿಕೆ ತಂದುಕೊಟ್ಟ ಲಿಪಿನ ಸಂಶೋಧನೆ, ಪ್ರಾಚೀನ ಕೃತಿಗಳ ಸಂಶೋಧನೆ ಮತ್ತು ಟಿಪ್ಪಣಿಗಳ ಮೂಲಕ ಅದನ್ನು ಜನಸಾಮಾನ್ಯರ ಮುಂದೆ ಪರಿಚಯಿಸಿದ ಅಪಾರ ಫ್ರೌಢಿಮೆಗೆ ಗಟ್ಟಿ ನೆಲೆಯೊದಗಿಸದಿದ್ದಲ್ಲಿ ಮಹದಪರಾಧವಾಗಿ ನಮ್ಮನ್ನು ಬಿಂಬಿತವಾಗುವುದೆಂದು ತಿಳಿಸಿದರು.

      ಸಂಘಟಕ ಭಾಸ್ಕರ ಕೆ.ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಜಯರಾಜ ಪುಣಿಚಿತ್ತಾಯ ವಂದಿಸಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries