ಭಾರತದ ಗ್ರಾಮೀಣ ಮತ್ತು ಅರೆ ನಗರದ ಭಾಗಗಳಲ್ಲಿ ಅಡುಗೆ ಮಾಡಲು ಉರುವಲು ಬಳಸುತ್ತಾರೆ. ಆದರೆ ಈ ಇಂಧನಗಳು ಅಸಮರ್ಥವಾಗಿದ್ದು ಹಾನಿಕಾರಕ ಅನಿಲಗಳನ್ನು ಹೊರಸೂಸುತ್ತವೆ ಎನ್ನುತ್ತಾರೆ ಯುನಿವರ್ಸಿಟಿ ಆಫ್ ಪೆಟ್ರೋಲೊಯಂ & ಎನರ್ಜಿ ಸ್ಟಡೀಸ್(ಯುಪಿಇಎಸ್)ನ ಪ್ರಾಧ್ಯಾಪಕರು ಮತ್ತು ಸಹಾಯಕ ಮುಖ್ಯಸ್ಥರಾಗಿರುವ ಪಂಕಜ್ ಕುಮಾರ್ ಶರ್ಮಾ.
ಈ ಬೆಳವಣಿಗೆ ದೇಶದಲ್ಲಿ ಪರಿಸರ ಸ್ನೇಹಿ ಸಾಧನಗಳಿಗೆ ಬೇಡಿಕೆಯನ್ನುಂಟುಮಾಡಿದೆ. ಇಂಡಕ್ಷನ್ ಒಲೆಗಳು ನೈಸರ್ಗಿಕ ಶಕ್ತಿ ಮೂಲಗಳ ಬಳಕೆಯನ್ನು ಕಡಿಮೆ ಮಾಡಲು ಸಹಾಯಮಾಡುತ್ತವೆಯಾದರು ವಿದ್ಯುತ್ ಸಂಪರ್ಕ ಇಲ್ಲದ ಹಳ್ಳಿಗಳಲ್ಲಿ ಅವು ಇನ್ನೂ ದೂರದ ವಸ್ತುವಾಗಿಯೆ ಉಳಿದಿವೆ.
ಈ ಸಮಸ್ಯೆಗಳಿಗೆ ಪರಿಹಾರ ನೀಡಿ ಸುಸ್ಥಿರ ಹಾದಿಯಲ್ಲಿ ನಡೆಯಲು ಯುಪಿಇಎಸ್ ನೀಲಂ ಎಂಬ ಬಹು ಇಂಧನದ ಅಡಿಗೆ ಒಲೆಯನ್ನು ಪರಿಚಯಿಸಿದೆ. ಇದು ಸಾಂಪ್ರದಾಯಿಕ ಅಥವಾ ಗ್ರಾಮೀಣ ಭಾಗದಲ್ಲಿರುವ ನವೀಕರಿಸಬಹುದಾದ ಶಕ್ತಿಯ ಮೂಲಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ.
ಯುಪಿಇಎಸ್ ಅಭಿವೃದ್ಧಿಪಡಿಸಿರುವ ಪರಿಸರ ಸ್ನೇಹಿ ಒಲೆ
ನೀಲಂ ಬಹು ಇಂಧನದ ನಾವೀನ್ಯ ಒಲೆಯಾಗಿದ್ದು ಇದು ಹಸಿರು ಶಕ್ತಿಯ ಬಳಕೆಯನ್ನು ಉತ್ತೇಜಿಸುತ್ತದೆ ಮತ್ತು ಬೇರೆ ಒಲೆಗಳಿಗೆ ಹೊಲಿಸಿದರೆ ಕಡಿಮೆ ಇಂಗಾಲವನ್ನು ಹೊರಸೂಸುತ್ತದೆ.
ಇದು ನಾಲ್ಕು ಮೋಡ್‌ಗಳಲ್ಲಿ ಕೆಲಸ ಮಾಡುತ್ತದೆ- ಸಂಪೂರ್ಣ ಉರುವಲು, ಸಂಪೂರ್ಣ ಜೈವಿಕ ಅನಿಲ, ಸಂಪೂರ್ಣ ಎಲ್‌ಪಿಜಿ ಮತ್ತು ಸಂಯೋಜನೆ ಮೋಡ್.
“ಇದು ಸಾಂಪ್ರದಾಯಿಕ ಅಥವಾ ಗ್ರಾಮೀಣ ಭಾಗದಲ್ಲಿ ಸಿಗುವ ನವೀಕರಿಸಬಹುದಾದ ಶಕ್ತಿಯ ಮೂಲಗಳ ಮೇಲೆ ಕಾರ್ಯ ನಿರ್ವಹಿಸುವುದೆ ಒಲೆಯ ವಿಶಿಷ್ಟತೆಯಾಗಿದೆ,” ಎನ್ನುತ್ತಾರೆ ಈ ಒಲೆಯನ್ನು ಅಭಿವೃದ್ಧಿಪಡಿಸಿ ಪೇಟೆಂಟ್ ಪಡೆದಿಕೊಂಡಿರುವ ಪಂಕಜ್ ಕುಮಾರ್.ಒಲೆಯ ವೈಶಿಷ್ಟ್ಯಗಳು
ಬಹು ಇಂಧನದ ಒಲೆ ನೀಲಂನಲ್ಲಿ ಎರಡು ದಹನ ಕೊಠಡಿಗಳಿದ್ದು, ಎರಡನ್ನು ಒಂದರ ಮೇಲೊಂದರಂತೆ ಜೋಡಿಸಲಾಗಿದೆ.
“ಕೆಳಗಿನ ದಹನ ಕೊಠಡಿಯಲ್ಲಿ ಘನ ಇಂಧನಗಳಿಂದ ಶಾಖ ಉತ್ಪತ್ತಿ ಮಾಡುವಂತೆ ಮತ್ತು ಮೇಲಿನದರಲ್ಲಿ ತೆಗೆಯಬಹುದಾದ ಹೈಬ್ರಿಡ್ ಬರ್ನರ್ ಕಿಟ್ ಅನ್ನು ಅಳವಡಿಸಲಾಗಿದ್ದು ಅದರಿಂದ ಅನಿಲಗಳು ಅಡಿಗೆಯ ಕೊಳವೆಗೆ ಸಂಚರಿಸುವಂತೆ ಈ ಒಲೆಗಳನ್ನು ವಿನ್ಯಾಸಗೊಳಿಸಲಾಗಿದೆ,” ಎಂದರು ಪಂಕಜ್.ಪಂಕಜ್ ಕುಮಾರ್
“ಹೈಬ್ರಿಡ್ ಬರ್ನರ್ ಕಿಟ್‌ಗೆ ನಿರ್ಬಂಧಕವನ್ನು ಜೋಡಿಸಲಾಗಿದ್ದು ಮೇಲಿನ ದಹನ ಕೊಠಡಿಗೆ ಅಂದರೆ ಅಡಿಗೆ ಪಾತ್ರೆಗೆ ತಾಕುವ ಅನಿಲಗಳನ್ನು ನಿಯಂತ್ರಿಸಬಹುದು,” ಎಂದು ಅವರು ತಿಳಿಸಿದರು.
ಪಂಕಜ್ ಅವರ ಪ್ರಕಾರ ದಹನ ಕ್ರಿಯೆಯಲ್ಲಿ ಉತ್ಪತ್ತಿಯಾಗುವ ಕಾರ್ಬನ್ ಮೊನಾಕ್ಸೈಡ್ ಅನ್ನು ಒಲೆ 85 ರಿಂದ 100 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ಕಾರ್ಬನ್ ಮೊನಾಕ್ಸೈಡ್‌ನ ಪ್ರಮಾಣ ಕಡಿಮೆಯಾದರೆ ಒಲೆಯ ದಹನ ತಾಪಮಾಣ ಹೆಚ್ಚಾಗಿ ಅದರ ಸಂಪೂರ್ಣ ದಕ್ಷತೆ ವೃದ್ಧಿಯಾಗುತ್ತದೆ,” ಎಂದರು ಅವರು.
ಆಗಾಗ ಸ್ವಚ್ಛತೆ ಬೇಡುವ ಒಲೆಯ ದೇಹ ಲೋಹದಿಂದಾಗಿರುವುದರಿಂದ ಅದರ ಉತ್ಪಾದನೆ ವೆಚ್ಚವು ತಗ್ಗುತ್ತದೆ ಮತ್ತು ಅದರ ಬಾಳಿಕೆ ಹೆಚ್ಚಾಗುತ್ತದೆ. ಈ ಒಲೆಯ ಬೆಲೆ ರೂ. 600 ಆಗಿದ್ದು, ಒಲೆ ಇನ್ನೂ ಪರೀಕ್ಷಾ ಹಂತದಲ್ಲಿದ್ದು ಇನ್ನೂ ಒಲೆಗೆ ಯಾವುದೇ ರೀತಿಯ ಹೆಚ್ಚುವರಿ ಫಂಡಿಂಗ್ ಸಿಕ್ಕಿಲ್ಲ.
ಪರಿಣಾಮ
“ನಾವು ಈ ಯೋಜನೆಯನ್ನು ಪ್ರಾರಂಭಿಸಿದಾಗ ಉತ್ತರಾಖಂಡದ ಪಿಥೋರಗರ್ ಜಿಲ್ಲೆಯಲ್ಲಿರುವ ಕುಟುಂಬಳಿಗೆ ಈ ಒಲೆ ನೀಡಿದೆವು. ಪ್ರಸ್ತುತ ನಾವು ಒಲೆಯ ಎರಡನೆ ಆವೃತ್ತಿಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಬೇಗನೆ ಉರಿಯುವ ಮತ್ತು ಉತ್ತರಾಖಂಡದಲ್ಲಿ ಕಾಡ್ಗಿಚ್ಚಿಗೆ ಮುಖ್ಯವಾಗಿ ಕಾರಣವಾಗುವ ಪೈನ್ ಸೂಜಿಗಳನ್ನು ಬಳಸಿಕೊಂಡು ನಾವು ಇನ್ನೊಂದು ಒಲೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ,” ಎಂದರು ಪಂಕಜ್.“ಒಮ್ಮೆ ಅದನ್ನು ತಯಾರಿಸಿ ಮೂಲಮಾದರಿಯನ್ನು ಪರೀಕ್ಷಿಸಿದರೆ, ಹೆಚ್ಚಿನ ಒಲೆಗಳನ್ನು ತಯಾರಿಸಿ ಬೆಟ್ಟಗುಡ್ಡಗಳ ಹಳ್ಳಿಗಳಿಗೆ ಅವುಗಳನ್ನು ಕಳುಹಿಸುವ ಉದ್ದೇಶ ಹೊಂದಿದ್ದೇವೆ,” ಎಂದು ಅವರು ತಿಳಿಸಿದರು.
ಎಲ್‌ಪಿಜಿ, ಜೈವಿಕ ಅನಿಲ ಮತ್ತು ಉರುವಲುಗಳಿಂದ ಏಕಕಾಲದಲ್ಲಿ ಕಾರ್ಯನಿರ್ವಹಿಸುವ ಮೊದಲ ಒಲೆಯಾದ ನೀಲಂ ದೂರದ ಪ್ರದೇಶಗಳಿಗೆ ಸಾಗಿ ಇಂಧನ ಸಂಗ್ರಹಿಸುವ ಜನರ ವಿಶೇಷವಾಗಿ ಮಹಿಳೆಯರ ಕಷ್ಟವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ಒಲೆ ನಾಲ್ಕು ಮೋಡ್‌ಗಳಲ್ಲಿ ಕೆಲಸ ಮಾಡುತ್ತದೆ- ಸಂಪೂರ್ಣ ಉರುವಲು, ಸಂಪೂರ್ಣ ಜೈವಿಕ ಅನಿಲ, ಸಂಪೂರ್ಣ ಎಲ್‌ಪಿಜಿ ಮತ್ತು ಸಂಯೋಜನೆ ಮೋಡ್.
ಹಳ್ಳಿ ಪ್ರದೇಶಗಳಲ್ಲಿ ಮಾಲಿನ್ಯವನ್ನು ಮತ್ತು ಜನರ ಆರೋಗ್ಯದ ಮೇಲೆ ಉಂಟಾಗುವ ಅಪಾಯಕಾರಿ ಪರಿಣಾಮಗಳನ್ನು ಕಡಿಮೆ ಮಾಡುವ ಮೂಲಕ ಅಡಿಗೆ ಮಾಡುವ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಅದು ಹೊಂದಿದೆ.
“ಗ್ರಾಮೀಣ ಪ್ರದೇಶಗಳಲ್ಲಿಯೂ ಸರ್ಕಾರ ಎಲ್‌ಪಿಜಿ ನೀಡುತ್ತಿರುವುದು ಮತ್ತು ಇತರ ಇಂಧನಗಳು ಹಳ್ಳಿಯಲ್ಲಿ ಸುಲಭವಾಗಿಯೆ ಸಿಗುವುದರಿಂದ ಈ ಒಲೆ ಇಂಧನವನ್ನು ಉಳಿಸಲು ಮತ್ತು ಪರಿಸರವನ್ನು ರಕ್ಷಣೆ ಮಾಡಲು ಸಹಾಯ ಮಾಡುತ್ತದೆ,” ಎನ್ನುತ್ತಾರೆ ಪಂಕಜ್.
ಅವರಿಗೆ ಎದುರಾದ ಸವಾಲುಗಳ ಬಗ್ಗೆ ಮಾತನಾಡುತ್ತಾ, ಒಂದೆ ಒಲೆಯಲ್ಲಿ ವಿವಿಧ ರೀತಿಯ ಅನಿಲಗಳ ಮೇಲೆ ಕೆಲಸ ಮಾಡುವಂತೆ ಒಲೆಯನ್ನು ಜೋಡಿಸುವುದು ಕಷ್ಟದ ಕೆಲಸವಾಗಿತ್ತು ಮತ್ತು ಸಂಶೋಧನಾ ಸಮಯದಲ್ಲಿ ತುಂಬಾ ಯೋಚಿಸಿ ಒಲೆಯನ್ನು ತಯಾರಿಸಬೇಕಿತ್ತು ಎಂದರು ಅವರು.
ಮುಂದಿನ ಹಾದಿ
ಒಲೆಯನ್ನು ಹಲವು ಪ್ರದೇಶಗಳಲ್ಲಿ ನಿಯೋಜಿಸುವದರ ಜತೆಗೆ ದೊಡ್ಡ ಯೋಜನೆಗಾಗಿ ಅವರು ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನೋಡುತ್ತಿದ್ದಾರೆ.
“ಮಧ್ಯಾಹ್ನದ ಊಟ ತಯಾರಿಸಲು ಸರ್ಕಾರಿ ಶಾಲೆಗಳಲ್ಲಿ ಈ ಒಲೆಗಳನ್ನು ನಿಯೋಜಿಸುವಂತೆ ಗ್ರಾಮೀಣ ಅಭಿವೃದ್ಧಿ ಸಚಿವಾಲಯದೊಂದಿಗೆ ನಾವು ಮಾತುಕತೆ ನಡೆಸಿದ್ದೇವೆ. ಅದರ ಜತೆಗೆ ಒಲೆಯಲ್ಲಿ ಇಂಧನವಾಗಿ ಬಳಸುವಂತಹ ಇತರ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆಯು ನಾವು ಸಂಶೋಧನೆ ನಡೆಸುತ್ತಿದ್ದೇವೆ,” ಎಂದರು ಪಂಕಜ್.“ಗ್ರಾಮೀಣ ಉದ್ಯಮಶೀಲತೆಯು ಮೇಲೆ ಗಮನ ಹರಿಸುತ್ತಾ, ನಾವು ಹಳ್ಳಿಯಲ್ಲಿರುವ ಮಹಿಳೆಯರನ್ನು ಮತ್ತು ಗಂಡಸರನ್ನು ಈ ಒಲೆ ನಿರ್ಮಿಸಲು ತರಬೇತಿ ನೀಡಿ ಉತ್ಪನ್ನದ ವ್ಯಾಪ್ತಿಯನ್ನು ಮತ್ತು ಉತ್ಪಾದನೆಯನ್ನು ಹೆಚ್ಚಿಸಬಹುದು,” ಎನ್ನುತ್ತಾ ಅವರು ತಮ್ಮ ಮಾತನ್ನು ಮುಗಿಸುತ್ತಾರೆ.
(ಸಾಂದರ್ಭಿಕ ಚಿತ್ರ)