ತಿರುವನಂತಪುರ: ರಾಜ್ಯ ಸಚಿವಾಲಯದ ಬೆನ್ನಿಗೇ ಮುಖ್ಯಮಂತ್ರಿಯವರ ಅಧಿಕೃತ ನಿವಾಸ (ಕ್ಲಿಪ್ ಹೌಸ್)ದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ವೀಕ್ಷಕರಿಗೆ ಹೊರಗಿಂದ ಅಧಿಕೃತ ನಿವಾಸ ಕಾಣಿಸದಂತೆ ಸುತ್ತಲಿನ ಗೋಡೆಯ ಎತ್ತರವನ್ನು ಹೆಚ್ಚಿಸಬೇಕೆಂದು ಪೆÇಲೀಸರು ಶಿಫಾರಸು ಮಾಡಿದ್ದಾರೆ.
ಯುವ ಕಾಂಗ್ರೆಸ್ ಪ್ರತಿಭಟನಾಕಾರರು ಪೆÇಲೀಸರ ಕಣ್ಣು ತಪ್ಪಿಸಿ ಕ್ಲಿಪ್ ಹೌಸ್ ಗೇಟ್ ಬಳಿ ಬಂದಿರುವ ಘಟನೆಯ ಬಳಿಕ ಭದ್ರತೆಯನ್ನು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಕ್ಲಿಫ್ ಹೌಸ್ ಒಳಗೆ ಮತ್ತು ಹೊರಗೆ ಕಾವಲುಗಾರರ ಸಂಖ್ಯೆಯನ್ನು ಇಮ್ಮಡಿಗೊಳಿಸಲಾಗಿದೆ. ಕಟ್ಟುನಿಟ್ಟಿನ ಪರಿಶೀಲನೆಯ ನಂತರವೇ ವೀಕ್ಷಕರಿಗೆ ದೇವಸ್ವಂ ಬೋರ್ಡ್ ಜಂಕ್ಷನ್‍ನಿಂದ ಕ್ಲಿಫ್ ಹೌಸ್ ರಸ್ತೆಗೆ ಕಳಿಸಲಾಗುತ್ತದೆ.
ಗೋಡೆಯ ಎತ್ತರವನ್ನು ಹೆಚ್ಚಿಸುವುದರ ಜೊತೆಗೆ ಮುಳ್ಳುತಂತಿಯನ್ನು ಸ್ಥಾಪಿಸಲಾಗುತ್ತದೆ ಎಂದು ಪೆÇಲೀಸರು ಹೇಳಿದ್ದಾರೆ. ಪ್ರಸ್ತುತ ಹೊರಗಿನಿಂದ ವೀಕ್ಷಿಸುವವರಿಗೆ ಕ್ಲಿಫ್ ಹೌಸ್ ಸುಲಭವಾಗಿ ನೋಡಲು ಲಭ್ಯವಿದೆ. ಆದರೆ ಇನ್ನದು ಸಾಧ್ಯವಾಗದು.
ಜೊತೆಗೆ ಕ್ಲಿಪ್ ಹೌಸ್ ಗೆ ಚಾಚಿಕೊಂಡಿರುವ ಮರಗಳ ಗೆಲ್ಲುಗಳನ್ನು ಕತ್ತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇದರಿಂದ ಮರದ ಮೂಲಕ ಏರಿ ಕ್ಲಿಪ್ ಹೌಸ್ ಆವರಣದ ಅಕ್ರಮ ಪ್ರವೇಶವನ್ನು ನಿಯಂತ್ರಿಸಲು ಯೋಜಿಸಲಾಗಿದೆ.