ಕಾಸರಗೋಡು: ಕಾಸರಗೋಡು, ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುತ್ತಿರುವ, ಕಾಸರಗೋಡು ತಾಲೂಕು ಲೇಬರ್ ಕಚೇರಿ ವ್ಯಾಪ್ತಿಯಲ್ಲಿ 1960 ರ ಕೇರಳ ಶಾಪ್ಸ್ ಆಂಡ್ ಮರ್ಸೀಯಲ್ ಎಸ್ಟಾಬ್ಲಿಷ್ ಮೆಂಟ್ ಕಾಯಿದೆ ಪ್ರಕಾರ ನೊಂದಣಿ ನಡೆಸಿರುವ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ನ.30ರ ಮುಂಚಿತವಾಗಿ 2021 ವರ್ಷಕ್ಕಿರುವ ನೋಂದಣಿ ನವೀಕರಣಗೊಳಿಸಬೇಕು. ನೋಂದಣಿ ನಡೆಸದೇ ಇರುವ ಸಂಸ್ಥೇಗಳು ಈ ಸಂಬಂಧ ಅರ್ಜಿ ಸಲ್ಲಿಸಬೇಕು. ಅಕ್ಷಯ ಸೆಂಟರ್ ಗಳ ಮೂಲಕ ಯಾತಿತಿತಿ.iಛಿ.ಞeಡಿಚಿಟಚಿ.gov.iಟಿಮೂಲಕ ಅರ್ಜಿ ಸಲ್ಲಿಸಬಹುದು. ನೋಂದಣಿ/ ನವೀಕರಣ ನಡೆಸದೇ ಇರುವ ಸಂಸ್ಥೆಗಳ ವಿರುದ್ಧ 5 ಸಾವಿರ ರೂ. ವರೆಗಿನ ದಂಡ ಸಹಿತ ಕಾನೂನು ಕ್ರಮ ಕೈಗೊಳ್ಳಲಗುವುದು. ಮಾಹಿತಿಗೆ ದೂರವಾಣಿ ಸಮಖ್ಯೆ: 04994-257850, 8547655762.