ಪತ್ತನಂತಿಟ್ಟು: ನಮ್ಮ ಪರಂಪರೆಯ ಕೊಳಗಳು ಮತ್ತು ಕೆರೆಗಳನ್ನು ಯಾವುದೇ ಮಾಲಿನ್ಯವಿಲ್ಲದೆ ಸಂರಕ್ಷಿಸಲು ಹೊಸ ತಲೆಮಾರಿನವರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಬರಿಮಲೆ ತಂತ್ರಿ ಬ್ರಹ್ಮಶ್ರೀ ಕಂಠಾರರ್ ರಾಜೀವರರ್ ಸಲಹೆ ನೀಡಿದರು. ಪುಣ್ಯಂ ಪೂಂಗಾವನಂ ಯೋಜನೆಯ ಚಟುವಟಿಕೆಗಳನ್ನು ಹೆಚ್ಚಿನ ಸ್ಥಳಗಳಿಗೆ ವಿಸ್ತರಿಸಬೇಕು ಎಂದರು. ಅ
ವರು ಈ ವರ್ಷದ ಪುಣ್ಯಂ ಪೂಂಗಾವನಂ ಯೋಜನೆಯ ಚಟುವಟಿಕೆಗಳನ್ನು ಶಬರಿಮಲೆ ಸನ್ನಿಧಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಪಿ.ಗೋಪಿನಾಥ್ ಅವರು ಮಾತನಾಡಿ ತ್ಯಾಜ್ಯವನ್ನು ತೆಗೆಯುವುದಕ್ಕಿಂತ ಹೆಚ್ಚಿನ ಪುಣ್ಯ ಕಾರ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಆದರೆ ತ್ಯಾಜ್ಯ ವಿಲೇವಾರಿಗಿಂತ ತ್ಯಾಜ್ಯಗಳು ಉಂಟಾಗದಂತೆ ಜಾಗ್ರತೆ ವಹಿಸುವುದು ಅತ್ಯುತ್ತಮವಾದುದು ಎಂದು ಅವರು ತಿಳಿಸಿದರು.
ಆನ್‍ಲೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಪೆÇಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ, ಪುಣ್ಯಂ ಪೂಂಗಾವನಂ ಕೇರಳದ ಜನರು ಬದ್ಧತೆಯಿಂದ ಅಳವಡಿಸಿಕೊಂಡ ಯೋಜನೆಯಾಗಿದೆ ಎಂದು ಹೇಳಿದರು.
ಪುಣ್ಯಂ ಪೂಂಗಾವನಂ ಯೋಜನೆಯ ಪರಿಷ್ಕøತ ವೆಬ್‍ಸೈಟ್ ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಎನ್. ವಾಸು ಬಿಡುಗಡೆಗೊಳಿಸಿದರು. ಶಬರಿಮಲೆ ಮೇಲ್ಶಾಂತಿ ಜಯರಾಜ್ ನಂಬೂದಿರಿ, ಮಾಳಿಗಾಪ್ಪುರಂ ಮೆಲ್ಶಾಂತಿ ರೆಜಿಕುಮಾರ್ ನಂಬೂದಿರಿ, ಐಜಿಗಳಾದ ಎಸ್.ಶ್ರೀಜಿತ್ ಮತ್ತು ಪಿ ವಿಜಯನ್, ತಮಿಳುನಾಡಿನ ಮಾಜಿ ಮುಖ್ಯ ಕಾರ್ಯದರ್ಶಿ ಶೀಲಾ ನಾಯರ್ ಮತ್ತು ಸನ್ನಿಧಾನಂ ಪೆÇಲೀಸ್ ವಿಶೇಷ ಅಧಿಕಾರಿ ಬಿ ಕೃಷ್ಣಕುಮಾರ್ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ಬಳಿಕ ಐಜಿಪಿ ವಿಜಯನ್ ನೇತೃತ್ವದ ಪೆÇಲೀಸ್ ಅಧಿಕಾರಿಗಳು ಮತ್ತು ಸ್ವಯಂಸೇವಕರ ತಂಡವು ಭಸ್ಮಕೊಳ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಚಗೊಳಿಸಿದರು.