ಕಾಸರಗೊಡು: ಸ್ಮಾರ್ಟ್ ಗ್ರಾಮ ಕಚೇರಿಗಳ ನಿರ್ಮಾಣ ಉದ್ಘಾಟನೆ ಮತ್ತು ಭೂಹಕ್ಕು ಪತ್ರ ವಿತರಣೆ ಇಂದು(ನ.4) ನಡೆಯಲಿದೆ.
ಸ್ಮಾರ್ಟ್ ಗ್ರಾಮ ಕಚೇರಿ ಯೋಜನೆ ಅಂಗವಾಗಿ 2018-19 ವರ್ಷದ ಯೋಜನೆ ನಿಧಿಯಲ್ಲಿ ಅಳವಡಿಸಿ ಕಾಸರಗೊಡು ಜಿಲ್ಲೆಗೆ ಮಂಜೂರು ಮಾಡಿರುವ ಚೆರುವತ್ತೂರು, ಚಿತ್ತಾರಿ ಸ್ಮಾರ್ಟ್ ಗ್ರಾಮಕಚೇರಿಗಳ ಕಟ್ಟಡಗಳ ನಿರ್ಮಾಣ ಉದ್ಘಾಟನೆ ಮತ್ತು ಸದ್ರಿ ವರ್ಷದ ಯೋಜನೆ ನಿಧಿಯಲ್ಲಿ ಅಳವಡಿಸಿ ಜಿಲ್ಲೆಗೆ ನೂತನವಾಗಿ ಮಂಜೂರು ಮಾಡಿರುವ ಪಡ್ರೆ, ತೆಕ್ಕಿಲ್, ಕೂಡ್ಲು, ತುರ್ತಿ, ಕಾಞಂಗಾಡ್ ಸ್ಮಾರ್ಟ್ ಗ್ರಾಮ ಕಚೇರಿಗಳ ಶಿಲಾನ್ಯಾಸ ಮತ್ತು ಭೂಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಈ ವೇಳೆ ಜರುಗಲಿದೆ. ಮಧ್ಯಾಹ್ನ 12 ಗಂಟೆಗೆ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು.
ಪ್ರತಿ ತಾಲೂಕಿನಲ್ಲಿ ಲ್ಯಾಂಡ್ ಟ್ರಿಬ್ಯೂನಲ್ ಮತ್ತು ತಲಾ 5 ಮಂದಿಗೆ ಭೂಹಕ್ಕು ಪತ್ರ ವಿತರಣೆ ನಡೆಸಲಾಗುವುದು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಂ.ಸಿ.ಕಮರುದ್ದೀನ್, ಎನ್.ಎ.ನೆಲ್ಲಿಕುನ್ನು, ಕೆ.ಕುಂuಟಿಜeಜಿiಟಿeಜರಾಮನ್, ಎಂ.ರಾಜಗೋಪಾಲನ್, ಕಂದಾಯ ಇಲಖೆ ಪ್ರಧಾನ ಕಾರ್ಯದರ್ಶಿ ಡಾ.ಎ.ಜಯತಿಲಕ್, ಲ್ಯಾಂಡ್ ರೆವೆನ್ಯೂ ಕಮೀಷನರ್ ಕೆ.ಬಿಜು, ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ಮೊದಲಾದವರು ಭಾಗವಹಿಸುವರು.