ತಿರುವನಂತಪುರ: ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ವಿರುದ್ಧ ಮಹಿಳಾ ಆಯೋಗ ಪ್ರಕರಣ ದಾಖಲಿಸಿದೆ. ಮಹಿಳಾ ವಿರೋಧಿ ಟೀಕೆಗಳೊಂದಿಗೆ ರಾಜಕೀಯ ನಾಯಕರು ನಿರಂತರವಾಗಿ ಹೇಳಿಕೆ ನೀಡುತ್ತಿರುವುದು ಸಾಂಸ್ಕøತಿಕ ಕೇರಳಕ್ಕೆ ಮಾಡಿದ ಅವಮಾನ ಎಂದು ಮಹಿಳಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ.ಜೋಸೆಫೀನ್ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿರುವರು.
ಇಂತಹ ಹುಂಬರನ್ನು ನಿಯಂತ್ರಿಸುವ ಶಕ್ತಿ ರಾಜಕೀಯ ಕೇರಳಕ್ಕೆ ಇರಬೇಕು. ರಾಜಕೀಯ ದ್ವೇಷದ ಹೆಸರಿನಲ್ಲಿ ಕೇರಳದ ಜನ್ಮದಿನದಂದು ಮಹಿಳೆಯರ ವಿರುದ್ಧ ಕೆಟ್ಟ ಟೀಕೆಗಳನ್ನು ಅನುಮತಿಸಬಾರದು ಎಂದು ಮಹಿಳಾ ಆಯೋಗ ಸ್ಪಷ್ಟಪಡಿಸಿದೆ.
ಅತ್ಯಾಚಾರಕ್ಕೊಳಗಾದ ಸ್ವಾಭಿಮಾನಿ ಮಹಿಳೆ ಸಾಯುತ್ತಾಳೆ ಎಂದು ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದರ ವಿರುದ್ದ ರಾಜ್ಯಾದ್ಯಂತ ಸಂಚಲನ ಸೃಷ್ಟಿಯಾಗಿದೆ. ಸರ್ಕಾರದ ವಿರುದ್ದ ನಿನ್ನೆ ಯುಡಿಎಫ್ ಸಂಘಟಿಸಿದ್ದ ದ್ರೋಹ ದಿನ ಕಾರ್ಯಕ್ರಮದ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುವಾಗ ಮುಲ್ಲಪ್ಪಳ್ಳಿ ಅವರು ಮಹಿಳೆಯರನ್ನು ನಿಂದಿಸಿದ್ದಾಗಿ ಭಾರೀ ವಿವಾದ ಸೃಷ್ಟಿಯಾಗಿದೆ.