HEALTH TIPS

ಕಾಸರಗೋಡಿನ ಎಂಎಸಿಟಿ, ಫಾಸ್ಟ್ ಟ್ರ್ಯಾಕ್ ಸ್ಪೆಷ್ಯಲ್ ನ್ಯಾಯಾಲಯಗಳ ಉದ್ಘಾಟನೆ


           ಕಾಸರಗೋಡು: ಜಿಲ್ಲೆಗೆ ಮಂಜೂರಾಗಿ ಲಭಿಸಿದ ವಾಹನಾಫಘಾತ ನಷ್ಟಪರಿಹಾರ ಟ್ರಿಬ್ಯೂನಲ್(ಎಂ.ಎ.ಸಿಟ.ಇ) ಮತ್ತು ಹೊಸದುರ್ಗ ಫಾಸ್ಟ್ ಟ್ರ್ಯಾಕ್ ಸ್ಪೆಷ್ಯಲ್ ನ್ಯಾಯಾಲಯದ ಉದ್ಘಾಟನೆ ಸೋಮವಾರ ಜರಗಿತು. 

         ವೀಡಿಯೋ ಕಾನ್ ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನ್ಯಾಯಾಲಯಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ,  ಮಹಿಳೆಯರು ಮತ್ತು ಮಕ್ಕಳ ಮೇಳೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಠಿಣ ರೂಪದಲ್ಲಿ ತಡೆಯಲು ರಾಜ್ಯ ಸರ್ಕಾರರ ಬದ್ಧವಾಗಿದೆ. ರಾಜ್ಯದಲ್ಲಿ ಇಂತಹ ಕೃತ್ಯಗಳಿಗೆ ಸರ್ಕಾರ ಅವಕಾಶ ನೀಡುವುದಿಲ್ಲ. ಇದಕ್ಕೆ ಪೂರಕವಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.  ಪೆÇೀಕ್ಸೋ, ಅತ್ಯಾಚಾರ ಕೇಸುಗಳನ್ನು ತೀರ್ಪುಗೊಳಿಸಲು ಕೇಂದ್ರ ಕಾನೂನು ಸಚಿವಾಲಯದ ಮಹಿಳಾ ಸಂರಕ್ಷಣೆ ಮಿಷನ್ ವ್ಯಾಪ್ತಿಯಲ್ಲಿ ಪಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಯೋಜನೆ ಆರಂಭಿಸಲಾಗಿದೆ. ಪ್ರತಿ ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯ ಪ್ರತಿವರ್ಷ 165 ಕೇಸುಗಳನ್ನು ತೀರ್ಪುಗೊಳಿಸಲು ಯೋಜನೆಸಿದ್ಧಗೊಂಡಿದೆ ಎಂದರು.

         ಹೈಕೋರ್ಟ್ ನ್ಯಾಯಮೂರ್ತಿ ಎ.ಎಂ.ಷಫೀಕ್ ಅಧ್ಯಕ್ಷತೆ ವಹಿಸಿ ಮಾತನಾಡಿ,  ಅತಿ ಶೀಘ್ರ ವಿಚಾರಣೆ ಮತ್ತು ನ್ಯಾಯ ಒದಗಿಸುವಿಕೆಯ ಮಹತ್ವ ಹೆಚ್ಚಾಗಿದ್ದು,  ಮಹಿಳೆಯರ ಮತ್ತು ಮಕ್ಕಳ ಮೆಲೆ ನಡೆಯುತ್ತಿರುವ ದೌರ್ಜನ್ಯ-ಪೆÇೀಕ್ಸೋ ಕೇಸುಗಳ ವಿಚಾರನೆಗಳನ್ನು ತ್ವರಿತಗೊಳಿಸಲು ರಾಜ್ಯದಲ್ಲಿ ಸಜ್ಜುಗೊಳಿಸಿದ 5 ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯಗಳು ಪೂರಕವಾಗಲಿದೆ ಎಂದರು. ರಾಜ್ಯದಲ್ಲಿ ಪ್ರಸಕ್ತ 8176 ಪೆÇೀಕ್ಸೋ ಕೇಸುಗಳು, 6194 ಅತ್ಯಾಚಾರ ಕೇಸುಗಳು ನ್ಯಾಯಾಲಯದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.

      ಕಾನೂನು ಸಚಿವ ಎ.ಕೆ.ಬಾಲನ್, ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್, ಹೈಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಂ.ಬದರ್, ಅಮಿತ್ ರಾವಲ್ ಮೊದಲಾದವರು ಉಪಸ್ಥಿತರಿದ್ದರು.

       ಸ್ವತಂತ್ರ ಎಂ.ಎ.ಸಿಟಿ. ಇಲ್ಲದೇ ಇದ್ದ ರಾಜ್ಯದ ಏಕೈಕ ಜಿಲ್ಲೆ ಕಾಸರಗೋಡು ಆಗಿತ್ತು. ಕಾಸರಗೋಡು ಬಾರ್ ಅಸೊಸಿಯೆಶನ್ ಹೈಕೋರ್ಟ್‍ನಲ್ಲಿ ಫೈಲ್ ನಡೆಸಿದ್ದ ರಿಟ್ ಅರ್ಜಿಯ ತೀರ್ಪು ಪ್ರಕಾರ ಜಿಲ್ಲೆಯಲ್ಲಿ ಎಂ.ಎ.ಸಿ.ಟಿ. ಸ್ಥಾಪಿಸಲಾಗಿದೆ. ಅಡೀಷನಲ್ ಜಿಲ್ಲಾ ನ್ಯಾಯಮೂರ್ತಿ(ಪ್ರಥಮ) ಆರ್.ಎಲ್.ಬೈಕು ಅವರಿಗೆ ನ್ಯಾಮೂರ್ತಿಯ ತಾತ್ಕಾಲಿಕ ಹೊಣೆ ನೀಡಲಾಗಿದೆ. ಜಿಲ್ಲಾ ನ್ಯಾಯಮೂರ್ತಿಗಳ ಪ್ರಮೋಷನ್ ನಡೆಯುವ ವೇಳೆಗೆ ಶಾಶ್ವತ ನ್ಯಾಯಮೂರ್ತಿಗಳ ನೇಮಕಾತಿ ನಡೆಯಲಿದೆ. ಎಂ.ಎ.ಸಿ.ಟಿ.ಯಲ್ಲಿ ಮೊದಲ ದಿನ 5 ಕೇಸುಗಳನ್ನು ಪರಿಗಣಿಸಲಾಗಿದೆ.

      ರಾಜ್ಯದಲ್ಲಿ ಮಂಜೂರು ಮಾಡಿರುವ 28 ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯದಲ್ಲಿ ಒಂದನ್ನುಹೊಸದುರ್ಗದಲ್ಲಿ ಆರಂಭಿಸಿರುವ ವಿಶೇಷ ನ್ಯಾಯಾಲಯವಾಗಿದೆ. ಪೆÇೀಕ್ಸೋ ಕೇಸುಗಳ ಸಹಿತ ಸೆಷನ್ಸ್ ಪ್ರಕರಣಗಳನ್ನು ನ್ಯಾಯಾಲಯ ಪರಿಗಣಿಸಲಿದೆ.  ಅಡೀಷನಲ್ ಜಿಲ್ಲಾ ನ್ಯಾಯಮೂರ್ತಿ (ದ್ವಿತೀಯ) ರಾಜನ್ ತಟ್ಟಿಲ್ ಅವರಿಗೆ ಹೊಸದುರ್ಗ ವಿಶೇಷ ನ್ಯಾಯಾಲಯದ ಹೊಣೆ ನೀಡಲಾಗಿದೆ.

        ಕಾಸರಗೊಡು ನ್ಯಾಯಾಲಯ ಸಮುಚ್ಚಯದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಮೂರ್ತಿ ಎಸ್.ಎಚ್.ಪಂಚಾಪಕೇಶನ್ ಶಿಲಾಫಲಕ ಅನಾವರಣಗೊಳಿಸಿದರು. ಅಡೀಷನಲ್ ಜಿಲ್ಲಾ ನ್ಯಾಯಮೂರ್ತಿಗಳಾದ ಟಿ.ಕೆ.ನಿರ್ಮಲಾ, ರಾಜನ್ ತಟ್ಟಿಲ್,ಆರ್.ಎಲ್.ಬೈಜು, ಡಿ.ಎಲ್.ಎ.ಎಸ್.ಎ. ಕಾರ್ಯದರ್ಶಿ ಷುಹೈಬ್, ಕಾಸರಗೋಡು ಬಾರ್ ಅಸೊಸಿಯೇಶನ್ ಅಧ್ಯಕ್ಷ ಅಧ್ಯಕ್ಷ ಎ.ಸಿ.ಅಶೋಕ್ ಕುಮಾರ್,  ಕಾರ್ಯದರ್ಶಿ ಕೆ.ಕರುಣಾಕರನ್ ನಂಬ್ಯಾರ್, ಹೊಸದುರ್ಗ ಬಾರ್ ಅಸೊಸಿಯೆಶನ್‍ಅಧ್ಯಕ್ಷ ಕೆ.ಸಿ.ಶಶೀಂದ್ರನ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries