ಕಾಸರಗೋಡು: ಕಾರಡ್ಕ ಬ್ಲಾಕ್ ಪಂಚಾಯತ್ ನಲ್ಲಿ ಹಸುರು ದ್ವೀಪ ಯೋಜನೆ ಅಂಗವಾಗಿ "ನೆನಪಿನ ಹಸುರು ದ್ವೀಪ" ಎಂಬ ಹೆಸರಿನಲ್ಲಿ ಹಣ್ಣು ಕೊಡುವ ಮರವಾಗಬಲ್ಲ ಸಸಿಗಳನ್ನು ನೆಡಲಾಯಿತು. ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಓಮನಾ ರಾಮಚಂದ್ರನ್ ಉದ್ಘಾಟಿಸಿದರು. ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಕೆ.ಗೋಪಾಲನ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಉಷಾ ಕೆ., ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಬಿಂದು ಶ್ರೀಧರನ್, ಉಪಾಧ್ಯಕ್ಷ ಸಿ.ಕೆ.ಕುಮಾರನ್, ಸದಸ್ಯರಾದ ವಾರಿಜಾಕ್ಷನ್.ಕೆ., ಶ್ರಿಧರ ಎಂ., ಸುಂದರ ಶ್ರೀಮತಿ ಕೆ.ಟಿ.ಶಾಲಿನಿ, ಲಿಲ್ಲಿ ಥಾಮಸ್, ಸತ್ಯಾವತಿ, ವತ್ಸಲಾ ಜೆ., ಶಂಕರ ಎಚ್., ಸಿ.ಡಿ.ಪಿ.ಒ.ಸಜಿತಾ ಉಪಸ್ಥಿತರಿದ್ದರು.